ಒಂದೇ ತಿಂಗಳಲ್ಲಿ 10,000 ಮಾರಾಟ ದಾಖಲಿಸಿದ ಸುಜುಕಿ ಜಿಕ್ಸರ್

Written By:

150 ಸಿಸಿ ಕ್ರೀಡಾ ಬೈಕ್ ಗಳಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಜಪಾನ್ ಮೂಲದ ಸುಜುಕಿ ಸಂಸ್ಥೆಯ ಜನಪ್ರಿಯ ಜಿಕ್ಸರ್ ಮೋಟಾರ್ ಸೈಕಲ್ ಕಳೆದ 2015 ಅಕ್ಟೋಬರ್ ತಿಂಗಳಲ್ಲಿ 10,000 ಯುನಿಟ್ ಗಳ ಮಾರಾಟವನ್ನು ದಾಟಿದ ಸಾಧನೆ ಮಾಡಿದೆ.

Also Read: ಜಿಕ್ಸರ್ ಎಸ್‌ಎಫ್ ಬಿಡುಗಡೆ ಮುಂದಕ್ಕೆ ಓದಿ

2015 ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಜಿಕ್ಸ್ ಪ್ರಸ್ತುತ ಜಿಕ್ಸರ್ ಹಾಗೂ ಜಿಕ್ಸರ್ ಎಸ್‌ಎಫ್‌ಗಳೆಂಬ ಎರಡು ವೆರಿಯಂಟ್ ಗಳ ಮಾರಾಟವನ್ನು ಹೊಂದಿದೆ. ಈ ಪೈಕಿ ಜಿಕ್ಸರ್ ಎಸ್‌ಎಫ್ ಫೇರ್ಡ್ ವರ್ಷನ್ ಮಾದರಿಯಾಗಿದೆ.

ಸುಜುಕಿ ಜಿಕ್ಸರ್

ಸುಜುಕಿ ಬೈಕ್ ಗಳಿಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅಲ್ಲದೆ ಸಂಸ್ಥೆಯು ಇತ್ತೀಚೆಗಷ್ಟೇ ಹಬ್ಬದ ಆವೃತ್ತಿಯ ಆರಂಭದ ವೇಳೆ ಹೊಸ ಬಣ್ಣಗಳ ಆಯ್ಕೆಯನ್ನು ನೀಡಿತ್ತು. ಅವುಗಳೆಂದರೆ ಕ್ಯಾಂಡಿ ಆಂಟರೆಸ್ ರೆಡ್/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟ್ಯಾಲಿಕ್ ಟ್ರೈಟಾನ್ ಬ್ಲೂ/ಪಿಯರ್ಲ್ ಮಿರಾಜ್ ವೈಟ್.

ನೂತನ ಸುಜುಕಿ ಜಿಕ್ಸರ್ 154.9 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 14 ಎನ್‌ಎಂ ತಿರುಗುಬಲದಲ್ಲಿ 14.59 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಇದೇ ವೇಳೆಯಲ್ಲಿ ನಿಕಟ ಭವಿಷ್ಯದಲ್ಲಿ ಜಿಕ್ಸರ್ 250 ಸಿಸಿ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. [ಸುಜುಕಿ ಜಿಕ್ಸರ್ 250 ಸಿಸಿ ಬೈಕ್ ಭಾರತಕ್ಕೆ? ]

English summary
Suzuki Gixxer Garners Over 10,000 Sales Within A Single Month
Story first published: Wednesday, November 4, 2015, 8:37 [IST]
Please Wait while comments are loading...

Latest Photos