ವಿಶಿಷ್ಟತೆಗೆ ಬಗ್ಗೆ ತಪ್ಪು ಮಾಹಿತಿ: ಕ್ಷಮೆಯಾಚಿಸಿದ ಟ್ರಯಂಪ್

By Nagaraja

ನಿರ್ವಹಣೆಗೆ ಸಂಬಂಧಿಸಿದಂತೆ ಗ್ರಾಹಕರಲ್ಲಿ ತಪ್ಪಾದ ಮಾಹಿತಿ ಸೃಷ್ಟಿಸಿರುವುದಕ್ಕೆ ಬ್ರಿಟನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟ್ರಯಂಪ್ ಕ್ಷಮೆಯಾಚಿಸಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಪರಿಗಣಿಸಿದಾಗ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಗರಿಷ್ಠ ನಿರ್ವಹಣೆಯ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ದೇಶದ ಟ್ರಯಂಪ್ ಮಾಲಿಕರಿಗೆ ತಪ್ಪು ಸಂದೇಶ ನೀಡುವುದಕ್ಕೆ ಟ್ರಯಂಪ್ ಇಂಡಿಯಾ ಕ್ಷಮಯಾಚನೆ ನಡೆಸಿದ್ದಾರೆ.

triumph

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಟ್ರಯಂಪ್ ಸಂಸ್ಥೆಯು ಇದು ಇಯು ವಿಶೇಷತೆಗೆ ಸಂಬಂಧಿಸಿದಂತೆ ಉಂಟಾಗಿರುವ ತಪ್ಪಾಗಿದ್ದು, ನಾವು ನಮ್ಮ ಗ್ರಾಹಕರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೆ ಟ್ರಯಂಪ್ ಸದಾ ಪಾರದರ್ಶಕತೆ ಮೆರೆಯುವುದಾಗಿ ತಿಳಿಸಿದೆ.

ತಪ್ಪಾದ ವಿಶಿಷ್ಟತೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಟ್ರಯಂಪ್ ಫೇಸ್‌ಬುಕ್ ಪುಟದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಟ್ರಯಂಪ್ ಮೋಟಾರುಸೈಕಲ್ಸ್

ಟ್ರಯಂಪ್ ಬೊನೆವಿಲ್

ಭಾರತ ಮಾದರಿ ನಿರ್ವಹಣೆ
61 PS @ 7500 RPM
61 Nm @ 5550 RPM

ಬ್ರಿಟನ್ ಮಾದರಿ ನಿರ್ವಹಣೆ
69 PS @ 7500 RPM
68 Nm @ 5800 RPM


ಟ್ರಯಂಪ್ ಸ್ಟ್ರೀಟ್ ಟ್ರಿಪಲ್

ಭಾರತ ಮಾದರಿ ನಿರ್ವಹಣೆ
79 PS @ 11,050 RPM
57 Nm @ 8375 RPM

ಬ್ರಿಟನ್ ಮಾದರಿ ನಿರ್ವಹಣೆ
106 PS @ 11,850 RPM
68 Nm @ 9750 RPM

ಟ್ರಂಯಪ್ ಸ್ಪೀಡ್ ಟ್ರಿಪಲ್

ಭಾರತ ಮಾದರಿ ನಿರ್ವಹಣೆ
127 PS @ 9300 RPM
105 Nm @ 7800 RPM

ಬ್ರಿಟನ್ ಮಾದರಿ ನಿರ್ವಹಣೆ
134 PS @ 9400 RPM
111 Nm @ 7750 RPM

ಟ್ರಯಂಪ್ ಡೇಟೋನಾ 675

ಭಾರತ ಮಾದರಿ ನಿರ್ವಹಣೆ
118 PS @ 12,300 RPM
70 Nm @ 9900 RPM

ಬ್ರಿಟನ್ ಮಾದರಿ ನಿರ್ವಹಣೆ
128 PS @ 12,500 RPM
74 Nm @ 11,900 RPM

ಟ್ರಯಂಪ್ ಡೇಟೋನಾ 675ಆರ್

ಭಾರತ ಮಾದರಿ ನಿರ್ವಹಣೆ
118 PS @ 12,300 RPM
70 Nm @ 9900 RPM

ಬ್ರಿಟನ್ ಮಾದರಿ ನಿರ್ವಹಣೆ
131 PS @ 12,500 RPM
74 Nm @ 9750 RPM

Most Read Articles

Kannada
English summary
Triumph Apologize For Selling Bikes With Wrong Specifications
Story first published: Saturday, December 6, 2014, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X