ವಿಶಿಷ್ಟ ವಿನ್ಯಾಸದ 'ಫೆಲೈನ್ ಒನ್' ಹೈಟೆಕ್ ಬೈಕ್ ಬಿಡುಗಡೆ

Written By:

ವಾಹನೋದ್ಯಮಕ್ಕೆ ಮಗದೊಂದು ಆಕರ್ಷಕ ಬೈಕ್‌ನ ಪರಿಚಯವಾಗಿದೆ. ಫೆಲೈನ್ ಮೋಟಾರ್‌ಸೈಕಲ್ಸ್ ಸಂಸ್ಥೆಯು ತನ್ನ ಚೊಚ್ಚಲ ಫೆಲೈನ್ ಒನ್ ಹೈಟೆಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ.

ಫೆಲೈನ್ ಒನ್ ಐಷಾರಾಮಿ ಮೋಟಾರ್‌ಸೈಕಲ್ ವಿನ್ಯಾಸದಲ್ಲಿ ಯಕೋಬಾ ಗ್ಯಾಲೆ ( Yacouba Galle)ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಬೈಕ್ 2016ರ ವೇಳೆಗೆ ಜಾಗತಿಕವಾಗಿ ಮಾರಾಟಕ್ಕೆ ಲಭ್ಯವಾಗಲಿದೆ.

To Follow DriveSpark On Facebook, Click The Like Button
feline one

ಹೊಚ್ಚ ಹೊಸತಾದ ಫೆಲೈನ್ ಬೈಕ್‌ನ್ಲಲಿ ತ್ರಿ ಸಿಲಿಂಡರ್ 801 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಆಳವಡಿಸಲಾಗಿದೆ. ಇದು 170 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಕೂಡಾ ಇರಲಿದೆ.

feline one

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಫೆಲೈನ್ ಓನ್ ಬೈಕ್ ಕೇವಲ 155 ಕೆ.ಜಿ ಭಾರವನ್ನಷ್ಟೇ ಹೊಂದಿರಲಿದೆ. ಅಲ್ಲದೆ ನಿರ್ಮಾಣದಲ್ಲಿ ಏರೋ ಸ್ಪೇಸ್ ಅಲ್ಯೂಮಿನಿಯಂ, ಕಾರ್ಬನ್ ಫೈಬರ್ ಮತ್ತು ಟೈಟಾನಿಯಂ ಬಳಕೆ ಮಾಡಲಾಗಿದೆ. ವೀಲ್ ರಿಮ್, ಸ್ವಿಂಗ್ ಆರ್ಮ್, ಫೇರಿಂಗ್ ಮತ್ತು ಫ್ರಂಟ್ ಫಾರ್ಕ್ ಎಲ್ಲವನ್ನು ಕಾರ್ಬನ್ ಫೈಬರ್‌ನಿಂದ ರಚಿಸಲಾಗಿದೆ.

feline one

ಕಳೆದ 10 ವರ್ಷಗಳ ನಿರಂತರ ಅಧ್ಯಯನದ ಬಳಿಕ ಫೆಲೈನ್ ಓನ್ ಅಭಿವೃದ್ಧಿಪಡಿಸಲಾಗಿದೆ. ಇನ್ನು ಇದು ಬಹು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

English summary
Feline Motorcycles has launched their very first product in limited numbers. They have christened their motorcycle as the ‘Feline One'. This unique looking motorcycle will be available across the world by 2016.
Story first published: Saturday, February 14, 2015, 15:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark