ಯುದ್ಧ ಭೂಮಿಗಿಂತ ಕರ್ಮ ಭೂಮಿಯಲ್ಲಿ ಮಡಿಯುವ ಬಿಎಸ್‌ಎಫ್ ಯೋಧರು!

By Nagaraja

ಆಘಾತಕಾರಿ ಸುದ್ದಿಯೊಂದರಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಪಣ ತೊಟ್ಟು ತೆರಳುವ ಗಡಿ ರಕ್ಷಣಾ ಪಡೆಯ (ಬಿಎಸ್ ಎಫ್) ಯೋಧರು ಯುದ್ಧ ಭೂಮಿಗಿಂತ ಮಿಗಿಲಾಗಿ ತಮ್ಮ ಕರ್ಮ ಭೂಮಿಯಲ್ಲೇ ಜೀವ ಬಲಿ ಅರ್ಪಿಸುತ್ತಿರುವ ಅಪಾಯಕಾರಿ ವಿಚಾರ ಬೆಳಕಿಗೆ ಬಂದಿದೆ.

ಕಳೆದ ಒಂದು ವರ್ಷದಲ್ಲಿ (2014 ಮಾರ್ಚ್ ರಿಂದ 2015 ಮಾರ್ಚ್ ವರೆಗೆ) ಅನೇಕ ಕಾರಣಾಂತರಗಳಿಂದಾಗಿ ನಡೆದ ಬೈಕ್ ಅಪಘಾತಗಳಲ್ಲಾಗಿ 42ರಷ್ಟು ಯೋಧರು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

ಯುದ್ಧ ಭೂಮಿಗಿಂತ ಕರ್ಮ ಭೂಮಿಯಲ್ಲಿ ಮಡಿಯುವ ಬಿಎಸ್‌ಎಫ್ ಯೋಧರು!

ವರದಿಗಳ ಪ್ರಕಾರ 2014 ಮಾರ್ಚ್ ರಿಂದ 2015 ಮಾರ್ಚ್ ವರೆಗಿನ ಅವಧಿಯಲ್ಲಿ ಬೈಕ್ ಅಪಘಾತದಲ್ಲಿ 42 ಯೋಧರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಗಡಿಯಲ್ಲಿ 12 ಮಂದಿ ಯೋಧರು ಸಾವಿಗೀಡಾಗಿದ್ದರು. ಇದು ದೇಶದ ಅತಿ ದೊಡ್ಡ ಅರೆ ಸೇನಾ ಪಡೆಯಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.

ಯುದ್ಧ ಭೂಮಿಗಿಂತ ಕರ್ಮ ಭೂಮಿಯಲ್ಲಿ ಮಡಿಯುವ ಬಿಎಸ್‌ಎಫ್ ಯೋಧರು!

ಈ ಬಗ್ಗೆ ಖೇದ ವ್ಯಕ್ತಪಡಿಸಿರುವ ಬಿಎಸ್ ಎಫ್ ನಿರ್ದೇಶಕ ಡಿಕೆ ಪಾಠಕ್, "ಬೈಕ್ ಅಪಘಾತಗಳಲ್ಲಾಗಿ ಪ್ರತಿ ತಿಂಗಳು ಸರಿ ಸುಮಾರು ಐವರು ಯೋಧರನ್ನು ಕಳೆದುಕೊಳ್ಳುತ್ತಿದ್ದೇವೆ. ಬಹುತೇಕ ಇಂತಹ ಅಪಘಾತಗಳು ಯೋಧರು ಮನೆಗೆ ತೆರಳಿದಾಗ ಅಥವಾ ರಜೆಯಲ್ಲಿದ್ದಾಗ ಸಂಭವಿಸುತ್ತಿದೆ" ಎಂದಿದ್ದಾರೆ.

ಯುದ್ಧ ಭೂಮಿಗಿಂತ ಕರ್ಮ ಭೂಮಿಯಲ್ಲಿ ಮಡಿಯುವ ಬಿಎಸ್‌ಎಫ್ ಯೋಧರು!

"ನಮ್ಮ ಜವಾನರು ನಮ್ಮ ದೊಡ್ಡ ಆಸ್ತಿ ಆಗಿದ್ದು ಹಾಗಾಗಿ ಇಂತಹ ಘಟನೆಗಳು ಮರಕಳುಹಿಸಬಾರದು. ಬೈಕ್ ಅಪಘಾತದಿಂದಾಗಿ ಯೋಧರು ಮೃತಪಡುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.

ಯುದ್ಧ ಭೂಮಿಗಿಂತ ಕರ್ಮ ಭೂಮಿಯಲ್ಲಿ ಮಡಿಯುವ ಬಿಎಸ್‌ಎಫ್ ಯೋಧರು!

ಈ ಸಂಬಂಧ ಕ್ಷಿಪ್ರ ಪರಿಹಾರಕ್ಕೆ ಮುಂದಾಗಿರುವ ಬಿಎಸ್ ಎಫ್, ಅರೆ ಸೇನಾ ಪಡೆಯ ಮೇಲೆ ಹದ್ದಿನ ಕಣ್ಣಿಡಲಿದ್ದು ಯೋಧರಿಗೆ ಸುರಕ್ಷಿತ ಚಾಲನೆ ಬಗ್ಗೆ ತರಬೇತಿ ನೀಡಲಾಗುವುದು ಎಂದವರು ತಿಳಿಸಿದ್ದಾರೆ.

ಯುದ್ಧ ಭೂಮಿಗಿಂತ ಕರ್ಮ ಭೂಮಿಯಲ್ಲಿ ಮಡಿಯುವ ಬಿಎಸ್‌ಎಫ್ ಯೋಧರು!

ಇದರಂತೆ ಅಜಾಗರೂತಕೆಯಿಂದ ಬೈಕ್ ಸವಾರಿ ಮಾಡುವ ಪ್ರತಿಯೊಬ್ಬ ಯೋಧರ ಮೇಲೆ ನಿಗಾವಹಿಸುವಂತೆ ಮೇಲ್ವಿಚಾರಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಯುದ್ಧ ಭೂಮಿಗಿಂತ ಕರ್ಮ ಭೂಮಿಯಲ್ಲಿ ಮಡಿಯುವ ಬಿಎಸ್‌ಎಫ್ ಯೋಧರು!

ಮಾತು ಮುಂದುವರಿಸಿರುವ ಪಠಾಕ್, ಭದ್ರತಾ ಕಾರ್ಯಾಚರಣೆಗಳನ್ನು ತಮ್ಮ ಹೆಗಲ ಮೇಲೆರಿಸುವ ಯೋಧರು ಇಂತಹ ವಿಚಿತ್ರ ವರ್ತನೆಯಿಂದಾಗಿ ಜೀವ ಕಳೆದುಕೊಳ್ಳಬಾರದು ಎಂದಿದ್ದಾರೆ.

ಯುದ್ಧ ಭೂಮಿಗಿಂತ ಕರ್ಮ ಭೂಮಿಯಲ್ಲಿ ಮಡಿಯುವ ಬಿಎಸ್‌ಎಫ್ ಯೋಧರು!

ಇಷ್ಟೆಲ್ಲ ಆದರೂ ವರ್ಷಂಪ್ರತಿ ರಾಜಪಥದಲ್ಲಿ ನಡೆಯುವ ಪಥಸಂಚಲನದಲ್ಲಿ ಬಿಎಸ್ ಎಫ್ ಡೇರ್ ಡೆವಿಲ್ಸ್ ಪ್ರದರ್ಶಿಸುವ ಸ್ಟಂಟ್ ಶೋ ನಿಜಕ್ಕೂ ಮೈ ಜುಮ್ ಎನಿಸುವಂತೆ ಮಾಡುತ್ತದೆ.

Most Read Articles

Kannada
Read more on ಅಪಘಾತ accident
English summary
BSF losing more men in bike accidents than on the border
Story first published: Wednesday, April 8, 2015, 17:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X