ಕ್ರೀಡಾ ಬೈಕ್ ಸ್ನೇಹಿಗಳಿಗಾಗಿ ಹೀರೊ ಎಕ್ಸ್‌ಟ್ರೀಮ್ 200 ಎಸ್

Written By:

ದೇಶದ ನಂ.1 ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ದೆಹಲಿಯಲ್ಲಿ ಸಾಗುತ್ತಿರುವ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಎಕ್ಸ್ ಟ್ರೀಮ್ 200 ಎಸ್ ಬೈಕ್ ಅನಾವರಣಗೊಳಿಸಿದೆ.

ದೇಶದ ಕ್ರೀಡಾ ಬೈಕ್ ವಾಹನ ಪ್ರೇಮಿಗಳಿಗೆ ನೂತನ 200 ಸಿಸಿ ಎಂಟ್ರಿ ಲೆವೆಲ್ ಬೈಕ್ ಪರಿಪೂರ್ಣ ಚಾಲನಾ ಅನುಭವ ನೀಡಲಿದೆ. ಭಾರತದಲ್ಲಿ ಕ್ರೀಡಾ ಬೈಕ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದು ಗಮನದಲ್ಲಿಟ್ಟುಕೊಂಡಿರುವ ಹೀರೊ ನೂತನ ಎಕ್ಸ್ ಟ್ರೀಮ್ ಕೊಡುಗೆಯನ್ನು ನೀಡುತ್ತಿದೆ.

ಹೀರೊ ಎಕ್ಸ್‌ಟ್ರೀಮ್ 200 ಎಸ್

ಎಂಜಿನ್ ತಾಂತ್ರಿಕತೆ

200 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್,

18.5 ಅಶ್ವಶಕ್ತಿ (8500 ಆರ್‌ಪಿಎಂ),

17.2 ಎನ್‌ಎಂ ತಿರುಗುಬಲ (6000 ಆರ್‌ಪಿಎಂ)

5 ಸ್ಪೀಡ್ ಗೇರ್ ಬಾಕ್ಸ್

ಸಸ್ಪೆನ್ಷನ್, ಬ್ರೇಕ್

ನೂತನ ಎಕ್ಸ್‌ಟ್ರೀಮ್ 200 ಎಸ್ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಹಾಗೂ ಹಿಂದುಗಡೆ ಮೊನೊಶಾಕ್ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಪಡೆದಿದೆ. ಅಂತೆಯೇ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ.

ವಿಶಿಷ್ಟತೆ: ಎಲ್‌ಇಡಿ ಬೆಳಕಿನ ಸೇವೆ, ಡ್ಯುಯಲ್ ಟೋನ್ ಬಣ್ಣಗಳು ಇತರ ಪ್ರಮುಖ ವೈಶಿಷ್ಟ್ಯಗಳಾಗಿರಲಿದೆ.

ಪ್ರತಿಸ್ಪರ್ಧಿಗಳು

ಪ್ರಸಕ್ತ ಸಾಲಿನಲ್ಲೇ ದೇಶದ ರಸ್ತೆಗೆ ಪ್ರವೇಶಿಸುವ ನಿರೀಕ್ಷೆ ಹೊಂದಿರುವ ನೂತನ ಎಕ್ಸ್‌ಟ್ರೀಮ್ 200 ಎಸ್ ಪ್ರಮುಖವಾಗಿಯೂ ಕೆಟಿಎಂ ಡ್ಯೂಕ್ 200, ಬಜಾಜ್ ಪಲ್ಸರ್ 200 ಶ್ರೇಣಿಯ ಬೈಕ್ ಗಳು ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟಿವಿಎಸ್ ಅಪಾಚೆ 200 4 ವಿ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

English summary
Hero Xtreme 200 S Makes Surprise Debut At Auto Expo 2016
Story first published: Sunday, February 7, 2016, 12:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X