125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

Written By:

ಬಹುನಿರೀಕ್ಷಿತ ಜಿ310ಆರ್ ಬೆನ್ನಲ್ಲೇ ಮಗದೊಂದು ಆಕರ್ಷಕ ಬೈಕ್ ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಜರ್ಮನಿಯ ಮೂಲದ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಹೊಂದಿದೆ. ಬಲ್ಲ ಮೂಲಗಳ ಪ್ರಕಾರ ಪ್ರಮುಖವಾಗಿಯೂ ಭಾರತ ಮಾರುಕಟ್ಟೆಯನ್ನು ಗುರಿಯಾರಿಸಿಕೊಂಡು ಬಿಎಂಡಬ್ಲ್ಯು 125 ಸಿಸಿ ಬೈಕ್ ಬಿಡುಗಡೆ ಮಾಡಲಿದೆ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಜೊತೆ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ 500 ಸಿಸಿ ಸೆಗ್ಮೆಂಟ್ ಒಳಗಡೆಯ ಬೈಕ್ ಬಿಡುಗಡೆ ಮಾಡಿರುವ ಬಿಎಂಡಬ್ಲ್ಯು ಮಗದೊಂದು ಮಹತ್ತರ ಯೋಜನೆಗೆ ಮುಂದಾಗುತ್ತಿದೆ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ಮುಂದಿನ ವರ್ಷದಲ್ಲಿ ಬಿಎಂಡಬ್ಲ್ಯು ಬಹುನಿರೀಕ್ಷಿತ ಜಿ310ಆರ್ ಕ್ರೀಡಾ ಬೈಕ್ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇಲ್ಲಿಗೆ ಬಿಎಂಡಬ್ಲ್ಯು ಯೋಜನೆ ಕೊನೆಗೊಳ್ಳುವುದಿಲ್ಲ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ಮಾರುಕಟ್ಟೆಯಲ್ಲಿ 150 ಸಿಸಿ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಹಾಗೂ ಅದಕ್ಕಿಂತಲೂ ಮೇಲ್ಪಟ್ಟ ಬೈಕ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದಾಗಿ ಸಹಜವಾಗಿಯೇ 125 ಸಿಸಿ ವಿಭಾಗದ ಬೇಡಿಕೆ ಕುಸಿಯುತ್ತಿದೆ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ಈಗ ಬಿಎಂಡಬ್ಲ್ಯು 125 ಸಿಸಿ ವಿಭಾಗಕ್ಕೆ ಹೊಸ ಚಿತ್ರಣವನ್ನು ರೂಪಿಸಲಿದೆ. ತನ್ಮೂಲಕ ಕಡಿಮೆ ಸಾಮರ್ಥ್ಯದ ಬೈಕ್ ವಿಭಾಗದಲ್ಲೂ ತನ್ನ ಸಾನಿಧ್ಯವನ್ನು ಖಚಿತಪಡಿಸಿದೆ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ಮಗದೊಂದು ಮೂಲದ ಪ್ರಕಾರ ಬಿಎಂಡಬ್ಲ್ಯು 125 ಸಿಸಿ ಬೈಕ್ ಆಗಮನವಾಗುವ ವಿಳಂಬವಾಗುವುದಿಲ್ಲ. ಇದು ಕೂಡಾ ಮುಂದಿನ ವರ್ಷದಲ್ಲೇ ಭಾರತವನ್ನು ಪ್ರವೇಶಿಸಲಿದೆ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ಹಾಗಿದ್ದರೂ ಶಕ್ತಿಶಾಲಿ ಬೈಕ್ ಗಳ ನಿರ್ಮಾಣದತ್ತವೇ ಬಿಎಂಡಬ್ಲ್ಯು ಹೆಚ್ಚಿನ ಗಮನ ಕೇಂದ್ರಿಕರಿಸಲಿದೆ. ಆದರೆ 125 ಸಿಸಿ ಗಳಂತಹ ಬೈಕ್ ಗಳು ಬೆಳೆದು ಬರುತ್ತಿರುವ ಭಾರತದಂತಹ ಮಾರುಕಟ್ಟೆಯನ್ನು ಗುರಿಯಾಗಿರಿಸಲಿದೆ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ಸಣ್ಣ ಎಂಜಿನ್ ನಿರ್ಮಾಣದಲ್ಲಿ ಟಿವಿಎಸ್ ಎತ್ತಿದ ಕೈ. ಪ್ರಸ್ತುತ ಟಿವಿಎಸ್ ಜೊತೆಗಿನ ಸಹಯೋಗದ ಪರಿಪೂರ್ಣ ಲಾಭ ಪಡೆಯುವ ಇರಾದೆಯನ್ನು ಈ ಜರ್ಮನಿಯ ಮೂಲದ ಐಕಾನಿಕ್ ಸಂಸ್ಥೆಯು ಹೊಂದಿದೆ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ನೂತನ ಬೈಕ್ ಯಮಹಾ ಆರ್125, ಡ್ಯೂಕ್ 125, ಸುಜುಕಿ ಮತ್ತು ಎಪ್ರಿಲಿಯಾ 125 ಸಿಸಿ ಎಂಜಿನ್ ಬೈಕ್ ಗಳಿಗೆ ಪ್ರತಿಸ್ಪರ್ದೆಯನ್ನು ಒಡ್ಡಲಿದೆ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ಅತ್ತ ಟಿವಿಎಸ್ ಸಹ ಬಿಎಂಡಬ್ಲ್ಯು ತಂತ್ರಜ್ಞಾನದ ನೆರವಿನೊಂದಿಗೆ ಇದಕ್ಕೆ ಸಮಾನವಾದ 125 ಸಿಸಿ ಬೈಕ್ ಬಿಡುಗಡೆಗೊಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

125 ಸಿಸಿ ಬೈಕ್ ನೊಂದಿಗೆ ಜರ್ಮನಿಯ ಐಕಾನಿಕ್ ಸಂಸ್ಥೆ ಭಾರತಕ್ಕೆ!

ಸದ್ಯ ಟಿವಿಎಸ್ ಅಕುಲಾ 310 ಬಿಡುಗಡೆಗೆ ಸಜ್ಜಾಗಿದ್ದು, ಇದು ಜನಪ್ರಿಯ ಅಪಾಚಿ ಹೆಸರಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಇದಾದ ಬಳಿಕವಷ್ಟೇ ಬಿಎಂಡಬ್ಲ್ಯು ಜಿ310ಆರ್ ಭಾರತ ಪ್ರವೇಶ ಪಡೆಯಲಿದೆ.

English summary
BMW Motorrad Might Launch A 125cc Bike After G 310R
Story first published: Wednesday, November 2, 2016, 10:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark