ಗಮನಾರ್ಹ ಬದಲಾವಣೆಯೊಂದಿಗೆ ಟಿವಿಎಸ್ ಫೀನಿಕ್ಸ್ ಲಾಂಚ್

Written By:

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಟಿವಿಎಸ್, ಗಮನಾರ್ಹ ಬದಲಾವಣೆಗಳೊಂದಿಗೆ ತನ್ನ ಜನಪ್ರಿಯ ಫೀನಿಕ್ಸ್ 125 ಸಿಸಿ ಬೈಕ್ ಪರಿಚಯಿಸಿದೆ. ಇದು ಇದೇ ವಿಭಾಗದಲ್ಲಿ ಮಾರುಕಟ್ಟೆಯಲ್ಲಿರುವ ಹೋಂಡಾ ಸಿಬಿ ಶೈನ್, ಹೀರೊ ಗ್ಲಾಮರ್ ಮತ್ತು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಯಮಹಾ ಸೆಲ್ಯುಟೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಅಷ್ಟಕ್ಕೂ ಹೊಸ ಟಿವಿಎಸ್ ಫೀನಿಕ್ಸ್ ಬೈಕ್ ನಲ್ಲಿ ಕಂಡುಬಂದಿರುವ ವಿಶಿಷ್ಟತೆಗಳೇನು ? ಮೈಲೇಜ್ ಎಷ್ಟು ಕೊಡುತ್ತೇ ? ಬೆಲೆ ಎಷ್ಟಾಗಿರಬಹುದು? ಎಂಬಿತ್ಯಾದಿ ಮಹತ್ವದ ವಿಚಾರಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ಕೊಡಲಾಗುವುದು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೇಸ್ ಡ್ರಮ್ ಬ್ರೇಕ್ - 55,125 ರು.

ಡಿಸ್ಕ್ ಬ್ರೇಕ್ - 57,225 ರು.

ಎಂಜಿನ್

ಎಂಜಿನ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಇದರ 124.5 ಸಿಸಿ ಇಕೊಥ್ರಸ್ಟ್ ಎಂಜಿನ್ 11 ಅಶ್ವಶಕ್ತಿ ಉತ್ಪಾದಿಸಲಿದ್ದು, 4 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ವಿನ್ಯಾಸ

ವಿನ್ಯಾಸ

ಮೊದಲ ನೋಟದಲ್ಲೇ ಹೆಚ್ಚಿನ ಆಕರ್ಷಣೆಗಾಗಿ ಹೊರಮೈಯಲ್ಲಿ ಹೆಚ್ಚಿನ ಅಂದತೆಯನ್ನು ತರುವ ಪ್ರಯತ್ನ ಮಾಡಲಾಗಿದೆ. ಈ ನಿಟ್ಟಿನಲ್ಲಿ ತ್ರಿಡಿ ಫೀನಿಕ್ಸ್ ಲಾಂಛನ, ಪರಿಷ್ಕೃತ ಟ್ಯಾಂಕ್ ಹಾಗೂ ಹೊಸ ಬಾಡಿ ಗ್ರಾಫಿಕ್ಸ್ ಕಂಡುಬಂದಿದೆ.

ಪೈಲಟ್ ಲ್ಯಾಂಪ್

ಪೈಲಟ್ ಲ್ಯಾಂಪ್

ಇಲ್ಲಿಗೆ ಅಂತ್ಯವಾಗುವುದಿಲ್ಲ. ನೂತನ ಟಿವಿಎಸ್ ಫೀನಿಕ್ಸ್ ಬೈಕ್ ನಲ್ಲಿ ಟ್ವಿನ್ ಎಲ್ ಇಡಿ ಪೈಲಟ್ ಲ್ಯಾಂಪ್ ಸೇವೆಯಿರಲಿದೆ.

ಡಿಜಿಟಲ್ ಇನ್ಸ್ಟ್ರಮೆಂಟ್ ಕ್ಲಸ್ಟರ್

ಡಿಜಿಟಲ್ ಇನ್ಸ್ಟ್ರಮೆಂಟ್ ಕ್ಲಸ್ಟರ್

ಹೋಂಡಾ ಶೈನ್ ಮಾದರಿಯನ್ನು ಎಲ್ಲ ಹಂತದಲ್ಲೂ ಮೀರಿಸಲು ಹೊರಟಿರುವ ಟಿವಿಎಸ್, ಡಿಟಿಜಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇವೆ ನೀಡುತ್ತಿದೆ.

ವಿಶೇಷತೆ

ವಿಶೇಷತೆ

ಸ್ಟ್ಲೈಲಿಷ್ ಹೊಸ ಟ್ಯಾಂಕ್, ತ್ರಿಡಿ ಲಾಂಛನ, ಬಾಡಿ ಗ್ರಾಫಿಕ್ಸ್

ಡಿಸಿ ಹೆಡ್ ಲ್ಯಾಂಪ್,

ಕ್ಯಾನಿಸ್ಟರ್ ಶಾಕ್ ಅಬ್ಸಾರ್ಬರ್,

ಇಕೊಥ್ರಸ್ಟ್ ಎಂಜಿನ್

ವೆಹಿಕಲ್ ಲೋಕಷನ್ ಅಸಿಸ್ಟನ್ಸ್,

ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್

ವಿಶೇಷತೆ

ವಿಶೇಷತೆ

ವೆಹಿಕಲ್ ಲೋಕಟರ್ ಕೀ,

ಟ್ಯೂಬ್ ಲೆಸ್ ಚಕ್ರ,

ಹಜಾರ್ಡ್ ಲ್ಯಾಂಪ್,

ಸಹ ಸವಾರರಿಗೆ ದೇಹ ಬಣ್ಣದ ಗ್ರಾಬ್ ರೈಲ್,

ಕಪೌಂಡ್ ಪ್ಯಾಡಡ್ ಸೀಟು,

ಡಿಸಿ ಹೆಡ್ ಲ್ಯಾಂಪ್

ರೊಟೊ ಪೆಡಲ್ ಡಿಸ್ಕ್ ಬ್ರೇಕ್

ಮೈಲೇಜ್

ಮೈಲೇಜ್

ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಹೊಸ ಟಿವಿಸ್ ಫೀನಿಕ್ಸ್ ಪ್ರತಿ ಲೀಟರ್ ಗೆ 67 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

 ಆಯಾಮ

ಆಯಾಮ

ಉದ್ದ - 1985 ಎಂಎಂ

ಎತ್ತರ - 1065 ಎಂಎಂ

ಅಗಲ - 70 ಎಂಎಂ

ಚಂಕ್ರಾಂತರ - 1265 ಎಎಂಎಂ

ಕರ್ಬ್ ಭಾರ ಡ್ರಮ್/ಡಿಸ್ಕ್ - 114/116 ಕೆ.ಜಿ

ಗ್ರೌಂಡ್ ಕ್ಲಿಯರನ್ಸ್ - 165 ಎಂಎಂ

ಇಂಧನ ಟ್ಯಾಂಕ್

ಇಂಧನ ಟ್ಯಾಂಕ್

ಸಾಮರ್ಥ್ಯ 12 ಲೀಟರ್,

ರಿಸರ್ವ್ 2 ಲೀಟರ್

ಸಸ್ಪೆನ್ಷನ್

ಸಸ್ಪೆನ್ಷನ್

ಮುಂಭಾಗ - ಟೆಲಿಸ್ಕಾಪಿಕ್ ಒಯಿಲ್ ಡ್ಯಾಂಪ್ಡ್

ಹಿಂಭಾಗ - ಟ್ವಿನ್, 5 ವಿಧದಲ್ಲಿ ಹೊಂದಾಣಿಸಬಹುದಾದ ಮೊನೊಟ್ಯೂಬ್ ಇನ್ವರ್ಟಡ್ ಗ್ಯಾಸ್ (ಮಿಗ್) ಫಿಲ್ಡ್ ಕ್ಯಾನಿಸ್ಟರ್ ಶಾಕ್ಸ್ ಜೊತೆ ಸಿರೀಸ್ ಸ್ಪ್ರಿಂಗ್ಸ್

ಬಣ್ಣಗಳು

ಬಣ್ಣಗಳು

ಚೆರ್ರಿ ವೈಟ್,

ವೈಟ್ ನೈಟ್,

ರೆಡ್ ಹಾಟ್,

ಕ್ರಿಸ್ಮನ್ ಬ್ಲ್ಯಾಕ್,

ಬ್ಲ್ಯಾಕ್ ಮ್ಯಾಜಿಕ್,

ಮಿಡ್ ನೈಟ್ ಬ್ಲ್ಯಾಕ್

2015 ಟಿವಿಎಸ್ ಫೀನಿಕ್ಸ್ 125 ಸಿಸಿ ಬೈಕ್ ವೀಡಿಯೋ ವೀಕ್ಷಿಸಿ

 

English summary
All new 2015 TVS Phoenix 125 launched in India

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark