ಅಗ್ರಸ್ಥಾನಕ್ಕೇರಿದ ಸ್ಪ್ಲೆಂಡರ್, ಆಕ್ಟಿವಾ ನಂ.2; ಟಾಪ್ 10 ಪಟ್ಟಿಗೆ ಜೂಪಿಟರ್
ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಸಿಯಾಮ್) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 2,43,188 ಯುನಿಟ್ ಗಳ ಮಾರಾಟ ಕಂಡಿರುವ ದೇಶದ ಜನಪ್ರಿಯ ಹೀರೊ ಸ್ಪ್ಲೆಂಡರ್ ಮತ್ತೆ ಅಗ್ರಸ್ಥಾನಕ್ಕೇರಿದೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಎಂ) ವರದಿಗಳ ಪ್ರಕಾರ ಕಳೆದ ಕೆಲವು ತಿಂಗಳಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದ ಆಕ್ಟಿವಾ ಎರಡನೇ ಸ್ಥಾನಕ್ಕೆ ಕುಸಿದಿದೆ. ಇನ್ನೊಂದೆಡೆ ಅಗ್ರ 10ರ ಪಟ್ಟಿಯನ್ನು ಬೇಧಿಸುವಲ್ಲಿ ಟಿವಿಎಸ್ ಜೂಪಿಯರ್ ಯಶ ಕಂಡಿದೆ. ಸಂಪೂರ್ಣ ಪಟ್ಟಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ.

10. ಜೂಪಿಟರ್
ಅಗ್ರ 10ರ ಪಟ್ಟಿಯೊಳಗೆ ಎಂಟ್ರಿ ಕೊಟ್ಟಿರುವ ಟಿವಿಎಸ್ ಜೂಪಿಟರ್ ಶೇಕಡಾ 45.3 ರಷ್ಟು ಮಾರಾಟ ವರ್ಧನೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 33,617 ಯುನಿಟ್ ಗಳ ಮಾರಾಟ ಕಂಡಿದ್ದ ಜೂಪಿಟರ್ 2015 ಸೆಪ್ಟೆಂಬರ್ ತಿಂಗಳಲ್ಲಿ 48,866 ಯುನಿಟ್ ಗಳಿಗೆ ನೆಗೆತ ಕಂಡಿದೆ.
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 48,866 ಯನಿಟ್
- 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 33,617 ಯನಿಟ್
- ಮಾರಾಟ ಏರಿಕೆ (ಶೇಕಡದಲ್ಲಿ): 45.3
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 54,559 ಯನಿಟ್
- 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 69,233 ಯನಿಟ್
- ಮಾರಾಟ ಇಳಿಕೆ (ಶೇಕಡದಲ್ಲಿ): 21.1
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 55,793 ಯನಿಟ್
- 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 51831 ಯನಿಟ್
- ಮಾರಾಟ ಏರಿಕೆ (ಶೇಕಡದಲ್ಲಿ): 7.6
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 59,406 ಯನಿಟ್
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 66,765 ಯನಿಟ್
- 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 68,706 ಯನಿಟ್
- ಮಾರಾಟ ಇಳಿಕೆ (ಶೇಕಡದಲ್ಲಿ): 2.8
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 69,162 ಯನಿಟ್
- 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 77,644 ಯನಿಟ್
- ಮಾರಾಟ ಇಳಿಕೆ (ಶೇಕಡದಲ್ಲಿ): 10.9
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 101,579 ಯನಿಟ್
- 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 104,250 ಯನಿಟ್
- ಮಾರಾಟ ಇಳಿಕೆ (ಶೇಕಡದಲ್ಲಿ): 2.5
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 108,395 ಯನಿಟ್
- 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 107,239 ಯನಿಟ್
- ಮಾರಾಟ ಏರಿಕೆ (ಶೇಕಡದಲ್ಲಿ): 1
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 229,382 ಯನಿಟ್
- 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 210,797 ಯನಿಟ್
- ಮಾರಾಟ ಏರಿಕೆ (ಶೇಕಡದಲ್ಲಿ): 8.8
- 2015 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 243,188 ಯನಿಟ್
- 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮಾರಾಟ: 234,844 ಯನಿಟ್
- ಮಾರಾಟ ಏರಿಕೆ (ಶೇಕಡದಲ್ಲಿ): 3.5

09. ಟಿವಿಎಸ್ ಎಕ್ಸ್‌ಎಲ್ ಸೂಪರ್
ಕಳೆದ ವರ್ಷಕ್ಕೆ ಹೋಲಿಸಿದಾಗ ಮಾರಾಟದಲ್ಲಿ ಇಳಿಕೆ ಕಂಡರೂ ಒಂಬತ್ತನೇ ಸ್ಥಾನ ಕಾಪಾಡಿಕೊಳ್ಳಲು ಟಿವಿಎಸ್ ಎಕ್ಸ್‌ಎಲ್ ಸೂಪರ್ ಯಶ ಕಂಡಿದೆ.

08. ಗ್ಲಾಮರ್
ಇನ್ನೊಂದೆಡೆ ಹೀರೊ ಗ್ಲಾಮರ್ ಕಳೆದ ವರ್ಷವಿದ್ದ 10ನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ ನೆಗೆತ ಕಂಡಿದೆ. ಗ್ಲಾಮರ್ ಮಾರಾಟದಲ್ಲೂ ಇದು ಪ್ರತಿಫಲಿಸಿದೆ.

07. ಬಜಾಜ್ ಸಿಟಿ 100
ಟಾಪ್ 10 ಪಟ್ಟಿಗೆ ಬಜಾಜ್ ಸಿಟಿ 100 ಅಚ್ಚರಿಯ ಪ್ರವೇಶ ಎಂದೇ ಹೇಳಬಹುದು.

06. ಬಜಾಜ್ ಪಲ್ಸರ್
ಮಾರಾಟದಲ್ಲಿ ಕುಸಿತ ಅನುಭವಿಸಿದರೂ ಕಳೆದ ಬಾರಿಯ ಒಂಬತ್ತನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿಯುವಲ್ಲಿ ದೇಶದ ನಂ.1 ಕ್ರೀಡಾ ಬೈಕ್ ಖ್ಯಾತಿಯ ಬಜಾಜ್ ಪಲ್ಸರ್ ಯಶ ಕಂಡಿದೆ.

05. ಸಿಬಿ ಶೈನ್
ಮಾರಾಟದಲ್ಲಿ ಗಣನೀಯ ಇಳಿಕೆ ಕಂಡಿರುವ ಹೊರತಾಗಿಯೂ ದೇಶದ ಅಗ್ರ 125 ಸಿಸಿ ಬೈಕ್ ಆಗಿರುವ ಸಿಬಿ ಶೈನ್ ಒಂದು ವರ್ಷದ ದೀರ್ಘ ಅವಧಿಯ ಬಳಿಕವೂ ಐದನೇ ಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

04. ಎಚ್‌ಎಫ್ ಡಿಲಕ್ಸ್
ಈಗಲೂ ಎಚ್‌ಎಫ್ ಡಿಲಕ್ಸ್ ಎಷ್ಟೊಂದು ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ ಎಂಬುದನ್ನು ಮಾರಾಟ ಅಂಕಿಅಂಶಗಳೇ ಸಾಬೀತುಪಡಿಸುತ್ತದೆ. ಅಲ್ಲದೆ ತನ್ನ ನಾಲ್ಕನೇ ಸ್ಥಾನವನ್ನು ಭದ್ರವಾಗಿಸಿದೆ.

04. ಪ್ಯಾಶನ್
ಹೀರೊ ಪ್ಯಾಶನ್ ಸಹ ತನ್ನ ಜನಪ್ರಿಯತೆ ಕುಂದದಂತೆ ನೋಡಿಕೊಂಡಿದ್ದು, ಮೂರನೇ ಸ್ಥಾನವನ್ನು ಕಾಪಾಡಿಕೊಂಡಿದೆ.

02. ಆಕ್ಟಿವಾ
ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ ಅಗ್ರ ಎರಡು ಸ್ಥಾನಗಳಿಗೆ ನಿರಂತರ ಜಾರಿಯಾಗುತ್ತಲೇ ಇದೆ. ಆದರೆ ಈ ಬಾರಿ ಮಾರಾಟ ಏರಿಕೆಯ ನಡುವೆಯೂ ಆಕ್ಟಿವಾ ಅಗ್ರ ಸ್ಥಾನದಿಂದ ಕೆಳಕ್ಕಿಳಿದಿದೆ.

01. ಸ್ಪ್ಲೆಂಡರ್
ಕಳೆದ ವರ್ಷ ಇದೇ ಅವಧಿಯಲ್ಲಿ ನಂ.1 ಸ್ಥಾನದಲ್ಲಿದ್ದ ಹೀರೊ ಸ್ಪ್ಲೆಂಡರ್ ಮೂರು ತಿಂಗಳ ಅವಧಿಯ ಬಳಿಕ 2015 ಸೆಪ್ಟೆಂಬರ್ ತಿಂಗಳಲ್ಲಿ ಮಗದೊಮ್ಮೆ ಅಗ್ರಸ್ಥಾನಕ್ಕೇರಿದೆ. ಮಾರಾಟದಲ್ಲೂ ಇದು ಪ್ರತಿಫಲಿಸಿದೆ.


Click it and Unblock the Notifications








