ಹೊಸ ಪಲ್ಸರ್ ಆರ್ ಎಸ್200 ಭರ್ಜರಿ ಲಾಂಚ್; 10 ವಿಶಿಷ್ಟತೆಗಳೇನು?

By Nagaraja

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ, ನಂ.1 ಕ್ರೀಡಾ ಬೈಕ್ ಆಗಿರುವ ಪಲ್ಸರ್ ನ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಅದುವೇ ಬಜಾಜ್ ಪಲ್ಸರ್ ಆರ್ ಎಸ್200. ಇದು ಬಜಾಜ್ ನಿಂದ ಆಗಮನವಾಗಿರುವ ಅತಿ ವೇಗದ ಪಲ್ಸರ್ ಬೈಕಾಗಿದೆ.

ಆರಂಭಿಕ ಬೆಲೆ: 1.18 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಕಳೆದ ಹಲವಾರು ವರ್ಷಗಳಲ್ಲಿ ದೇಶದ ಕ್ರೀಡಾ ವಾಹನ ಪ್ರೇಮಿಗಳ ಅಚ್ಚುಮೆಚ್ಚಿನ ಬೈಕ್ ಎನಿಸಿಕೊಂಡಿರುವ ಹೊಸ ಪಲ್ಸರ್ ಆರ್ ಎಸ್200 ಬೈಕ್ ನ 10 ವಿಶಿಷ್ಟತೆಗಳೇನು? ಈ ಬಗ್ಗೆ ತಿಳಿದುಕೊಳ್ಳಲು ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

10. ಬ್ರೇಕ್, ಸಸ್ಪೆನ್ಷನ್, ಅಲಾಯ್ ವೀಲ್

10. ಬ್ರೇಕ್, ಸಸ್ಪೆನ್ಷನ್, ಅಲಾಯ್ ವೀಲ್

ಪಲ್ಸರ್ ಆರ್ ಎಸ್ 200 ಮುಂದುಗಡೆ 300ಎಂಎಂ ಡಿಸ್ಕ್ ಹಾಗೂ ಹಿಂದುಗಡೆ 230 ಎಂಎಂ ಡಿಸ್ಕ್ ಬ್ರೇಕ್ ಪಡೆಯಲಿದೆ. ಅಂತೆಯೇ 10 ಸ್ಪೋಕ್ ಅಲಾಯ್ ವೀಲ್ ಗಳ ಜೊತೆಗೆ ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಮತ್ತು ಹಿಂಭಾಗದಲ್ಲಿ ಮೊನೊ ನಿಟ್ರೊ ಶಾಕ್ ಸಸ್ಫೆನ್ಷೆನ್ ಜೋಡಣೆಯನ್ನು ಪಡೆಯಲಿದೆ.

09. ಸುರಕ್ಷತೆ

09. ಸುರಕ್ಷತೆ

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್ ಮಾದರಿಯಲ್ಲೂ ಹೊಸ ಪಲ್ಸರ್ ದೊರಕಲಿದೆ.

08. ಮೀಟರ್ ಕನ್ಸಾಲ್

08. ಮೀಟರ್ ಕನ್ಸಾಲ್

ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಡಿಜಿಟಲ್ ಮೀಟರ್ ಕನ್ಸಾಲ್ ಅನ್ನು ಪ್ರದಾನ ಮಾಡಲಾಗಿದೆ. ಇದರ ಬಳಕೆ ಸರಳವಾಗಿರಲಿದೆ.

07. ಎಂಜಿನ್

07. ಎಂಜಿನ್

ನೂತನ ಪಲ್ಸರ್ ಆರ್ ಎಸ್200 ಡಿಟಿಎಸ್-ಐ 199.5 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, 24 ಅಶ್ವಶಕ್ತಿ (18.6 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

06. ಫುಲ್ ಫೇರ್ಡ್ ವರ್ಷನ್

06. ಫುಲ್ ಫೇರ್ಡ್ ವರ್ಷನ್

ಸಂಸ್ಥೆಯು ಈ ಮೊದಲೇ ಪ್ರಕಟಿಸಿರುವಂತೆಯೇ ಹೊಸ ಪಲ್ಸರ್ ಫುಲ್ ಫೇರ್ಡ್ ವರ್ಷನ್ ಇನ್ನು ಹೆಚ್ಚಿನ ಕ್ರೀಡಾ ಪ್ರೇಮಿಗಳನ್ನು ಆಕರ್ಷಿಸುವ ನಿರೀಕ್ಷೆಯಲ್ಲಿದೆ.

05. ಟ್ವಿನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್

05. ಟ್ವಿನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್

ಮುಂದುಗಡೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಡೇಟೈಮ್ ರನ್ನಿಂಗ್ ಹೆಲ್ ಲ್ಯಾಂಪ್ ಗಳು ಹೊಸ ಪಲ್ಸರ್ ಗೆ ಆಕರ್ಷಣೆ ತುಂಬಲಿದೆ.

04. ಕ್ರೈಸ್ಟಲ್ ಎಲ್ ಇಡಿ ಟೈಲ್ ಲ್ಯಾಂಪ್

04. ಕ್ರೈಸ್ಟಲ್ ಎಲ್ ಇಡಿ ಟೈಲ್ ಲ್ಯಾಂಪ್

ವಿಶಿಷ್ಟ ವಿನ್ಯಾಸಕ್ಕೆ ಒತ್ತು ಕೊಟ್ಟಿರುವ ಪಲ್ಸರ್ ಆಧುನಿಕತೆಗೆ ತಕ್ಕಂತೆ ಹಿಂದುಗಡೆ ವಿಶೇಷ ಕ್ರೈಸ್ಟಲ್ ಎಲ್ ಇಡಿ ಟೈಲ್ ಲ್ಯಾಂಪ್ ಪಡೆಯಲಿದೆ.

03. ಆಕ್ರಮಣಕಾರಿ ಮಸಲರ್ ಶೈಲಿ

03. ಆಕ್ರಮಣಕಾರಿ ಮಸಲರ್ ಶೈಲಿ

ಆಕ್ರಮಣಕಾರಿ ಮಸಲರ್ ವಿನ್ಯಾಸವನ್ನು ಹೊಸ ಪಲ್ಸರ್ ಆರ್ ಎಸ್200 ಪಡೆದುಕೊಳ್ಳಲಿದೆ. ಅಲ್ಲದೆ ಬದಿಯಲ್ಲಿ 'ರೇಸ್ ಸ್ಪೋರ್ಟ್' ಎಂಬ ವಿಶೇಷ ಗ್ರಾಫಿಕ್ಸ್ ಅನ್ನು ಪಡೆಯಲಿದೆ.

02. ಅತಿ ವೇಗದ ಪಲ್ಸರ್ ಬೈಕ್

02. ಅತಿ ವೇಗದ ಪಲ್ಸರ್ ಬೈಕ್

ಇದು ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ ನ ಅತಿ ವೇಗದ ಆವೃತ್ತಿಯಾಗಿರಲಿದೆ. ಇದು ಗಂಟೆಗೆ ಗರಿಷ್ಠ 141 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

01. ಸ್ಪರ್ಧಾತ್ಮಕ ಬೆಲೆ (ಎಕ್ಸ್ ಶೋ ರೂಂ ದೆಹಲಿ)

01. ಸ್ಪರ್ಧಾತ್ಮಕ ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಬಜಾಜ್ ಪಲ್ಸರ್ ಆರ್ ಎಸ್200 ಸ್ಟ್ಯಾಂಡರ್ಡ್: 1,18,000 ರು.

ಬಜಾಜ್ ಪಲ್ಸರ್ ಆರ್ ಎಸ್200 ಎಬಿಎಸ್: 1,30,000 ರು.

ಹೊಸ ಪಲ್ಸರ್ ಆರ್ ಎಸ್200 ಭರ್ಜರಿ ಲಾಂಚ್; 10 ವಿಶಿಷ್ಟತೆಗಳು

ಒಟ್ಟಿನಲ್ಲಿ ಕೆಟಿಎಂ ಆರ್ ಸಿ 200 ಮಾದರಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಪಲ್ಸರ್ ಆರ್ ಸಿ 200 ಭಾರತೀಯ ರಸ್ತೆಯಲ್ಲಿ ಯಶ ಕಂಡಿತೇ? ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಿರಿ...


Most Read Articles

Kannada
English summary
Bajaj Pulsar RS 200 launched in India. Let’s take a look at 10 stand out features, along with its engine specification and pricing. 
Story first published: Thursday, March 26, 2015, 15:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X