ಬಿಡುಗಡೆಯಾದ ಬೆನ್ನಲ್ಲೇ ಡಿಎಸ್ ಕೆ ಬೆನೆಲ್ಲಿಗೆ ಭಾರಿ ಡಿಮ್ಯಾಂಡ್
ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಬೆನ್ನಲ್ಲೇ ಇಟಲಿಯ ಐಕಾನಿಕ್ ಮೋಟಾರ್ ಸೈಕಲ್ ಬ್ರಾಂಡ್ ಆಗಿರುವ ಡಿಎಸ್ ಕೆ ಬೆನೆಲ್ಲಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.
ಭಾರತದಲ್ಲಿ ಡಿಎಸ್ ಕೆ ನೆರವಿನೊಂದಿಗೆ ಹೈ ಎಂಡ್ ಬೈಕ್ ಗಳನ್ನು ಮಾರಾಟ ಮಾಡುತ್ತಿರುವ ಬೆನೆಲ್ಲಿಯು 2015 ಮಾರ್ಚ್ 19ರಂದು ಐದು ಮಾದರಿಗಳನ್ನು ಬಿಡುಗಡೆಗೊಳಿಸಿತ್ತು. ಅವುಗಳೆಂದರೆ ಟಿಎನ್ ಟಿ 302, ಟಿಎನ್ ಟಿ 600ಐ, ಟಿಎನ್ ಟಿ 600 ಜಿಟಿ, ಟಿಎನ್ ಟಿ 899 ಮತ್ತು ಟಿಎನ್ ಟಿ 1130.

ಇದರಂತೆ ಬಿಡುಗಡೆಯಾದ ಕೆಲವೇ ವಾರಗಳಲ್ಲಿ 300ರಷ್ಟು ಬುಕ್ಕಿಂಗ್ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಗರಿಷ್ಠ ನಿರ್ವಹಣಾ ಬೈಕ್ ಗಳಿಗೆ ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಯೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಟಿಎನ್ ಟಿ 302 - 2.83 ಲಕ್ಷ ರು.
- ಟಿಎನ್ ಟಿ 600ಐ - 5.15 ಲಕ್ಷ ರು.
- ಟಿಎನ್ ಟಿ 600 ಜಿಟಿ - 5.62 ಲಕ್ಷ ರು.
- ಟಿಎನ್ ಟಿ 899 - 9.48 ಲಕ್ಷ ರು.
- ಟಿಎನ್ ಟಿ 1130 - 11.81 ಲಕ್ಷ ರು.



Click it and Unblock the Notifications








