ಹೊಸ ಸ್ವರೂಪ ಪಡೆಯಲಿರುವ ಟಿವಿಎಸ್ ವಿಕ್ಟರ್

Posted By:

ದೇಶದ ದ್ವಿಚಕ್ರ ಮಾರುಕಟ್ಟೆಯಲ್ಲಿ ಪೈಪೋಟಿ ವೃದ್ಧಿಸಿದಂತೆ ಕಳೆಗುಂದಿರುವ ವಿಕ್ಟರ್ ಬೈಕ್ ಗೆ ಹೊಸ ಸ್ವರೂಪ ನೀಡಲು ದೇಶದ ಮುಂಚೂಣಿಯ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್ ನಿರ್ಧರಿಸಿದೆ.

ಒಂದು ಸಮಯದಲ್ಲಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿದ್ದ ಟಿವಿಎಸ್ ವಿಕ್ಟರ್ ನಿಧಾನವಾಗಿ ತನ್ನ ಆವೇಗವನ್ನು ಕಳೆದುಕೊಂಡಿತ್ತು. ಆದರೆ ಪರಿಷ್ಕೃತ ಮಾದರಿಯು ದೇಶದ ದ್ವಿಚಕ್ರ ಪ್ರಯಾಣಿಕ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುವ ನಿರೀಕ್ಷೆಯಲ್ಲಿದೆ.

To Follow DriveSpark On Facebook, Click The Like Button
ಟಿವಿಎಸ್ ವಿಕ್ಟರ್

ಪ್ರಸ್ತುತ, ಹೀರೊ, ಹೋಂಡಾ ಹಾಗೂ ಬಜಾಜ್ ಬೈಕ್ ಗಳು ಹೆಚ್ಚಿನ ಬೇಡಿಕೆ ಕಾಯ್ದುಕೊಂಡಿದೆ. ಇನ್ನು ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್ ಗಳಲ್ಲಿ ಯಮಹಾ ಸಹ ತನ್ನ ಛಾಪನ್ನು ಒತ್ತಿದೆ. ಇವೆಲ್ಲದರ ನಡುವೆ ಟಿವಿಎಸ್ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟುಕೊಳ್ಳುತ್ತಿದೆ.

ಎಲ್ಲ ಹಂತದಲ್ಲೂ ಹೊಸ ಸ್ವರೂಪ ಪಡೆಯಲಿರುವ ಟಿವಿಎಸ್ ವಿಕ್ಟರ್ ಹಿಂದಿನ ಮಾದರಿಗಿಂತ ಸಂಪೂರ್ಣ ವಿಭಿನ್ನ ನೋಟ ಪಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಹೊಸ ವಿಕ್ಟರ್ ಅಭಿವೃದ್ಧಿಯಲ್ಲಿ ತೊಡಗಿದ್ದು, ಪ್ರಯೋಗಿಕ ಸಂಚಾರ ಪ್ರಯೋಗ ನಡೆಸುತ್ತಿದೆ.

ಹಾಗಿದ್ದರೂ ನೂತನ ಬೈಕ್ ಯಾವಾಗ ಬಿಡುಗಡೆಯಾಗಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿಗಳು ಬಂದಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ 2015ನೇ ಸಾಲಿನಲ್ಲೇ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಏನೇ ಆದರು ಹೀರೊ ಸ್ಲ್ಪೆಂಡರ್ ಹಾಗೂ ಹೋಂಡಾ ಡ್ರೀಮ್ ಶ್ರೇಣಿಯ ಬೈಕ್ ಗಳ ಸವಾಲನ್ನು ಹೊಸ ಟಿವಿಎಸ್ ವಿಕ್ಟರ್ ಹೇಗೆ ನಿಭಾಯಿಸಲಿದೆ ಎಂಬುದು ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದುಕೊಂಡಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಉತ್ಪನ್ನ ಬಿಡುಗಡೆ ಮಾಡಬೇಕಾಗಿರುವುದು ಅತಿ ಅಗತ್ಯವಾಗಿದೆ.

ಅಂತಿಮವಾಗಿ ಹೊಸ ಟಿವಿಸ್ ವಿಕ್ಟರ್ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದ್ದು, 45,000 ರು.ಗಳಿಂದ 50,000 ರು.ಗಳ ಅಂದಾಜು ಎಕ್ಸ್ ಶೋ ರೂಂ ಬೆಲೆಯೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಾರು-ಬೈಕ್ ಗೆ ಸಂಬಂಧಿಸಿದಂತೆ ತಾಜಾ ಮಾಹಿತಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ.

Read more on ಟಿವಿಎಸ್ tvs
English summary
TVS Motors is planning to relaunch its trusted and most effective motorcycle the Victor once again in Indian market. The Indian manufacturer plans on capturing the commuter segment once again.
Story first published: Saturday, July 11, 2015, 8:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark