'ಹಿಮಾಲಯನ್' ಆಗಲಿರುವ ಎನ್‌ಫೀಲ್ಡ್ 400ಸಿಸಿ ಸಾಹಸಿ ಬೈಕ್

Written By:

ಬುಲೆಟ್ ಪ್ರೇಮಿಗಳಿಗೊಂದು ಶುಭ ಸುದ್ದಿ. ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್ ಮಗದೊಂದು ಆಕರ್ಷಕ ಅಡ್ವೆಂಚರ್ ಟೂರರ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಹೊಂದಿದೆ.

ಬಲ್ಲ ಮೂಲಗಳ ಪ್ರಕಾರ ರಾಯಲ್ ಎನ್‌‌ಫೀಲ್ಡ್ ನೂತನ 400ಸಿಸಿ ಬೈಕ್ 'ಹಿಮಾಲಯನ್' ಎಂಬ ಹೆಸರಿನಿಂದ ಅರಿಯಲ್ಪಡಲಿದೆ. ಆದರೆ ಈ ಬಗ್ಗೆ ಚೆನ್ನೈ ಮೂಲದ ಐಕಾನಿಕ್ ಸಂಸ್ಥೆಯಿಂದ ಇನ್ನಷ್ಟೇ ಅಧಿಕೃತ ಸ್ಪಷ್ಟನೆ ಬರಬೇಕಾಗಿದೆ.

To Follow DriveSpark On Facebook, Click The Like Button
royal enfield

ಸಾಹಸಿ ಬೈಕ್‌ಗೆ ತಕ್ಕಂತೆ ಹೆಸರು ಸೂಚಿಸುವುದು ಸಂಸ್ಥೆಯ ಇರಾದೆಯಾಗಿದೆ. ಇದೇ ರೀತಿ ಹಿಮಾಲಯನ್ ಹೆಚ್ಚು ಹೊಂದಿಕೆಯಾಗಲಿದೆ. ಕಳೆದ ವರ್ಷ ಎನ್‌ಫೀಲ್ಡ್ ಜೊತೆ ಸೇರಿಕೊಂಡಿರುವ ಪೀಯರೆ ಟೆರ್ಬ್‌ಲ್ಯಾನ್ಸ್ ವಿನ್ಯಾಸ ಒದಗಿಸಲಿದ್ದಾರೆ.

ಸದ್ಯಕ್ಕೆ ಹೊಸ ಬೈಕ್ ಯಾವಾಗ ರಸ್ತೆ ಪ್ರವೇಶಿಸಲಿದೆ ಎಂಬುದು ಖಚಿತವಾಗಿಲ್ಲ. ಆದರೆ ಅಡ್ವೆಂಚರ್ ಬೈಕ್‌ಗೆ ತಕ್ಕಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಇದಕ್ಕೆ ಕಾಂಟಿನೆಂಟಲ್ ಜಿಟಿಗೆ ಸಮಾನವಾದ ಚಾಸೀ ಆಳವಡಿಸುವ ಸಾಧ್ಯತೆಯಿದೆ.

English summary
Royal Enfield, the world's oldest motorcycle manufacturer has something up its sleeves, a 400 cc adventure tourer perhaps, named Royal Enfield Himalayan?
Story first published: Friday, February 13, 2015, 7:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark