ಹೀರೊ ಡಾನ್ 100 ಜೊತೆಗೆ 125, 150 ಸಿಸಿ ಬೈಕ್ ಗಳು ಭಾರತಕ್ಕೆ?

Written By:

ಭಾರತದಲ್ಲಿ ಸಿಡಿ ಡಾನ್ 100 ಸಿಸಿ ಬೈಕ್ ಮಾರಾಟದಲ್ಲಿದೆ. ಈಗ ಡಾನ್ ಶ್ರೇಣಿಯ ಬೈಕ್ ಗಳನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯಲ್ಲಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್, ನೂತನ ಮಾದರಿಗಳ ಎಕ್ಸ್ ಕ್ಲೂಸಿವ್ ವಿಡಿಯೋವನ್ನು ಪ್ರದರ್ಶಿಸಿದೆ.

ಹೀರೊ ಡಾನ್ 100 ಸಿಸಿ ಬೈಕ್ ಜೊತೆಗೆ ಡಾನ್ 125 ಹಾಗೂ ಡಾನ್ 150 ಸಿಸಿ ಮಾದರಿಗಳ ವಿಡಿಯೋವನ್ನು ಬಿಡುಗಡೆಗೊಳಿಸಲಾಗಿದೆ. ಇದು ಯಾವಾಗ ಭಾರತ ಮಾರುಕಟ್ಟೆಯನ್ನು ತಲುಪಲಿದೆ ಎಂಬುದು ಬಹಲ ಕುತೂಹಲ ಮೂಡಿಸಿದೆ.

ಹೀರೊ ಡಾನ್ 100 ಜೊತೆಗೆ 125, 150 ಸಿಸಿ ಬೈಕ್ ಗಳು ಭಾರತಕ್ಕೆ?

ಜಾಗತಿಕ ಮಾರುಕಟ್ಟೆಯನ್ನು ಪರಿಗಣಿಸಿದಾಗ ಹೀರೊ 100 ಸಿಸಿ ಜೊತೆಗೆ 125 ಸಿಸಿ ಮಾದರಿಗಳು ಮಾರಾಟದಲ್ಲಿದೆ. ಇದಕ್ಕೀಗ 150 ಸಿಸಿ ಮಾದರಿಯು ಸೇರ್ಪಡೆಗೊಂಡಿದೆ.

ಹೀರೊ ಡಾನ್ 100 ಜೊತೆಗೆ 125, 150 ಸಿಸಿ ಬೈಕ್ ಗಳು ಭಾರತಕ್ಕೆ?

ಭಾರತದಲ್ಲಿ ಡಾನ್ 125 ಹಾಗೂ 150 ಸಿಸಿ ಮಾದರಿಗಳು ಬಿಡುಗಡೆಯಾಗಲಿದೆಯೇ ಎಂಬುದಕ್ಕೆ ಸಂಸ್ಥೆಯು ಸ್ಪಷ್ಟನೆ ನೀಡಿಲ್ಲ. ಹಾಗೊಂದು ವೇಳೆ ಇದು ಭಾರತ ಪ್ರವೇಶಿಸಿದ್ದಲ್ಲಿ ಗರಿಷ್ಠ ಮಾರಾಟವನ್ನು ಗಿಟ್ಟಿಸಿಕೊಳ್ಳಲಿದೆ.

ಹೀರೊ ಡಾನ್ 100 ಜೊತೆಗೆ 125, 150 ಸಿಸಿ ಬೈಕ್ ಗಳು ಭಾರತಕ್ಕೆ?

ಹೀರೊ ಡಾನ್ 100 ಸಿಸಿ ಮಾದರಿಯು ಸುಧಾರಿತ ಎಂಜಿನ್ ಜೊತೆಗೆ ಹಿಂದುಗಡೆ ಹೆಚ್ಚು ಅಗಲವಾದ ಸೀಟುಗಳನ್ನು ಪಡೆದಿದೆ. ಇದರಲ್ಲಿರುವ 97.2 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್ ಸಿ ಎಂಜಿನ್ 8.05 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೀರೊ ಡಾನ್ 100 ಜೊತೆಗೆ 125, 150 ಸಿಸಿ ಬೈಕ್ ಗಳು ಭಾರತಕ್ಕೆ?

ಹಿಂದಿನ ಮಾದರಿ ಹೋಲಿಸಿದಾಗ ಡಾನ್ 100, ಗಮನಾರ್ಹ ಬದಲಾವಣೆಗಳನ್ನು ಪಡೆದಿದೆ. ಅಲ್ಲದೆ ನಾಯ್ಸ್, ವೈಬ್ರೇಷನ್ ಹಾಗೂ ಹಾರ್ಶ್ ನೆಶ್ (ಎನ್‌ವಿಎಚ್) ಮಟ್ಟ ಕಡಿಮೆಯಾಗಿದ್ದು, ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಹೀರೊ ಡಾನ್ 100 ಜೊತೆಗೆ 125, 150 ಸಿಸಿ ಬೈಕ್ ಗಳು ಭಾರತಕ್ಕೆ?

ಇನ್ನೊಂದೆಡೆ ಟಾಂಜಾನಿಯಾ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಡಾನ್ 125 ಮಾದರಿಯಲ್ಲಿರುವ 124.7 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್ ಸಿ ಎಂಜಿನ್ 10.35 ಎನ್ ಎಂ ತಿರುಗುಬದಲ್ಲಿ 9 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ನೂತನ ಮಾದರಿಯೀಗ ವಿಷಮ ಸಮಾನಾಂತರ ಚತುರ್ಭುಜಾಕಾರದ ಹೆಡ್ ಲೈಟ್ ಇತ್ಯಾದಿ ವ್ಯವಸ್ಥೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ಹೀರೊ ಡಾನ್ 100 ಜೊತೆಗೆ 125, 150 ಸಿಸಿ ಬೈಕ್ ಗಳು ಭಾರತಕ್ಕೆ?

ಹಾಗೆಯೇ ನೂತನ ಡಾನ್ 150, ಹೀರೊ ಅಚೀವರ್ ಗೆ ಸಮಾನವಾದ ಎಟಿಎಫ್ ಟಿ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿರುವ 149.2 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್ ಸಿ ಎಂಜಿನ್ 12.80 ಎನ್ ಎಂ ತಿರುಗುಬಲದಲ್ಲಿ 13.4 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಹೀರೊ ಡಾನ್ 100 ಜೊತೆಗೆ 125, 150 ಸಿಸಿ ಬೈಕ್ ಗಳು ಭಾರತಕ್ಕೆ?

ಇನ್ನು ಬೆಲೆ ಕಡಿತದ ನಿಟ್ಟಿನಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ನೀಡಲಾಗುತ್ತಿಲ್ಲ. ಭಾರತದಲ್ಲಿ ಬಿಡುಗಡೆಯಾದ್ದಲ್ಲಿ ಸ್ಪ್ಲೆಂಡರ್ ಶ್ರೇಣಿಯ ತರಹನೇ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ.

English summary
Hero MotoCorp Reveal Three New Dawn Motorcycles In A Video
Story first published: Tuesday, August 30, 2016, 9:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark