ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ಭಾರತದಲ್ಲಿ ನಡೆಯುತ್ತಿರುವ ದ್ವಿಚಕ್ರ ವಾಹನ ರಸ್ತೆ ಅಪಘಾತಗಳ ಬಗ್ಗೆ ವಿಶ್ವಸಂಸ್ಥೆಯ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.

By Nagaraja

ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಸವಾರ ಸೇರಿದಂತೆ ಸಹ ಪ್ರಯಾಣಿಕ ಸಹ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕೆಂಬ ನಿಯಮ ಜಾರಿಯಲ್ಲಿದ್ದರೂ ಯಾರು ಸಹ ಇದನ್ನು ಪಾಲಿಸುತ್ತಿಲ್ಲ? ಇನ್ನೊಂದೆಡೆ ಇದನ್ನು ಜಾರಿಗೆ ತರಲು ನಿಯಮ ಪಾಲಕರು ಹರ ಸಾಹಸ ಪಡಬೇಕಿದೆ. ಪ್ರಸ್ತುತ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಕಳವಳಕಾರಿ ವರದಿಯ ಬಳಿಕವಾದರೂ ಸವಾರರ ಮನೋಸ್ಥಿತಿ ಬದಲಾದಿತು ಎಂಬ ನಂಬಿಕೆ ನಮ್ಮದ್ದು.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ರಸ್ತೆ ಅಪಘಾತದಿಂದಾಗಿ ಸಾವನ್ನಪ್ಪುವ 10 ಮಂದಿಯಲ್ಲಿ ಕನಿಷ್ಠ ನಾಲ್ಕು ಮಂದಿ ಜೀವವನ್ನಾದರೂ ಹೆಲ್ಮೆಟ್ ಧರಿಸುವುದರಿಂದ ರಕ್ಷಿಸಬಹುದಾಗಿದೆ ಎಂದು ವಿಶ್ವ ಸಂಸ್ಥೆ ವರದಿ ಮಾಡಿದೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ಇನ್ನು ಆಳವಾಗಿ ವರದಿ ಪಠಿಸಿರುವ ವಿಶ್ವ ಸಂಸ್ಥೆಯು ಹೆಲ್ಮೆಟ್ ನಿಂದಾಗಿ ಭಾರತದಲ್ಲಿ ವರ್ಷಂಪ್ರತಿ 15,000 ದಷ್ಟು ಜೀವಗಳನ್ನು ರಕ್ಷಿಸಬಹುದಾಗಿತ್ತು ಎಂಬ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ಭಾರತದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಅಪಘಾತಗಳು ನಡೆಯುತ್ತಿರುವುದರ ಬಗ್ಗೆ ವಿಶ್ವಸಂಸ್ಥೆ ಅತೀವ ಕಳವಳ ವ್ಯಕ್ತವಡಿಸಿದೆ. 2015ನೇ ಸಾಲಿನಲ್ಲಿ ಭಾರತದಲ್ಲಿ ದ್ವಿಚಕ್ರ ವಾಹನ ಅವಘಡದಿಂದಾಗಿ 36,800 ಮಂದಿ ಸಾವನ್ನಪ್ಪಿದ್ದಾರೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ಅಷ್ಟೇ ಅಲ್ಲದೆ ಸಾವಿಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಅಂದರೆ 93,400 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯು ತಿಳಿಸಿದೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ದ್ವಿಚಕ್ರ ಸವಾರಿಯನ್ನು ಅತ್ಯಂತ ಅಸುರಕ್ಷಿತ ಸಾರಿಗೆ ಸಂಚಾರ ಎಂದು ಬೊಟ್ಟು ಮಾಡಿರುವ ವಿಶ್ವಸಂಸ್ಥೆಯು, ಪ್ರಯಾಣಿಕ ಕಾರುಗಳನ್ನು ಹೋಲಿಸಿದಾಗ ದ್ವಿಚಕ್ರ ಸವಾರರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವ ಪ್ರಮಾಣ 26 ಪಟ್ಟು ಹೆಚ್ಚಾಗಿರುತ್ತದೆ ಎಂದಿದೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ಇದರ ಬದಲಾಗಿ ಸಮರ್ಪಕವಾದ ಹೆಲ್ಮೆಟ್ ಧರಿಸುವುದರಿಂದ ರಸ್ತೆ ಅಪಘಾತದಿಂದ ಬಚಾವಾಗುವ ಸಾಧ್ಯತೆ ಶೇಕಡಾ 42ರಷ್ಟಾಗಿದ್ದು, ಶೇಕಡಾ 69ರಷ್ಟು ಸವಾರರಿಗೆ ಗಾಯಗಾಳಾಗುವುದನ್ನು ತಪ್ಪಿಸಬಹುದಾಗಿದೆ ಎಂದಿದೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ಜಾಗತಿಕವಾಗಿ 2008ರಿಂದ 2020ರ ಅವಧಿಯ ವೇಳೆಯಾಗುವಾಗ ದ್ವಿಚಕ್ರ ಅಪಘಾತದಿಂದಾಗಿ 34 ಲಕ್ಷ ಮಂದಿ ಸಾವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಸಮರ್ಪಕವಾದ ಹೆಲ್ಮೆಟ್ ಧರಿಸುವುದರಿಂದ 14 ಲಕ್ಷದಷ್ಟು ಗಾಯಗಳಾಗುವ ಸಂಭವವನ್ನು ತಪ್ಪಿಸಬಹುದಾಗಿದೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ಕಡಿಮೆ ಹಾಗೂ ಮಧ್ಯಮ ಆದಾಯ ದೇಶಗಳಲ್ಲಿ ದ್ವಿಚಕ್ರ ವಾಹನ ಸಂಚಾರವು ಅತಿ ಮುಖ್ಯ ಘಟಕವಾಗಿ ಪರಿಣಮಿಸಿದೆ. ಹಾಗಾಗಿ ಸುರಕ್ಷಿತ ಚಾಲನೆಗೆ ಮತ್ತಷ್ಟು ಕ್ರಮವನ್ನು ಕೈಗೊಳ್ಳಬೇಕಿದೆ ಎಂದು ಸಲಹೆ ಮಾಡಿದೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ಸಮಪರ್ಕವಾದ ಹೆಲ್ಮೆಟ್ ಧರಿಸಿ ಸರಿಯಾಗಿ ಪಟ್ಟಿ ಬಂಧಿಸಿದ್ದಲ್ಲಿ ಶೇಕಡಾ 90ರಷ್ಟು ಪ್ರಕರಣಗಳಲ್ಲಿ ಸಾವನ್ನಪ್ಪುವ ಸಂಭವವನ್ನು ತಪ್ಪಿಸಬಹುದಾಗಿದೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

ದಕ್ಷಿಣ ಪೂರ್ವ ರಾಷ್ಟ್ರಗಳಲ್ಲಿ ದ್ವಿಚಕ್ರ ವಾಹನ ಅಪಘಾತಗಳು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಭಾರತದಲ್ಲಿ ಶೇಕಡಾ 78ರಷ್ಟು ವಾಹನಗಳು ದ್ವಿಚಕ್ರ ಗಾಡಿಗಳಿಂದ ತುಂಬಿಕೊಂಡಿದೆ. ವಿಯೆಟ್ನಾದಲ್ಲಿ ಈ ಪ್ರಮಾಣವು ಶೇಕಡಾ 95ರಷ್ಟಾಗಿದೆ.

ಹೆಲ್ಮೆಟ್ ಧರಿಸುವುದರಿಂದ ವರ್ಷಂಪ್ರತಿ 15,000 ಜೀವಗಳ ರಕ್ಷಣೆ

2020ರ ವೇಳೆಯಾಗುವಾಗ ಕಡಿಮೆ ಹಾಗೂ ಮಧ್ಯಮ ಆದಾಯ ದೇಶಗಳಲ್ಲಿ ಮೋಟಾರ್ ಸೈಕಲ್ ಸಾವಿನ ಪ್ರಮಾಣ ಶೇಕಡಾ 99ರಷ್ಟಾಗಿ ಏರುವ ಭೀತಿಯಿದೆ.

Most Read Articles

Kannada
English summary
Helmets Can Save 15,000 Lives Every Year: United Nations Study
Story first published: Monday, December 5, 2016, 10:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X