ಕಾಯುವಿಕೆ ಅಂತ್ಯ; ಬಜಾಜ್ ಡೊಮಿನರ್ 400 ಸಿಸಿ ಬೈಕ್ ಭರ್ಜರಿ ಬಿಡುಗಡೆ

ಬಜಾಜ್ ಡೊಮಿನರ್ 400 ಸಿಸಿ ಬೈಕ್ ಭಾರತದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ.

By Nagaraja

ದೇಶದ ಬೈಕ್ ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದ ಸಮಯ ಕೊನೆಗೂ ಆಗಮನವಾಗಿದ್ದು, ಅತಿ ನೂತನ ಬಜಾಜ್ ಡೊಮಿನರ್ 400 ಸಿಸಿ ಬೈಕ್ ಭರ್ಜರಿ ಬಿಡುಗಡೆ ಕಂಡಿದೆ. ಇದು ಬಜಾಜ್ ಸಂಸ್ಥೆಯು ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಅತ್ಯಂತ ಶಕ್ತಿಶಾಲಿ ಬೈಕಾಗಿದ್ದು, ಬೆಲೆ, ವೈಶಿಷ್ಟ್ಯ ಇತ್ಯಾದಿ ಮಾಹಿತಿಗಳನ್ನು ಓದುಗರ ಜೊತೆಗೆ ಇಲ್ಲಿ ಹಂಚಿಕೊಳ್ಳಲಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬಜಾಜ್ ಡೊಮಿನರ್: 1.36 ಲಕ್ಷ ರು.

ಬಜಾಜ್ ಡೊಮಿನರ್ (ಎಬಿಎಸ್): 1.50 ಲಕ್ಷ ರು.

ಕೆಟಿಎಂ ಎಂಜಿನ್

ಕೆಟಿಎಂ ಎಂಜಿನ್

ಕೆಟಿಎಂ 390 ಡ್ಯೂಕ್ ನಲ್ಲಿರುವುದಕ್ಕೆ ಸಮಾನವಾದ ಬಿಎಸ್ IV, 373.3 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಗಿಟ್ಟಿಸಿಕೊಂಡಿರುವ ಬಜಾಜ್ ಡೊಮಿನರ್, 35 ಎನ್ ಎಂ ತಿರುಗುಬಲದಲ್ಲಿ 34.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಆರು ಸ್ಪೀಡ್ ಗೇರ್ ಬಾಕ್ಸ್

ಆರು ಸ್ಪೀಡ್ ಗೇರ್ ಬಾಕ್ಸ್

ಆರು ಸ್ಪೀಡ್ ಗೇರ್ ಬಾಕ್ಸ್ ಪಡೆದಿರುವ ಬಜಾಜ್ ಡೊಮಿನರ್ 400 ಸಿಸಿ ಬೈಕ್ 182 ಕೆ.ಜಿ ಭಾರವನ್ನು ಹೊಂದಿರಲಿದೆ.

ವೇಗವರ್ಧನೆ

ವೇಗವರ್ಧನೆ

ಇನ್ನು 8.2 ಸೆಕೆಂಡುಗಳಲ್ಲೇ ಗಂಟೆಗೆ ಗರಿಷ್ಠ 0-100 ಕೀ.ಮೀ. ವೇಗವರ್ಧನೆ ಮತ್ತು ಗಂಟೆಗೆ ಗರಿಷ್ಠ 148 ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸ್ಲಿಪರ್ ಕ್ಲಚ್

ಸ್ಲಿಪರ್ ಕ್ಲಚ್

ಇದೇ ಮೊದಲ ಬಾರಿಗೆ ಸ್ಲಿಪರ್ ಕ್ಲಚ್ ತಾಂತ್ರಿಕತೆಯನ್ನು ಬಜಾಜ್ ಡೊಮಿನರ್ 400 ಗಿಟ್ಟಿಸಿಕೊಳ್ಳುತ್ತಿದೆ.

ಮೈಲೇಜ್, ಇಂಧನ ಟ್ಯಾಂಕ್

ಮೈಲೇಜ್, ಇಂಧನ ಟ್ಯಾಂಕ್

13 ಲೀಟರುಗಳ ಇಂಧನ ಟ್ಯಾಂಕ್ ಹೊಂದಿರುವ ಬಜಾಜ್ ಡೊಮಿನರ್ 400 ಸಿಸಿ ಬೈಕ್ ಎಷ್ಟು ಮೈಲೇಜ್ ನೀಡಲಿದೆ ಎಂಬುದು ಇನ್ನೂ ನಿಗೂಢವಾಗಿದೆ.

ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್

ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್

ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್, ಹೊಂದಾಣಿಸಬಹುದಾದ ಮೊನೊಶಾಕ್ ರಿಯರ್, ಸಂಪೂರ್ಣ ಡಿಜಿಟಲ್ ಹಾಗೂ ವಿಭಜಿತ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಬ್ಯಾಕ್-ಲಿಟ್ ಸ್ವಿಚ್ ಗೇರ್ ಇತ್ಯಾದಿ ಸೌಲಭ್ಯಗಳು ಲಭ್ಯವಾಗಲಿದೆ.

ಬ್ರೇಕ್

ಬ್ರೇಕ್

ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಪೆಡಿದಿದ್ದು, ಹೆಚ್ಚು ಸುರಕ್ಷಿತವೆನಿಸಿದೆ.

ಎಲ್ ಇಡಿ ಹೆಡ್ ಲೈಟ್

ಎಲ್ ಇಡಿ ಹೆಡ್ ಲೈಟ್

ಎಲ್ ಇಡಿ ಹೆಡ್ ಲೈಟ್ ಬಜಾಜ್ ಡೊಮಿನರ್ 400 ಸಿಸಿ ಬೈಕ್ ನಲ್ಲಿರುವ ಮಗದೊಂದು ಪ್ರಮುಖ ವೈಶಿಷ್ಟ್ಯವಾಗಿದೆ.

ಬಣ್ಣಗಳು

ಬಣ್ಣಗಳು

ಟ್ವಿಲೈಟ್ ಪ್ಲಮ್,

ಮಿಡ್ ನೈಟ್ ಬ್ಲೂ,

ಮೂನ್ ವೈಟ್

ಬುಕ್ಕಿಂಗ್ ಮೊತ್ತ

ಬುಕ್ಕಿಂಗ್ ಮೊತ್ತ

ಆಸಕ್ತ ಗ್ರಾಹಕರು ಬಜಾಜ್ ಆಟೋ ಅಧಿಕೃತ ಡೀಲರುಗಳಿಗೆ ತೆರಳಿ 9,000 ರುಪಾಯಿ ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ.

ಕಾಯುವಿಕೆ ಅಂತ್ಯ; ಬಜಾಜ್ ಡೊಮಿನರ್ 400 ಸಿಸಿ ಬೈಕ್ ಭರ್ಜರಿ ಬಿಡುಗಡೆ

ಬಜಾಜ್ ಡೊಮಿನರ್ 400 ಕ್ರೂಸರ್ ಸ್ಪೋರ್ಟ್ ಬೈಕ್ ಮೊದಲ ಬಾರಿಗೆ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿತ್ತು. ದಾ ಬಳಿಕ ವ್ಯಾಂಟೇಜ್ ಸ್ಪೋರ್ಟ್ 400 ಹಾಗೂ ಕ್ರೆಟೊಸ್ 400 ಎಂದು ಹೆಸರಿಸಿಕೊಂಡರೂ ಕೊನೆಗೆ ಡೊಮಿನರ್ ನಲ್ಲಿ ಅಂತ್ಯ ಕಂಡಿದೆ.

ಕಾಯುವಿಕೆ ಅಂತ್ಯ; ಬಜಾಜ್ ಡೊಮಿನರ್ 400 ಸಿಸಿ ಬೈಕ್ ಭರ್ಜರಿ ಬಿಡುಗಡೆ

'ಬಿಗ್ ಬೈಕ್ ಫಾರ್ ಬಿಗ್ ಬಾಯ್ಸ್' ಎಂಬ ಧ್ಯೇಯ ವಾಕ್ಯದೊಂದಿಗೆ ಬಜಾಜ್ ಡೊಮಿನರ್ 400 ರಸ್ತೆಗಿಳಿಯಲಿದೆ. ಅಲ್ಲದೆ ಯಾವತ್ತೂ ಬೈಕ್ ರೈಡಿಂಗ್ ಸಮಾನವಾಗಿರಲ್ಲ ಎಂಬುದನ್ನು ಉಲ್ಲೇಖಿಸಿದೆ.

ಕಾಯುವಿಕೆ ಅಂತ್ಯ; ಬಜಾಜ್ ಡೊಮಿನರ್ 400 ಸಿಸಿ ಬೈಕ್ ಭರ್ಜರಿ ಬಿಡುಗಡೆ

ಸ್ಪಾನಿಶ್ ಪದ ಡೊಮಿನರ್ ಎಂಬುದು ಮೀರಿಸು ಅಥವಾ ಉತ್ಕೃಷ್ಟ ಶಕ್ತಿಯ ಅರ್ಥವನ್ನು ನೀಡುತ್ತಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಭಾರತ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಮಹೀಂದ್ರ ಮೊಜೊ ಹಾಗೂ ರಾಯಲ್ ಎನ್ ಫೀಲ್ಡ್ ಟೂರಿಂಗ್ ಬೈಕ್ ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
Bajaj Dominar 400cc Launched In India
Story first published: Thursday, December 15, 2016, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X