ನೈಜ ಡುಕಾಟಿ ಪ್ಯಾನಿಗಾಲೆ ಸೂಪರ್ ಬೈಕನ್ನು ಹೋಲುವ ಬೆನೆಲ್ಲಿ ಬೈಕ್

ಮಗದೊಂದು ಕಸ್ಟಮೈಸ್ಡ್ ಬೈಕ್ ಪ್ರವೇಶವಾಗಿದ್ದು, ಇಟಲಿಯ ಡುಕಾಟಿ ಪ್ಯಾನಿಗಾಲೆ ಬೈಕನ್ನು ಹೋಲುತ್ತಿದೆ.

By Nagaraja

ವಾಹನ ಮಾರ್ಪಾಡು ಸಂಸ್ಥೆಗಳು ಎಷ್ಟೊಂದು ಉನ್ನತ್ತ ಮಟ್ಟಕ್ಕೆ ತಲುಪಿದೆಯೆಂದರೆ ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ಗುರುತಿಸಿವುದು ವಿಶ್ಲೇಷಕರಿಂದಲೂ ಕಷ್ಟವಾದ ಮಾತೆನಿಸಿಕೊಂಡಿದೆ. ನಿರ್ದಿಷ್ಟ ವಾಹನಗಳತ್ತ ಆಕರ್ಷಿತರಾಗುವ ವಾಹನ ಪ್ರೇಮಿಗಳು ಕಸ್ಟಮೈಸ್ಡ್ ಸಂಸ್ಥೆಯನ್ನು ಸಮೀಪಿಸಿ ತಮಗೆ ಬೇಕಾದಂತೆ ಮಾರ್ಪಾಡುಗಳನ್ನು ತರುತ್ತಾರೆ.

ನೈಜ ಡುಕಾಟಿ ಪ್ಯಾನಿಗಾಲೆ ಸೂಪರ್ ಬೈಕನ್ನು ಹೋಲುವ ಬೆನೆಲ್ಲಿ ಬೈಕ್

ಇಂತಹ ಹಲವಾರು ಸುದ್ದಿಗಳನ್ನು ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಇದಕ್ಕೊಂದು ಹೊಸ ಸೇರ್ಪಡೆ ಬೆನೆಲ್ಲಿ ಟಿಎನ್ ಟಿ300 ಬೈಕಾಗಿದೆ.

ನೈಜ ಡುಕಾಟಿ ಪ್ಯಾನಿಗಾಲೆ ಸೂಪರ್ ಬೈಕನ್ನು ಹೋಲುವ ಬೆನೆಲ್ಲಿ ಬೈಕ್

ಇಲ್ಲಿ ಬೆನೆಲ್ಲಿ ಟಿಎನ್ ಟಿ300 ಬೈಕನ್ನು ಇಟಲಿಯ ಐಕಾನಿಕ್ ಡುಕಾಟಿ 899 ಪ್ಯಾನಿಗಾಲೆ ಬೈಕಾಗಿ ಪರಿವರ್ತಿಸಲಾಗಿದೆ. ಪ್ರಸ್ತುತ ವಿನ್ಯಾಸವು ಅಚ್ಚೊತ್ತಿದ್ದಂತಿದ್ದು ಬದಲಾವಣೆಗಳನ್ನು ಮನಗಾಣುವುದು ಕಷ್ಟಸಾಧ್ಯವೆನಿಸಿದೆ.

ನೈಜ ಡುಕಾಟಿ ಪ್ಯಾನಿಗಾಲೆ ಸೂಪರ್ ಬೈಕನ್ನು ಹೋಲುವ ಬೆನೆಲ್ಲಿ ಬೈಕ್

ಅಂದ ಹಾಗೆ ವಿಯೆಟ್ನಾಂದಿಂದ ಈ ಬೈಕ್ ಚಿತ್ರಗಳು ಹೊರ ಬಿದ್ದಿವೆ. ಎಂಜಿನ್, ಸ್ವಿಂಗ್ ಆರ್ಮ್ ಎಲ್ಲವೂ ಟಿಎನ್ ಟಿಗೆ ಸಮಾನವಾಗಿದೆ.

ನೈಜ ಡುಕಾಟಿ ಪ್ಯಾನಿಗಾಲೆ ಸೂಪರ್ ಬೈಕನ್ನು ಹೋಲುವ ಬೆನೆಲ್ಲಿ ಬೈಕ್

ಬೆನೆಲ್ಲಿ 300 ನೆಕ್ಡ್ ದೇಹಕ್ಕೆ ಇಟಲಿಯ ವಿಶ್ವ ವಿಖ್ಯಾತ ಸೂಪರ್ ಬೈಕ್ 899 ಪ್ಯಾನಿಗಾಲೆ ವಿನ್ಯಾಸವನ್ನು ಕಲ್ಪಿಸಿಕೊಡಲಾಗಿದೆ.

ನೈಜ ಡುಕಾಟಿ ಪ್ಯಾನಿಗಾಲೆ ಸೂಪರ್ ಬೈಕನ್ನು ಹೋಲುವ ಬೆನೆಲ್ಲಿ ಬೈಕ್

ಇಲ್ಲಿ ಡುಕಾಟಿ ತರಹನೇ ಕಾಣಿಸುವ ನಿಟ್ಟಿನಲ್ಲಿ ನೈಜ ಡುಕಾಟಿ ಮಾದರಿಯಿಂದಲೇ ಹೆಡ್ ಲ್ಯಾಂಪ್ ಮತ್ತು ಇಂಧನ ಟ್ಯಾಂಕ್ ಗಳನ್ನು ಆಮದು ಮಾಡಲಾಗಿದೆ.

ನೈಜ ಡುಕಾಟಿ ಪ್ಯಾನಿಗಾಲೆ ಸೂಪರ್ ಬೈಕನ್ನು ಹೋಲುವ ಬೆನೆಲ್ಲಿ ಬೈಕ್

ಹಿಂಭಾಗ ಮತ್ತು ಸೀಟುಗಳು ಸಹ ಪ್ಯಾನಿಗಾಲೆ ನೈಜ ಬಿಡಿಭಾಗದಿಂದ ಬದಲಾಯಿಸಲಾಗಿದೆ. ಇನ್ನು ಡುಕಾಟಿ ಲಾಂಛನವನ್ನು ಕಾಪಾಡಿಕೊಂಡಿದೆ.

ನೈಜ ಡುಕಾಟಿ ಪ್ಯಾನಿಗಾಲೆ ಸೂಪರ್ ಬೈಕನ್ನು ಹೋಲುವ ಬೆನೆಲ್ಲಿ ಬೈಕ್

ಆದರೆ ನಿರ್ವಹಣೆ ವಿಚಾರಕ್ಕೆ ಬಂದಾಗ ಹಿಂದೆ ಬಿದ್ದಿದೆ. ಯಾಕೆಂದರೆ ಬೆನೆಲ್ಲಿ ನಲ್ಲಿರುವ 300 ಸಿಸಿ ಪ್ಯಾರಲೆಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಲ್ಪಡಲಿದ್ದು, 38 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನೈಜ ಡುಕಾಟಿ ಪ್ಯಾನಿಗಾಲೆ ಸೂಪರ್ ಬೈಕನ್ನು ಹೋಲುವ ಬೆನೆಲ್ಲಿ ಬೈಕ್

ಇನ್ನೊಂದೆಡೆ ಅತ್ಯಂತ ಶಕ್ತಿಶಾಲಿ 899 ಸಿಸಿ ಎಲ್ ಟ್ವಿನ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಡುಕಾಟಿ 899 ಪ್ಯಾನಿಗಾಲೆ ಬರೋಬ್ಬರಿ 146.1 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

Most Read Articles

Kannada
English summary
This Benelli TNT 300 Is Perfectly Disguised As Ducati Panigale
Story first published: Thursday, November 24, 2016, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X