ಹೊಸ ಬೈಕ್ ಬಿಡುಗಡೆ ಮಾಡಲಿರುವ ಟ್ರಯಂಪ್

Written By:

ಭಾರತೀಯ ಮಾರುಕಟ್ಟೆ ಎಂಟ್ರಿ ಕೊಟ್ಟಿರುವ ಟ್ರಯಂಪ್ ಮಗದೊಂದು ಆಕರ್ಷಕ ಬೈಕ್ ಇನ್ನೇನು ಕೆಲವೇ ದಿನಗಳಲ್ಲಿ ಪರಿಚಯಿಸಲಿದೆ. ಹೌದು, ಟ್ರಯಂಪ್ ಹೊಸ ಮುಂಬರುವ ಸೆಪ್ಟೆಂಬರ್ 18ರಂದು ಬಿಡುಗಡೆಯಾಗಲಿದೆ.

ಆದರೆ ಟ್ರಯಂಪ್ ಹೊಸ ಬೈಕ್ ಯಾವುದೆಂಬುದನ್ನು ಸಂಸ್ಥೆಯು ಇನ್ನು ಗೌಪ್ಯವಾಗಿಟ್ಟುಕೊಂಡಿದೆ. ದೇಶದಲ್ಲಿ ಅತ್ಯಂತ ಶಕ್ತಿಶಾಲಿ ಬೈಕ್ ಒದಗಿಸುತ್ತಿರುವ ಟ್ರಯಂಪ್ ಇಂಡಿಯಾ, 250ಸಿಸಿ ಬೈಕ್ ಬಿಡುಗಡೆ ಮಾಡಿದರೂ ಅಚ್ಚರಿಪಡಬೇಕಾಗಿಲ್ಲ. [ಟ್ರಯಂಪ್ ಬೈಕ್ ಪಟ್ಟಿ ನೋಡಿ]

Triumph India

ಟ್ರಯಂಪ್ ಹೊಸ ಮಾದರಿ ಯಾವುದು ಎಂಬ ಕುತೂಹಲ ವಾಹನ ಪ್ರೇಮಿಗಳಲ್ಲಿ ಮಡುಗಟ್ಟಿ ನಿಂತಿದೆ. ಟ್ರಯಂಪ್ ಬಿಡುಗಡೆ ಮಾಡಿರುವ ಚಿತ್ರ ನೋಡಿದಾಗ ಇದೊಂದು ಕ್ರೂಸರ್ ಬೈಕ್ ಎಂಬುದು ಸ್ಪಷ್ಟವಾಗುತ್ತದೆ.

ಪ್ರಸ್ತುತ ಟ್ರಯಂಪ್ ಸಂಸ್ಥೆಯು ಭಾರತದಲ್ಲಿ ಬೊನ್‌ವಿಲ್, ಬೊನ್‌ವಿಲ್ ಟಿ100, ಥ್ರಕ್ಸ್ಟನ್, ಸ್ಟ್ರೀಮ್ ಟ್ರಿಪಲ್, ಸ್ಪೀಡ್ ಟ್ರಿಪಲ್, ಡೇಟೋನಾ 675, ಡೇಟೋನಾ 675 ಆರ್, ಟ್ರಿಗರ್ 800 ಆರ್‌ಸಿ, ಟ್ರಿಗರ್ ಎಕ್ಸ್‌ಪ್ಲೋರರ್, ಥಂಡರ್ ಬರ್ಡ್ ಸ್ಟ್ರೋಮ್ ಮತ್ತು ರಾಕೆಟ್ III ರೋಡ್‌ಸ್ಟರ್ ಮಾದರಿಗಳನ್ನು ಒದಗಿಸುತ್ತಿದೆ. ಇವೆಲ್ಲವೂ 5.94 ಲಕ್ಷ ರು.ಗಳಿಂದ 20.85 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.

ಟ್ರಯಂಪ್ ಬೈಕ್‌ಗಳು ಕಂಪ್ಲೀಟ್ ನಾಕ್ಡ್ ಡೌನ್ ಮತ್ತು ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತ ಪ್ರವೇಶವಾಗುತ್ತಿದೆ. ಒಟ್ಟಿನಲ್ಲಿ ಹೊಸ ಬೈಕ್‌ನ ಕುರಿತಂತೆ ಹೆಚ್ಚಿನ ಮಾಹಿತಿಗಳು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ.

English summary
Triumph India Launching New Motorcycle On 18th September, 2014
Story first published: Friday, September 12, 2014, 16:05 [IST]
Please Wait while comments are loading...

Latest Photos