ಬಾಡಿಗೆ ಬೈಕ್ ತಾಸಿಗೆ 10 ರು. ಮಾತ್ರ; ಬಿಂದಾಸ್ ಸವಾರಿ ಮಾಡಿ

Written By:

ನೀವು ಬೆಂಗಳೂರಿಗೆ ಇದೇ ಮೊದಲ ಬಾರಿಗೆ ಭೇಟಿ ಕೊಡುತ್ತಿದ್ದೀರಾ? ಎಲ್ಲೆಲ್ಲಿ ಸುತ್ತಾಡಬೇಕೆಂಬ ಗೊಂದಲದಲ್ಲಿದ್ದೀರಾ? ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ

ಬೆಂಗಳೂರು ಮೂಲದ ರಾಯಲ್ ಬ್ರದರ್ಸ್ ಎಂಬ ಸಂಸ್ಥೆಯು ಬಾಡಿಗೆ ಬೈಕ್ ಸೇವೆಯನ್ನು ಆರಂಭಿಸಿದ್ದು, ಒಂದು ತಾಸಿಗೆ ಬರಿ 10 ರು.ಗಳನ್ನು ಮಾತ್ರ ಪಾವತಿಸಿದರಾಯಿತು. ಇನ್ನು ಮುಂದೆ ಬಿಂದಾಸ್ ಆಗಿ ಪಯಣಿಸಬಹುದಾಗಿದೆ.

To Follow DriveSpark On Facebook, Click The Like Button
ಬಾಡಿಗೆ ಬೈಕ್ ತಾಸಿಗೆ 10 ರು. ಮಾತ್ರ; ಬಿಂದಾಸ್ ಸವಾರಿ ಮಾಡಿ

ಪ್ರಾದೇಶಿಕ ಸಾರಿಗೆ ಇಲಾಖೆಯಿಂದ (ಆರ್‌ಟಿಎ) ಅಧಿಕೃತ ಮಾನ್ಯತೆ ಪಡೆದಿರುವ ರಾಜ್ಯದ ಏಕ ಮಾತ್ರ ಬಾಡಿಗೆ ಬೈಕ್ ಸಂಸ್ಥೆ ಇದಾಗಿದ್ದು, ಸಂಪೂರ್ಣ ವಿಶ್ವಾಸಾರ್ಹವೆನಿಸಿದೆ. ಅಲ್ಲದೆ 2016 ಫೆಬ್ರವರಿ 24ರಂದು ಲಾಲ್ ಬಾಗ್ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹಸಿರು ನಿಶಾನೆ ತೋರಿದ್ದಾರೆ.

ಬಾಡಿಗೆ ಬೈಕ್ ತಾಸಿಗೆ 10 ರು. ಮಾತ್ರ; ಬಿಂದಾಸ್ ಸವಾರಿ ಮಾಡಿ

ಸದ್ಯಕ್ಕೆ ಸಂಸ್ಥೆಯ ಬಳಿ 100 ಬೈಕ್ ಗಳು ಸೇವೆಯಲ್ಲಿದ್ದು, ಬೆಂಗಳೂರು ಹೊರತಾಗಿ ಮಂಗಳೂರು, ಮೈಸೂರು, ಮಣಿಪಾಲ, ಉಡುಪಿ ಹಾಗೂ ಹೊರ ರಾಜ್ಯ ಗೋವದಲ್ಲೂ ಸೇವೆ ಆರಂಭಿಸಲಾಗಿದೆ.

ಬಾಡಿಗೆ ಬೈಕ್ ತಾಸಿಗೆ 10 ರು. ಮಾತ್ರ; ಬಿಂದಾಸ್ ಸವಾರಿ ಮಾಡಿ

ಬಾಡಿಗೆಗೆ ಬೈಕ್ ಪಡೆದುಕೊಳ್ಳಲು ಇಚ್ಚಿಸುವವರು ರಾಯಲ್ ಬ್ರದರ್ಸ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು. ತದಾ ಬಳಿಕ ದೃಢೀಕರಣ ಎಸ್‌ಎಂಎಸ್ ನಿಮ್ಮ ಇನ್ ಬಾಕ್ಸ್ ಬಂದು ತಲುಪಲಿದೆ.

ಬಾಡಿಗೆ ಬೈಕ್ ತಾಸಿಗೆ 10 ರು. ಮಾತ್ರ; ಬಿಂದಾಸ್ ಸವಾರಿ ಮಾಡಿ

ಅಷ್ಟೇ ಯಾಕೆ ರಾಯಲ್ ಬ್ರದರ್ಸ್‌ನಲ್ಲಿ ನಿಮ್ಮ ಕನಸಿನ ಬೈಕ್ ರಾಯಲ್ ಎನ್ ಫೀಲ್ಡ್ ಬುಲೆಟ್ 500 ಗಂಟೆಗೆ 50 ರುಪಾಯಿಗಳಿಗೆ ಬಾಡಿಗೆಗೆ ದೊರೆಯಲಿದೆ. ಅಂತೆಯೇ ಹೋಂಡಾ ಆಕ್ಟಿವಾ ಸ್ಕೂಟರ್ ಕೂಡಾ ಸೇವೆಗೆ ಲಭ್ಯವಿರುತ್ತದೆ.

ಬಾಡಿಗೆ ಬೈಕ್

ಬಾಡಿಗೆ ಬೈಕ್

ಸದ್ಯಕ್ಕೆ ಬೆಂಗಳೂರಿನ ನಗರದ್ಯಾಂತ 25 ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಅಲ್ಲದೆ ಪ್ರತಿ ಎರಡು ಕೀ.ಮೀ. ವ್ಯಾಪ್ತಿಯಲ್ಲಿ ಬೈಕ್ ಸೇವೆ ಒದಗಿಸುವುದು ಸಂಸ್ಥೆಯ ಇರಾದೆಯಾಗಿದೆ.

ರಾಯಲ್ ಬ್ರದರ್ಸ್

ರಾಯಲ್ ಬ್ರದರ್ಸ್

ದಕ್ಷಿಣ ಭಾರತದ ಮೊದಲ ಸೆಲ್ಪ್-ರೈಡ್ ರೆಂಟಲ್ ಬೈಕ್ ಸಂಸ್ಥೆಯೆಂಬ ಗೌರವಕ್ಕೂ ಪಾತ್ರವಾಗಿರುವ ರಾಯಲ್ ಬ್ರದರ್ಸ್, ನಿಮ್ಮ ದೈನಂದಿನ ಸಂಚಾರವನ್ನು ಹೆಚ್ಚು ಸುಲಭವಾಗಿಸಲಿದೆ.

 ಬೆಂಗಳೂರಿನ ಯಾವೆಲ್ಲ ಪ್ರದೇಶದಲ್ಲಿ ಬೈಕ್ ಗಳು ಲಭ್ಯ?

ಬೆಂಗಳೂರಿನ ಯಾವೆಲ್ಲ ಪ್ರದೇಶದಲ್ಲಿ ಬೈಕ್ ಗಳು ಲಭ್ಯ?

ಇಂದಿರಾ ನಗರ, ಎಚ್ ಎಸ್ ಆರ್ ಲೇಔಟ್, ವಿಲ್ಸನ್ ಗಾರ್ಡನ್, ಬಿಟಿಎಂ ಲೇಔಟ್, ಬನಶಂಕರಿ, ರಾಜರಾಜೇಶ್ವರಿ ನಗರ, ಜಯನಗರ, ವಿದ್ಯಾರಣ್ಯಪುರ, ಹೆಬ್ಬಾಳ, ವಿಜಯ, ಮಾರತ್ ಹಳ್ಳಿ, ಯಶವಂತಪುರ ಮತ್ತು ಯಲಹಂಕ

ಯಾವೆಲ್ಲ ಬೈಕ್ ಗಳು ಸೇವೆಯಲ್ಲಿದೆ?

ಯಾವೆಲ್ಲ ಬೈಕ್ ಗಳು ಸೇವೆಯಲ್ಲಿದೆ?

ರಾಯಲ್ ಎನ್ ಫೀಲ್ಡ್ 350/500, ಥಂಡರ್ ಬರ್ಡ್ 350/500, ಎಲೆಕ್ಟ್ರಾ, ಸ್ಟ್ಯಾಂಡರ್ಡ್ 500, 500 ಕ್ರೋಮ್, ಡೆಸರ್ಟ್ ಸ್ಟ್ರೋಮ್, ಕಾಂಟಿನೆಂಟಲ್ ಜಿಟಿ ಕೆಫೆ ರೇಸಲ್ ಮತ್ತು ಹೋಂಡಾ ಆಕ್ಟಿವಾ 3ಜಿ.

 ಪಿಕಪ್, ಡ್ರಾಪ್

ಪಿಕಪ್, ಡ್ರಾಪ್

ನೀವು ಬಾಡಿಗೆಗೆ ಬೈಕ್ ಪಡೆದ ಅದೇ ಸ್ಥಳದಲ್ಲೇ ಹಿಂತಿರಿಗಿಸಿದರಾಯಿತು. ಅಲ್ಲದೆ ನಿಮ್ಮ ಬಯಕೆಯೆಂತೆಯೇ ಎಲ್ಲಿಗೂ ಬೇಕಾದರೂ ಪಯಣಿಸಬಹುದಾಗಿದೆ.

 ರಿಜಿಸ್ಟ್ರೇಷನ್, ಭದ್ರತಾ ಠೇವಣಿ

ರಿಜಿಸ್ಟ್ರೇಷನ್, ಭದ್ರತಾ ಠೇವಣಿ

ರಾಯಲ್ ಬ್ರದರ್ಸ್ ವೆಬ್ ಸೈಟ್ ನಲ್ಲಿ ನೀವು ರಿಜಿಸ್ಟ್ರೇಷನ್ ಮಾಡಿದ ಬಳಿಕ ಮರು ಪಾವತಿ ಮಾಡಬಹುದಾದ 2000 ರು.ಗಳ ಭದ್ರತಾ ಠೇವಣಿ ಪಾವತಿ ಮಾಡಬೇಕಾಗುತ್ತದೆ. ಇದನ್ನು ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಬೇಕು.

ಚಾಲನಾ ಪರವಾನಗಿ ಕಡ್ಡಾಯ

ಚಾಲನಾ ಪರವಾನಗಿ ಕಡ್ಡಾಯ

ಅಷ್ಟಕ್ಕೂ ನಿಮ್ಮ ಮಕ್ಕಳಾಟ ಇಲ್ಲಿ ನಡೆಯಲ್ಲ. ಯಾಕೆಂದರೆ ಚಾಲನಾ ಪರವಾನಗಿ ಕಡ್ಡಾಯವಾಗಿದ್ದು, ಕನಿಷ್ಠ 20 ವರ್ಷ ತುಂಬಿದವರಿಗೆ ಮಾತ್ರ ಬಾಡಿಗೆ ಬೈಕ್ ಗಿಟ್ಟಿಸಿಕೊಳ್ಳಬಹುದಾಗಿದೆ.

ಏನೆಲ್ಲ ಪ್ರಮಾಣ ಪತ್ರಗಳು ಹಾಜರುಪಡಿಸಬೇಕು?

ಏನೆಲ್ಲ ಪ್ರಮಾಣ ಪತ್ರಗಳು ಹಾಜರುಪಡಿಸಬೇಕು?

ಚಾಲನಾ ಪರವಾನಗಿ, ಗುರುತಿನ ಚೀಟಿ ಹಾಗೂ ಇತ್ತೀಚೆಗೆ ತೆಗೆದ ಫೋಟೊದ ಸಾಫ್ಟ್ ಕಾಪಿಯನ್ನು ರಿಜಿಸ್ಟ್ರೇಷನ್ ವೇಳೆ ತುಂಬಬೇಕಾಗುತ್ತದೆ. ಅಲ್ಲದೆ ಬೈಕ್ ಹಸ್ತಾಂತರದ ವೇಳೆಯಲ್ಲಿ ಇವೆಲ್ಲದರ ಮೂಲಪ್ರತಿಯನ್ನು ಹಾಜರುಪಡಿಸತಕ್ಕದ್ದು.

ಆನ್‌ಲೈನ್ ಮುಖಾಂತರ ಬುಕ್ಕಿಂಗ್

ಆನ್‌ಲೈನ್ ಮುಖಾಂತರ ಬುಕ್ಕಿಂಗ್

ಆನ್ ಲೈನ್ ಮುಖಾಂತರ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದ್ದು, ನಿಮ್ಮ ಅಗತ್ಯಗಳಿಗಾನುಸಾರವಾಗಿ ಒಂದು ತಾಸು/ಒಂದು ದಿನ/ ಒಂದು ವಾರ ಅಥವಾ ಒಂದು ತಿಂಗಳ ವರೆಗೂ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ರದ್ದತಿ

ರದ್ದತಿ

ಹಾಗೊಂದು ವೇಳೆ ಬುಕ್ಕಿಂಗ್ ರದ್ದುಗೊಳಿಸುವ ಅವಕಾಶವನ್ನು ಮಾಡಿಕೊಡಲಾಗಿದ್ದು, 24 ತಾಸಿಗೂ ಮೊದಲು ಕ್ಯಾನ್ಸಲ್ ಮಾಡುವುದಾದ್ದಲ್ಲಿ ಯಾವುದೇ ಶುಲ್ಕ ಈಡು ಮಾಡಲಾಗುವುದಿಲ್ಲ. ಇನ್ನು ನಿಗದಿತ ರೈಡಿಂಗ್ ಗಿಂತ 24ರಿಂದ 12 ತಾಸಿನ ಒಳಗಡೆ ಶೇಕಡಾ 50ರಷ್ಟು ಹಾಗೂ 12 ತಾಸಿನ ಒಳಗಡೆ ಕ್ಯಾನ್ಸಲ್ ಮಾಡಿದ್ದಲ್ಲಿ ಶೇಕಡಾ 100ರಷ್ಟು ಬುಕ್ಕಿಂಗ್ ಮೊತ್ತವನ್ನು ಈಡು ಮಾಡಲಾಗುವುದು.

ಇಂಧನ

ಇಂಧನ

ಅಂದ ಹಾಗೆ ಖಾಲಿ ಟ್ಯಾಂಕ್ ಹೊಂದಿರುವ ಗಾಡಿಯನ್ನು ನಿಮಗೆ ಹಸ್ತಾಂತರಿಸಲಿದ್ದು, ಹತ್ತಿರದ ಪೆಟ್ರೋಲ್ ಬಂಕ್ ನಿಂದ ಇಂಧನವನ್ನು ನೀವೇ ತುಂಬಬೇಕಾಗುತ್ತದೆ .

 ಯಾರು ಬೇಕಾದರೂ ಓಡಿಸಬಹುದೇ?

ಯಾರು ಬೇಕಾದರೂ ಓಡಿಸಬಹುದೇ?

ಯಾರ ಹೆಸರಿನಲ್ಲಿ ಬುಕ್ಕಿಂಗ್ ಮಾಡಲಾಗಿದೆಯೋ ಅವರೇ ಬೈಕ್ ಓಡಿಸಬೇಕಾಗಿರುವುದು ಅತ್ಯಗತ್ಯವಾಗಿದ್ದು, ಯಾವುದೇ ತೊಂದರೆಗಳು ಎದುರಾದ್ದಲ್ಲಿ ಸಂಸ್ಥೆಯು ಜವಾಬ್ದಾರಾಗಿರುವುದಿಲ್ಲ.

ಬ್ರೇಕ್ ಫೇಲ್ ಆದರೆ?

ಬ್ರೇಕ್ ಫೇಲ್ ಆದರೆ?

ಮಾನವ ನಿರ್ಮಿತ ಗಾಡಿಗಳಿಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಈ ವೇಳೆಯಲ್ಲಿ 24 ಗಂಟೆಯೂ ಸೇವೆಯಲ್ಲಿರುವ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಫೋನ್ ನಂ: 09945638068

ಬಾಡಿಗೆ ಬೈಕ್ ತಾಸಿಗೆ 10 ರು. ಮಾತ್ರ; ಬಿಂದಾಸ್ ಸವಾರಿ ಮಾಡಿ

ಹೆಚ್ಚಿನ ಮಾಹಿತಿಗಾಗಿ ರಾಯಲ್ ಬ್ರದರ್ಸ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿರಿ

Read more on bike ಬೈಕ್
English summary
Hurry rental bike at just Rs.10 per hour
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark