ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

ಮುಂಬರುವ ವರ್ಷಗಳಲ್ಲಿ ಬೃಹತ್ ಹೂಡಿಕೆ ಮಾಡಲಿರುವ ರಾಯಲ್ ಎನ್ ಫೀಲ್ಡ್, ಹೊಸ ಉತ್ಪನ್ನಗಳ ಜೊತೆಗೆ ವಿದೇಶಿ ಮಾರುಕಟ್ಟೆಯನ್ನು ಗುರಿ ಮಾಡಲಿದೆ.

By Nagaraja

ಈಚರ್ ಮೋಟಾರ್ಸ್ ಭಾಗವಾಗಿರುವ ಚೆನ್ನೈ ಮೂಲದ ರಾಯಲ್ ಎನ್ ಫೀಲ್ಡ್, 2017ನೇ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ 600 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ. ತನ್ಮೂಲಕ ಈಗ ಎದ್ದು ಬರುತ್ತಿರುವ ವಿಪರೀತ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸುವ ಗುರಿ ಹೊಂದಿದೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

ರಾಯಲ್ ಎನ್ ಫೀಲ್ಡ್ ಚೆನ್ನೈ ಹೊರವಲಯದಲ್ಲಿರುವ ವಲ್ಲಂ ವಡಗಲ್ ಘಟಕಕ್ಕೆ ಹೆಚ್ಚಿನ ಹೂಡಿಕೆಯನ್ನು ಮಾಡಲಿದೆ. ಇದು 2017 ಸೆಪ್ಟೆಂಬರ್ ತಿಂಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

ಇದರ ಹೊರತಾಗಿ ಬ್ರಿಟನ್ ನಲ್ಲಿರುವ ತಾಂತ್ರಿಕ ಕೇಂದ್ರ ಮತ್ತು ಹೊಸ ಉತ್ಪನ್ನಗಳ ಅಭಿವೃದ್ಧಿಗೂ ರಾಯಲ್ ಎನ್ ಫೀಲ್ಡ್ ಹೂಡಿಕೆಯನ್ನು ಮೀಸಲಿರಿಸಿದೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

2019ನೇ ಆರ್ಥಿಕ ಸಾಲು ಆಗಮನದ ವೇಳೆಯಲ್ಲಿ ವಾರ್ಷಿಕವಾಗಿ 9,00,000 ಯುನಿಟ್ ಗಳ ನಿರ್ಮಾಣ ಸಾಮರ್ಥ್ಯ ಹೊಂದುವುದು ಎನ್ ಫೀಲ್ಡ್ ಗುರಿಯಾಗಿದೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

ವಾಹನ ಪ್ರೇಮಿಗಳಿಗೆ ಮತ್ತಷ್ಟು ಸಂತಸದ ಸುದ್ದಿ ತಂದಿರುವ ಆರ್ ಇ, ಮುಂದಿನ ಒಂದೆರಡು ವರ್ಷಗಳಲ್ಲಿ ನೂತನ ಮಾಡೆಲ್ ಹಾಗೂ ಪರಿಷ್ಕೃತ ವೆರಿಯಂಟ್ ಗಳನ್ನು ಹೊರತರುವುದಾಗಿ ಘೋಘಿಸಿದೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

ಪ್ರಸಕ್ತ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕ ಅವಧಿಯ ಲಾಭಾಂಶದ ಕುರಿತು ಮಾತನಾಡುತ್ತಾ ವಿವರಣೆ ನೀಡಿರುವ ಈಚರ್ ಮೋಟಾರ್ಸ್ ಮಹಾ ನಿರ್ದೇಶಕ ಸಿದ್ದಾರ್ಥ ಪಾಲ್, "ಹೊಸತಾಗಿ ಬಿಡುಗಡೆಗೊಂಡಿರುವ ಹಿಮಾಲಯನ್ ಗೆ ಅತ್ಯುತ್ತಮ ಬೇಡಿಕೆ ವ್ಯಕ್ತವಾಗಿದ್ದು, ಬುಕ್ಕಿಂಗ್ ಪರಿಣಾಮಕಾರಿಯಾಗಿ ಮುಂದುವರಿದಿದೆ" ಎಂದಿದ್ದಾರೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

ರಾಯಲ್ ಎನ್ ಫೀಲ್ಡ್ ಕೊನೆಯದಾಗಿ ಬಿಡುಗಡೆ ಮಾಡಿರುವ ಮಹತ್ತರ ಉತ್ಪನ್ನಗಳಲ್ಲಿ ಹಿಮಾಲಯನ್ ಒಂದಾಗಿದೆ. ಆಫ್ ರೋಡ್ ಟೂರಿಂಗ್ ಬೈಕಾಗಿರುವ ಹಿಮಾಲನಯ್ ಗಮನಾರ್ಹ ಸಾಧನೆ ಮಾಡುತ್ತಿದೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

ರಾಯಲ್ ಎನ್ ಫೀಲ್ಡ್ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಇದುವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಬರೋಬ್ಬರಿ 1981 ಕೋಟಿ ರುಪಾಯಿಗಳ ಆದಾಯ ಕಲೆ ಹಾಕಿದೆ. ತನ್ಮೂಲಕ ಶೇಕಡಾ 35ರಷ್ಟು ಏರುಗತಿಯನ್ನು ಸಾಧಿಸಿದೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

250 ಮತ್ತು ಅದಕ್ಕಿಂತಲೂ ಮೇಲ್ಪಟ್ಟ ಎಂಜಿನ್ ಸಿಸಿ ವಿಭಾಗದಲ್ಲಿ ಶೇಕಡಾ 95ರಷ್ಟು ಶೇರನ್ನು ಹೊಂದಿರುವ ರಾಯಲ್ ಎನ್ ಫೀಲ್ಡ್ ಗೆ ವಿದೇಶಿ ಬ್ರಾಂಡ್ ಗಳಿಂದ ಅಂಥದ್ದೇನು ಪೈಪೋಟಿ ಎದುರಾಗಿಲ್ಲ. ವಿದೇಶಿ ಬ್ರಾಂಡ್ ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟಗೈಯುತ್ತಿದೆ. ಇನ್ನೊಂದೆಡೆ ದೇಶೀಯವಾಗಿ ನಿರ್ಮಾಣವಾಗುವ ಎನ್ ಫೀಲ್ಡ್ ಸ್ಪರ್ಧಾತ್ಮಕ ಬೆಲೆಗಳಲ್ಲಿ ಎಂಟ್ರಿ ಕೊಟ್ಟಿರುವುದು ನೆರವಾಗಿದೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

ಭಾರತದಲ್ಲಿ ಭದ್ರವಾಗಿ ನೆಲೆಯೂರಿರುವ ರಾಯಲ್ ಎನ್ ಫೀಲ್ಡ್ ಇದುವರೆಗೆ ವಿದೇಶ ಮಾರುಕಟ್ಟೆಗಳನ್ನು ಗುರಿ ಮಾಡಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದ್ದು, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ಜೊತೆಗೆ ಯುರೋಪ್ ನ ಅಭಿವೃದ್ಧಿ ಹೊಂದಿದ ದೇಶಗಳನ್ನು ಗುರಿ ಮಾಡಲಿದೆ.

ಬೈಕ್ ಪ್ರೇಮಿಗಳಿಗೆ ಬೃಹತ್ ಯೋಜನೆಯೊಂದಿಗೆ ರಾಯಲ್ ಎನ್ ಫೀಲ್ಡ್!

ಮುಂದಿನ ವರ್ಷ ಯುರೋಪ್ ನಲ್ಲಿ 15ರಿಂದ 20ರಷ್ಟು ಹೊಸ ಡೀಲರ್ ಶಿಪ್ ತೆರೆದುಕೊಳ್ಳಲಿರುವ ಎನ್ ಫೀಲ್ಡ್, ಕೊಲಂಬಿಯಾ, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ ಗೂ ತನ್ನ ಸಾನಿಧ್ಯವನ್ನು ವಿಸ್ತರಿಸಲಿದೆ.

Most Read Articles

Kannada
English summary
Royal Enfield To Launch Something Big Early 2017
Story first published: Saturday, October 29, 2016, 17:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X