ಎಚ್ಚರ! ಹೊಸ ಬೈಕ್ ಕೊಳ್ಳುವಾಗ 2 ಹೆಲ್ಮೆಟ್ ಕಡ್ಡಾಯ

By Nagaraja

ಬೆಂಗಳೂರಿಗರೇ ಹೊಸ ದ್ವಿಚಕ್ರ ವಾಹನ ಖರೀದಿಸುವ ಉತ್ಸಾಹದಲ್ಲಿರುವೀರಾ ? ಸ್ವಲ್ಪ ತಾಳಿ, ನಾವಿಂದು ಹೇಳುವ ವಿಚಾರವನ್ನು ಸ್ವಲ್ಪ ಗಮನವಿಟ್ಟು ಕೇಳಿ. ನಗರದೆಲ್ಲೆಡೆ ದ್ವಿಚಕ್ರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಬಳಕೆ ನಿಯಮ ಜಾರಿಗೆ ಬಂದಿರುವುದು ನಿಮಗೆಲ್ಲ ಗೊತ್ತಿರುವ ವಿಷಯ. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

Also Read: ಹೆಲ್ಮೆಟ್ ಕಡ್ಡಾಯ; ತಲೆ ಸೇಫ್ ಆದರೆ ರಸ್ತೆ ..?

ಹಾಗಿರಬೇಕೆಂದರೆ ಮಗದೊಂದು ಕಡ್ಡಾಯ ನಿಯಮಕ್ಕೆ ಮುಂದಾಗುತ್ತಿರುವ ನಗರ ಸಾರಿಗೆ ಇಲಾಖೆಯು, ಇನ್ನು ಮುಂದೆ ಹೊಸದಾಗಿ ದ್ವಿಚಕ್ರ ವಾಹನ ರಿಜಿಸ್ಟ್ರೇಷನ್ ವೇಳೆ ನೀವು ಎರಡು ಹೆಲ್ಮೆಟ್ ಗಳನ್ನು ಖರೀದಿಸಿದ್ದೀರಿ ಎಂಬುದನ್ನು ಸಾಬೀತುಪಡಿಸುವ ರಸೀದಿಯನ್ನು ಹಾಜರುಪಡಿಸಬೇಕಾಗುತ್ತದೆ. ಹೇಗಿದೆ ಹೊಸ ನಿಯಮ?

ಹೊಸ ಬೈಕ್ ಖರೀದಿಸುವೀರಾ? ಮೊದಲು ಎರಡು ಹೆಲ್ಮೆಟ್ ಸಾಬೀತುಪಡಿಸಿ!

ದಾವಣಗೆರೆ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಇಂತಹದೊಂದು ನಿಮಯವನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಈಗ ಬೆಂಗಳೂರು ಮತ್ತಿತ್ತರ ನಗರಗಳಿಗೂ ವ್ಯಾಪಿಸಲಾಗುತ್ತಿದೆ.

ಐಎಸ್‌ಐ ಸರ್ಟಿಫಿಕೇಟ್

ಐಎಸ್‌ಐ ಸರ್ಟಿಫಿಕೇಟ್

ಐಎಸ್‌ಐ ಮಾನ್ಯತಾ ಪಡೆದ ಹೆಲ್ಮೆಟ್ ಗಳನ್ನೇ ನೀವು ಖರೀದಿಸಬೇಕಾಗುತ್ತದೆ. ಇಲ್ಲವಾದ್ದಲ್ಲಿ ಬೈಕ್ ರಿಜಿಸ್ಟ್ರೇಷನ್ ಮಾಡಲು ನಿಮಗೆ ತೊಂದರೆ ಎದುರಾಗಲಿದೆ.

ರಸೀದಿ ಹಾಜರುಪಡಿಸಿ

ರಸೀದಿ ಹಾಜರುಪಡಿಸಿ

ಅಂಗಡಿಗಳಿಂದ ಎರಡು ಹೆಲ್ಮೆಟ್ ಗಳನ್ನು ಪಡೆದ ರಸೀದಿಯನ್ನು (ಬಿಲ್) ಹಾಜರುಪಡಿಸಬೇಕಾಗುತ್ತದೆ. ಅಂದರೆ ರಸ್ತೆ ಬದಿಗಳಿಂದ ದೊರಕುವ ಕಡಿಮೆ ಬೆಲೆಯ ಹೆಲ್ಮೆಟ್ ಗಳಿಗೆ ಇಲ್ಲಿ ಬ್ರೇಕ್ ಬೀಳಲಿದೆ.

ಹೊಸ ಬೈಕ್ ಖರೀದಿಸುವೀರಾ? ಮೊದಲು ಎರಡು ಹೆಲ್ಮೆಟ್ ಸಾಬೀತುಪಡಿಸಿ!

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬಹಳ ಸಮಯಗಳಿಂದ ಮೀನಾಮೇಷ ಎದುರಿಸುತ್ತಿದ್ದ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮವನ್ನು ಕೊನೆಗೂ 2016 ವರ್ಷಾರಂಭದಲ್ಲಿ ಜಾರಿಗೆ ತರಲಾಗಿತ್ತು.

ಹೊಸ ಬೈಕ್ ಖರೀದಿಸುವೀರಾ? ಮೊದಲು ಎರಡು ಹೆಲ್ಮೆಟ್ ಸಾಬೀತುಪಡಿಸಿ!

ಮೋಟಾರು ವಾಹನ ಕಾಯ್ದೆ ಪ್ರಕಾರ ಬೈಕ್ ಗಳನ್ನು ಮಾರಾಟ ಮಾಡುವ ಡೀಲರ್ ಗಳೇ ಹೆಲ್ಮೆಟ್ ಗಳನ್ನು ಒದಗಿಸಬೇಕಾಗುತ್ತದೆ. ಪ್ರಸ್ತುತ ದ್ವಿಚಕ್ರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ ರಾಜ್ಯದೆಲ್ಲೆಡೆ ಕಟ್ಟುನಿಟ್ಟಿನಲ್ಲಿ ಜಾರಿಗೆ ಬರಲಿದೆ.

ಹೊಸ ಬೈಕ್ ಖರೀದಿಸುವೀರಾ? ಮೊದಲು ಎರಡು ಹೆಲ್ಮೆಟ್ ಸಾಬೀತುಪಡಿಸಿ!

ಈ ಎಲ್ಲದರ ನಡುವೆ ಗ್ರಾಹಕರಿಗೆ ಸಮಸ್ಯೆ ಇಮ್ಮಡಿಯಾಗಲಿರುವುದಂತೂ ನಿಜ. ಆಗಲೇ ಹೆಲ್ಮೆಟ್ ಇರುವವರು ಹೊಸ ಬೈಕ್ ಖರೀದಿಸಬೇಕೆಂದರೆ ಏನು ಮಾಡಬೇಕು? ಎಂದು ಸವಾರರೊಬ್ಬರು ಪ್ರಶ್ನಿಸುತ್ತಾರೆ.

ಹೊಸ ಬೈಕ್ ಖರೀದಿಸುವೀರಾ? ಮೊದಲು ಎರಡು ಹೆಲ್ಮೆಟ್ ಸಾಬೀತುಪಡಿಸಿ!

ನಗರದೆಲ್ಲೆಡೆ ಹೆಲ್ಮೆಟ್ ನಿಯಮವನ್ನು ಕಡ್ಡಾಯಗೊಳಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್, ಜನವರಿ ಬಳಿಕ ಚಾಲಕರ ಮತ್ತು ಹಿಂಬದಿ ಸವಾರರ ವಿರುದ್ಧ ಅನುಕ್ರಮವಾಗಿ 2.25 ಲಕ್ಷ ಮತ್ತು 2.50 ಲಕ್ಷದಷ್ಟು ದೂರುಗಳನ್ನು ದಾಖಲಿಸಿದ್ದಾರೆ.

Most Read Articles

Kannada
English summary
2 Helmets Needed To Register New Bikes In Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X