ಟಿವಿಎಸ್ ವಿಕ್ಟರ್ ಪ್ರಯಾಣಿಕ ಬೈಕ್ ಬಿಡುಗಡೆ; ಮೈಲೇಜ್ 76 ಕೀ.ಮೀ.

Written By:

ದೇಶದ ಬೈಕ್ ಪ್ರೇಮಿಗಳಿಗಾಗಿ ಒಂದೇ ದಿನದಲ್ಲಿ ಎರಡೆರಡು ಕೊಡುಗೆಗಳನ್ನು ಟಿವಿಎಸ್ ಮೋಟಾರ್ಸ್ ನೀಡಿದೆ. ಅದುವೇ ಟಿವಿಎಸ್ ಅಪಾಚೆ ಆರ್‌ಟಿಆರ್200 4ವಿ ಮತ್ತು ಟಿವಿಎಸ್ ವಿಕ್ಟರ್ ಪ್ರಯಾಣಿಕ ಬೈಕ್.

ಹಿಂದೊಮ್ಮೆ ಗರಿಷ್ಠ ಮಾರಾಟ ಗಿಟ್ಟಿಸಿಕೊಂಡಿರುವ ಟಿವಿಎಸ್ ವಿಕ್ಟರ್ ಹೊಸ ಸ್ವರೂಪದೊಂದಿಗೆ ಮಾರುಕಟ್ಟೆಗೆ ಪುನರಾಗಮನ ಮಾಡಿಕೊಂಡಿದೆ. ಈ ಹಿಂದೆ 2007 ಟಿವಿಎಸ್ ವಿಕ್ಟರ್ ಮಾರಾಟವನ್ನು ನಿಲುಗಡೆಗೊಳಿಸಲಾಗಿತ್ತು.

ಬೆಲೆ ಮಾಹಿತಿ

ಬೆಲೆ ಮಾಹಿತಿ

  • ಟಿವಿಎಸ್ ವಿಕ್ಟರ್ (ಡ್ರಮ್ ಬ್ರೇಕ್): 49,490 ರು.
  • ಟಿವಿಎಸ್ ವಿಕ್ಟರ್ (ಡಿಸ್ಕ್ ಬ್ರೇಕ್): 51,490 ರು.
ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ನೂತನ ಟಿವಿಎಸ್ ವಿಕ್ಟರ್ 110 ಸಿಸಿ 3 ವಾಲ್ವ್ ಇಕೊ ಥ್ರಸ್ಟ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 9.4 ಎನ್‌ಎಂ (6,000 rpm) ತಿರುಗುಬಲದಲ್ಲಿ 9.6 ಅಶ್ವಶಕ್ತಿ (7,500 rpm) ಉತ್ಪಾದಿಸಲಿದೆ.

ಮೈಲೇಜ್

ಮೈಲೇಜ್

ದೇಶದ ಅತ್ಯುತ್ತಮ ಮೈಲೇಜ್ ಬೈಕ್ ಗಳಲ್ಲಿ ಒಂದೆನಿಸಿಕೊಳ್ಳಲಿರುವ ಟಿವಿಎಸ್ ವಿಕ್ಟರ್ ಪ್ರತಿ ಲೀಟರ್ ಗೆ 76 ಕೀ.ಮೀ. ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಗೇರ್ ಬಾಕ್ಸ್

ಗೇರ್ ಬಾಕ್ಸ್

ಇದರಲ್ಲಿ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಲಗತ್ತಿಸಲಾಗಿದ್ದು, ಎಲೆಕ್ಟ್ರಿಕ್ ಸ್ಟ್ಯಾರ್ಟ್ ಸಹ ಪಡೆದುಕೊಂಡಿರುತ್ತದೆ.

ಭಾರ: 112 ಕೆ.ಜಿ

ಆಯಾಮ

ಆಯಾಮ

ಚಂಕ್ರಾಂತರ: 1260 ಎಂಎಂ

ಗ್ರೌಂಡ್ ಕ್ಲಿಯರನ್ಸ್: 175 ಎಂಎಂ

ಸಸ್ಪೆನ್ಷನ್

ಸಸ್ಪೆನ್ಷನ್

ಮುಂದುಗಡೆ ಟೆಲಿಸ್ಕಾಪಿಕ್ ಹಾಗೂ ಹಿಂದುಗಡೆ ಐದು ವಿಧಗಳಲ್ಲಿ ಹೊಂದಾಣಿಸಬಹುದಾದ ಹೈಡ್ರಾಲಿಕ್ ಸಿರೀಸ್ ಸ್ಪ್ರಿಂಗ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಪಡೆದುಕೊಳ್ಳಲಿದೆ.

ಇಂಧನ ಟ್ಯಾಂಕ್

ಇಂಧನ ಟ್ಯಾಂಕ್

ಅಂತೆಯೇ 2 ಲೀಟರ್ ರಿಸರ್ವ್ ಜೊತೆಗೆ ಎಂಟು ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಜೋಡಣೆಯಾಗಿರಲಿದೆ.

ಟಿವಿಎಸ್ ವಿಕ್ಟರ್ ಪ್ರಯಾಣಿಕ ಬೈಕ್ ಬಿಡುಗಡೆ

ಇನ್ನುಳಿದಂತೆ 55 ವಾಟ್ ಹೆಡ್ ಲೈಟ್, ಟ್ಯೂಬ್ ಲೆಸ್ ಚಕ್ರಗಳು, ಉದ್ದ ಹಾಗೂ ಅಗಲವಾದ ಸೀಟುಗಳು ಹಾಗೂ ಡಿಸ್ಕ್ ಬ್ರೇಕ್ ಗಳ ಸೌಲಭ್ಯವಿರುತ್ತದೆ.

ಬಣ್ಣಗಳು

ಬಣ್ಣಗಳು

ಬ್ಲೂ, ಗ್ರೇ, ಬ್ಲ್ಯಾಕ್ ಆಂಡ್ ಸಿಲ್ವರ್, ರೆಡ್, ಬ್ಲ್ಯಾಕ್, ಬ್ಲ್ಯಾಕ್ ಆಂಡ್ ರೆಡ್, ಸಿಲ್ವರ್.

Read more on ಟಿವಿಎಸ್ tvs
English summary
TVS Victor Launched In India For Rs. 49,490/-
Story first published: Wednesday, January 20, 2016, 17:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark