ಶ್ವೇತ ಬಣ್ಣದಲ್ಲಿ ಕವಾಸಕಿ ನಿಂಜಾ ಝಡ್ಎಕ್ಸ್-14ಆರ್ ಆಗಮನ
ಕವಾಸಕಿ ಸೂಪರ್ ಬೈಕ್‌ಗಳಿಗೆ ದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಈಗ ಜಪಾನ್ ಮೂಲದ ಈ ದೈತ್ಯ ಸಂಸ್ಥೆಯು ತನ್ನ ಜನಪ್ರಿಯ ನಿಂಜಾ ಝಡ್ಎಕ್ಸ್-14ಆರ್ ಮಾದರಿಗೆ ಹೊಸ ಬಣ್ಣದ ಆಯ್ಕೆಯನ್ನು ನೀಡಿದೆ.
ಕವಾಸಕಿ ನಿಂಜಾ ಝಡ್‌ಎಕ್ಸ್-14 ಪಿಯರ್ಲ್ ವೈಟ್ ಮೆಟ್ಯಾಲಿಕ್ ಬಣ್ಣದಲ್ಲಿ ಲಭ್ಯವಾಗಲಿದೆ. ಪ್ರಸ್ತುತ ಬಜಾಜ್ ಪ್ರೊ ಬೈಕಿಂಗ್ ಔಟ್ಲೆಟ್‌ಗಳಲ್ಲಿ ಕವಾಸಕಿ ಬೈಕ್ ಲಭ್ಯವಿರುತ್ತದೆ.

ಅಷ್ಟಕ್ಕೂ ಶ್ವೇತ ಬಣ್ಣದ ಕವಾಸಕಿ ನಿಂಜಾ ಎಷ್ಟು ದುಬಾರಿ ಗೊತ್ತೇ? ಇದು ಮುಂಬೈ ಎಕ್ಸ್ ಶೋ ರೂಂ 17.66 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಎಂಜಿನ್ ತಾಂತ್ರಿಕತೆ
ಕವಾಸಕಿ ಸೂಪರ್ ಬೈಕ್ ಇನ್ ಲೈನ್ ಫೋರ್ ಸಿಲಿಂಡರ್ 1441 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 197 ಅಶ್ವಶಕ್ತಿ (162.5 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.


Click it and Unblock the Notifications








