340 ಕೀ.ಮೀ. ವೇಗದಲ್ಲಿ ಸಾಗುವ ಅಲ್ಟ್ರಾಬೈಕ್ ಗಳ ಡಾನ್ 'ಅರೋರಾ'

Written By:

ಇತ್ತೀಚೆಗಷ್ಟೇ ನೆರವೇರಿದ ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಹೊಸ ಆತಿಥಿಯ ಆಗಮನವಾಗಿದೆ. ಅದುವೇ ಅಲ್ಟ್ರಾಬೈಕ್ ಗಳ ಡಾನ್ ಎಂದೇ ವಿಶ್ಲೇಷಿಸಲ್ಪಡುವ 'ಅರೋರಾ'.

2007ನೇ ಇಸವಿಯಲ್ಲಿ ಆಸ್ಟ್ರೇಲಿಯಾ ಮೂಲದ ವಿನ್ಸೆಂಟ್ ಮೆಸ್ಸಿನಾ ಎಂಬವರು ಅರೋರಾ ಮೋಟಾರ್ ಸೈಕಲ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದರಲ್ಲಿ ನಾವೀನ್ಯ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ.

ಅಲ್ಟ್ರಾಬೈಕ್

ಅಲ್ಟ್ರಾಬೈಕ್

ನೂತನ ಅರೋರಾ ಹೆಲ್ ಫೈರ್ ಗರಿಷ್ಠ ನಿರ್ವಹಣೆಯ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು ವಿಶಿಷ್ಟ ಕಾನ್ಸೆಪ್ಟ್ ಆಧಾರಿತ ಬೈಕಾಗಿದೆ.

ಸ್ಟೈಲಿಂಗ್

ಸ್ಟೈಲಿಂಗ್

ಫ್ರೇಮ್ ಲೆಸ್ ಚಾಸೀ ಡಿಸೈನ್ ಹಾಗೂ ಕಾರ್ಬನ್ ಫೈಬರ್ ಪರಿಕರಗಳನ್ನು ಇದರಲ್ಲಿ ಬಳಕೆ ಮಾಡಲಾಗಿದೆ.

ಹಗುರ ಭಾರ

ಹಗುರ ಭಾರ

ಇತರ ಗರಿಷ್ಠ ಸಾಮರ್ಥ್ಯದ ಬೈಕ್ ಗಳನ್ನು ಹೋಲಿಕೆ ಮಾಡಿದಾಗ ಅರೋರಾ ಹೆಲ್ ಫೈರ್ ತುಂಬಾನೇ ಹಗುರ ಭಾರವಾಗಿರಲಿದೆ. ಇದು ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

ಚಾಲನಾ ವ್ಯವಸ್ಥೆ

ಚಾಲನಾ ವ್ಯವಸ್ಥೆ

ಟಿಮ್ ಕ್ಯಾಮರೂನ್ ವಿನ್ಯಾಸ ಕಲ್ಪಿಸಿಕೊಂಡಿರುವ ಅರೋರಾ ಹೆಲ್ ಫೈರ್ ಅತ್ಯುತ್ತಮ ಚಾಲನಾ ಸ್ಥಾನ ಹಾಗೂ ಚಾಲನಾ ಅನುಭವವನ್ನು ನೀಡಲಿದೆ.

ಎಂಜಿನ್

ಎಂಜಿನ್

2.6 ಲೀಟರ್ ಕ್ವಾಡ್-ಕಮ್ ವಿ8,

417 ಬ್ರೇಕ್ ಹಾರ್ಸ್ ಪವರ್ (311 ಕೆಡಬ್ಲ್ಯು),

ತಿರುಗುಬಲ: 235 ft-lbs (319 Nm)

ಗೇರ್ ಬಾಕ್ಸ್

ಗೇರ್ ಬಾಕ್ಸ್

ನೋವಾ 5 ಸ್ಪೀಡ್ ಕಾನ್‌ಸ್ಟಂಟ್ ಮೆಶ್

ಸಿಗ್ಮಾ ಕೌಂಟರ್ ರೊಟೇಟಿಂಗ್ ಮಲ್ಟಿ ಪ್ಲೇಟ್ ಹೈಡ್ರಾಲಿಕ್ ಸ್ಲಿಪರ್ ಕ್ಲಚ್

ಡ್ಯುಯಲ್ ಯುನಿವರ್ಸಲ್ ಶಾಫ್ಟ್ ಡ್ರೈವ್.

ಸಸ್ಪೆನ್ಷನ್ ಮುಂಭಾಗ

ಸಸ್ಪೆನ್ಷನ್ ಮುಂಭಾಗ

ಕಾರ್ಬನ್ ಫೈಬರ್ ಮತ್ತು ಬಿಲೆಟ್ ಅಲ್ಯೂಮಿನಿಯಂ ಮಲ್ಟಿ ಲಿಂಕ್ ಸಿಸ್ಟಂ,

ಟಿಟಿಎಕ್ಸ್ ಎಲೆಕ್ಟ್ರಾನಿಕ್ ಸಸ್ಪೆನ್ಷನ್ ಯುನಿಟ್.

ಸಸ್ಪೆನ್ಷನ್ ಹಿಂಭಾಗ

ಸಸ್ಪೆನ್ಷನ್ ಹಿಂಭಾಗ

ಆ್ಯಂಟಿ-ಸ್ವಾಟ್ ಮಲ್ಟಿ ಲಿವರ್ ಜಿಯೋಮೆಟ್ರಿ

ಸಂಪೂರ್ಣ ಹೊಂದಾಣಿಸಬಹುದಾದ ಓಹ್‌ಲಿನ್ಸ್ ಟಿಟಿಎಕ್ಸ್ ಎಲೆಕ್ಟ್ರಾನಿಕ್ ಸಸ್ಪೆನ್ಷನ್ ಯುನಿಟ್.

ಆಯಾಮ

ಆಯಾಮ

ಚಕ್ರಾಂತರ: 1600 ಎಂಎಂ

ಉದ್ದ: 2229 ಎಂಎಂ

ಅಗಲ: 850 ಎಂಎಂ

ಸೀಟು ಎತ್ತರ: 820 ಎಂಎಂ

ಒಟ್ಟಾರೆ ಎತ್ತರ: 265 ಕೆ.ಜಿ.

Read more on ಬೈಕ್ bike
English summary
'ultrabike' with a top speed of more than 340kph!

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark