ಸುಜುಕಿ ಜಿಕ್ಸರ್ 250 ಸಿಸಿ ಬೈಕ್ ಭಾರತಕ್ಕೆ?

By Nagaraja

ಜಿಕ್ಸರ್ 150 ಸಿಸಿ ಶ್ರೇಣಿಯ ಬೈಕ್ ಗಳ ಯಶಸ್ಸಿನ ಬಳಿಕ ಮತ್ತಷ್ಟು ಪುಳಕಿತಗೊಂಡಿರುವ ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ, ಭಾರತದಲ್ಲಿ ನೂತನ ಸುಜುಕಿ ಜಿಕ್ಸರ್ 250 ಸಿಸಿ ಬೈಕ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಕ್ರಾಂತಿಕಾರಿ ಮೊಟೊ ಜಿಪಿ ಬೈಕ್‌ನ ವಿನ್ಯಾಸ ಹಾಗೂ ಸುಜುಕಿ ಇಕೊ ನಿರ್ವಹಣೆ (ಎಸ್‌ಇಪಿ) ತಂತ್ರಜ್ಞಾನವು ಜಿಕ್ಸರ್ ಹಾಗೂ ಜಿಕ್ಸರ್ ಎಸ್ ಎಫ್ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಅಲ್ಲದೆ ಹಲವಾರು ಮೂಲಗಳಿಂದ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ಸುಜುಕಿ ಜಿಕ್ಸರ್ 250

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಹೊಸ ಯೋಜನೆಗಳನ್ನು ಪ್ರಕಟಿಸುವುದು ಜಿಕ್ಸರ್ ಯೋಜನೆಯಾಗಿದೆ. ನೂತನ ಬೈಕ್ ನ ಎಂಜಿನ್ ಅಭಿವೃದ್ಧಿಪಡಿಸಲು ಜಪಾನ್ ಎಂಜಿನಿಯರ್ ಗಳು ಒಂದಾಗಲಿದ್ದಾರೆ.

ಆರಂಭದಲ್ಲಿ ನೆಕ್ಡ್ ಸ್ಟ್ರೀಟ್ ಫೈಟರ್ ಪರಿಚಯಿಸುವುದು ಸುಜುಕಿ ಯೋಜನೆಯಾಗಿದೆ. ಬಳಿಕ ಜಿಕ್ಸರ್ 250 ಮಾದರಿಯು ರಸ್ತೆಗಿಳಿಯಲಿದೆ.

ನಿಮ್ಮ ಮಾಹಿತಿಗಾಗಿ, ಈ ಹಿಂದೆ ಇನಾಝುಮಾದಲ್ಲಿ 250 ಸಿಸಿ ಪ್ಯಾರಲನ್ ಟ್ವಿನ್ ಸಿಲಿಂಡರ್ ಎಂಜಿನ್ ಪರಿಚಯಿಸಲಾಗಿತ್ತು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಅಷ್ಟೇನೂ ಯಶ ಕಂಡಿರಲಿಲ್ಲ.

Most Read Articles

Kannada
English summary
Now the manufacturer is gearing up for 2016 Auto Expo, which will be held in Delhi. They are planning on utilising the success of Gixxer for its future products as well.
Story first published: Monday, June 15, 2015, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X