'ಕ್ವೀನ್ ಆಫ್ ಅರೇಬಿಯನ್ ಸೀ' ಕೊಚ್ಚಿಯಲ್ಲಿ ಮನಮೆಚ್ಚಿದ ವಿಗೊ

Written By:

ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆ, ಪುಣೆಯಲ್ಲಿ ನಡೆದ ದೀಪಾವಳಿ ಹಬ್ಬದ ಸಂಭ್ರಮದ ಬಳಿಕ ನಮ್ಮ ನಿಮ್ಮೆಲ್ಲರ ಮೆಚ್ಚಿನ ಟಿವಿಎಸ್ ವಿಗೊ ಸ್ಕೂಟರ್ ಈ ಕ್ರಿಸ್ಮಸ್ ಹಬ್ಬದ ವೇಳೆಯಲ್ಲಿ 'ಕ್ವೀನ್ ಆಫ್ ಅರೇಬಿಯನ್ ಸೀ' ಕೊಚ್ಚಿ ನಗರಕ್ಕೆ ಎಂಟ್ರಿ ಕೊಟ್ಟಿದೆ. ಕ್ರಿಸ್ಮಸ್ ಆಚರಿಸಿಕೊಳ್ಳಲು ಇದಕ್ಕಿಂತಲೂ ಮಿಗಿಲಾದ ನಗರ ಬೇರೊಂದಿಲ್ಲ ಎಂಬುದನ್ನು ಅರಿತುಕೊಂಡೇ ದೇವರ ಸ್ವಂತ ನಾಡಿನ ಕೊಚ್ಚಿ ನಗರವನ್ನು ಆಯ್ಕೆ ಮಾಡಲಾಗಿದೆ.

ವಿಶ್ವದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕ್ರಿಸ್ಮಸ್ ಹಬ್ಬದ ವೇಳೆಯಲ್ಲಿ ಸಂತ ಶುಭಾಶಯ ಸಂದೇಶವನ್ನುಸಾರಿ ಮನೆ ಮನೆಗೆ ತಲುಪುತ್ತಾನೆ. ಇದರಂತೆ ನಮ್ಮ ತಂಡವು ಕೊಚ್ಚಿ ನಗರಕ್ಕೆ ಭೇಟಿ ಕೊಟ್ಟಿತ್ತು.

ನಮ್ಮ ಸವಾರಿಗೆ ಹಿಂದಿನಿಂದಲೂ ಫೋರ್ಚುಗೀಸ್ ಪ್ರಭಾವ ಹೊಂದಿರುವ ಫೋರ್ಟ್ ಕೊಚ್ಚಿಯನ್ನು ಆಯ್ಕೆ ಮಾಡಲಾಗಿತ್ತು. ನಗರದ ಟ್ರಾಫಿಕ್ ಜಂಜಾಟದಲ್ಲೂ ಟಿವಿಎಸ್ ಸ್ಕೂಟರ್ ಭಲೇ ಭೇಷ್ ಎನಿಸಿಕೊಂಡಿತ್ತು. ಕೊಚ್ಚಿಯ ಪ್ರತಿಯೊಂದು ಬೀದಿಗಳು ಕೈಬೀಸಿ ಫೋಟೋ ಕ್ಲಿಕ್ಕಿಸುವಂತೆ ಕರೆಯುವಂತಿತ್ತು.

ಭಾರತದ ದಕ್ಷಿಣ ಪಶ್ಚಿಮ ಭಾಗದ ಅರೇಬಿಯನ್ ಸಮುದ್ರದ ತೀರದಲ್ಲಿ ಸ್ಥಿತಗೊಂಡಿರುವ ಕೊಚ್ಚಿ 14ನೇ ಶತಮಾನದಿಂದೀಚೆಗೆ ಪ್ರಮುಖ ಸಾಂಬಾರ ಪದಾರ್ಥಗಳ ವ್ಯಾಪಾರ ಕೇಂದ್ರವಾಗಿ ಬೆಳೆದು ಬಂದಿದೆ.

1503ರಲ್ಲಿ ಪೋರ್ಚುಗೀಸರಿಂದ ಆಕ್ರಮಣಕ್ಕೊಳಗಾದ ಕೊಚ್ಚಿ ನಗರದಲ್ಲಿ ಅನೇಕ ಚರ್ಚ್ ಗಳು ಇಂದಿಗೂ ಫೋರ್ಚುಗೀಸ್ ಜೊತೆಗೆ ನಂಟನ್ನು ಹೊಂದಿದೆ. ಯೇಸು ಕ್ರಿಸ್ತ ಜನನದ ಮಧ್ಯರಾತ್ರಿಯಂದು ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು.

ವಿವಿಧ ಚಿತ್ತಾಕರ್ಷಕ ವರ್ಣಾಂಲಕಾರದಿಂದ ಕೂಡಿದ ಇಗರ್ಜಿಗಳಲ್ಲಿ ಗೋದಲಿಯು ವಿಶೇಷ ಆಕರ್ಷಣೆಯಾಗಿತ್ತು. ಕ್ರೈಸ್ತ ಮತ ಬಾಂಧವರ ಮನೆಗಳಲ್ಲಿ ವಿಶೇಷ ಸಂಭ್ರಮದ ವಾತಾವರಣವು ಮನೆ ಮಾಡಿತ್ತು. ಸ್ವಾದಿಷ್ಟವಾದ ಭೋಜನ, ಹೊಸ ಬಟ್ಟೆ ಬರೆ, ಪಟಾಕಿ ಸಿಡಿಸಿ ತಮ್ಮ ಬಂಧು ಮಿತ್ರರೊಂದಿಗೆ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದರು. ಈ ಎಲ್ಲ ಹಬ್ಬದ ಸಂಭ್ರಮದಲ್ಲಿ ಗರಿಷ್ಠ ಇಂಧನ ಕ್ಷಮತೆಯನ್ನು ಹೊಂದಿರುವ ಟಿವಿಎಸ್ ವಿಗೊ ಭಾಗಿಯಾಗಿತ್ತು.

ಟಿವಿಎಸ್ ವಿಗೊದಲ್ಲಿರುವ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಗಳು ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡುತ್ತದೆ. ಸೀಟು ಕೆಳಗಡೆ ಬೇಕಾದಷ್ಟು ಜಾಗ ನೀಡಲಾಗಿದ್ದು, ಕ್ರಿಸ್ಮಸ್ ಉಡುಗೊರೆಗಳನ್ನಿಡಲು ಸಾಕಾಷ್ಟು ಜಾಗ ನೀಡಲಿದೆ. ಇದರಲ್ಲಿರುವ ಚಾರ್ಜಿಂಗ್ ಪೋರ್ಟ್ ಸಹ ಹಬ್ಬವನ್ನು ಮತ್ತಷ್ಟು ಮೆರಗಿನಿಂದ ಆಚರಿಸಲು ನೆರವಾಗಲಿದೆ.

ಕೇರಳದ ವಾಣಿಜ್ಯ ನಗರಿ ಕೊಚ್ಚಿಯ ಆರ್ಥಿಕತೆಯಲ್ಲಿ ಪ್ರವಾಸೋದ್ಯಮವು ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿನ ಬಂದರಿನಿಂದ ತೆರಳುವ ವಿಹಾರ ನೌಕೆ ಈಜಾಟವನ್ನು ನೋಡವುದೇ ಮನಸ್ಸಿಗೆ ಒಂಥರ ಖುಷಿಯನ್ನು ನೀಡುತ್ತದೆ. ಇಲ್ಲಿ ಟಿವಿಎಸ್ ವೃದುತ್ವ ನಮ್ಮನ್ನು ನೆನಪಿಸಿಕೊಳ್ಳುತ್ತದೆ.

ಇಡೀ ಕೊಚ್ಚಿ ಬೃಹತ್ ನಗರವಾಗಿ ಮಾರ್ಪಾಡುಗೊಳ್ಳುತ್ತಿದ್ದು, ಇಲ್ಲಿ ದೈನಂದಿನ ಪ್ರಯಾಣಕ್ಕೆ ಟಿವಿಎಸ್ ವಿಗೊ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಿನ್ನೀರುಗಳಿಂದ ಕೂಡಿರುವ ಕೊಚ್ಚಿಯಲ್ಲಿ ಸರಳ ಚಾಲನೆಯ ವಿಗೊ ಎಲ್ಲ ಹಂತದಲ್ಲೂ ಹೊಂದಿಕೆಯಾಗಲಿದೆ.

ಮೀನುಗಾರಿಕೆ ಕೊಚ್ಚಿ ಹೃದಯಕ್ಕೆ ನಂಟನ್ನು ಹೊಂದಿದೆ. ಪ್ರವಾಸೋದ್ಯಮ ತರಹನೇ ಈ ತೀರ ಪ್ರದೇಶದಲ್ಲಿ ಮೀನುಗಾರಿಕೆಗೆ ಹೆಚ್ಚಿನ ಮಹತ್ವವಿದೆ. ಸಮುದ್ರದಲ್ಲಿ ಈಜಾಡುವ ಕಲರ್ ಫುಲ್ ಮೀನುಗಳಂತೆ ಟಿವಿಎಸ್ ವಿಗೊ ಸಹ ವಿವಿಧ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಸಮುದ್ರ ತೀರದಲ್ಲಿ ಸಾಯನ್ನದ ವೇಳೆಯಲ್ಲಿ ನಮ್ಮ ಟಿವಿಎಸ್ ವಿಗೊ ಸಹ ಕ್ರಿಸ್ಮಸ್ ಹಬ್ಬವನ್ನು ಬರಮಾಡಿಕೊಳ್ಳಲು ಸಜ್ಜಾಗಿತ್ತು. ಕೊಚ್ಚಿ ನಗರದೆಲ್ಲೆಡೆ ಬಿಡುವಿಲ್ಲದ ವಾತಾವರಣದಲ್ಲಿ ಸಮುದ್ರ ತೀರದಲ್ಲಿ ಬೀಸುವ ಗಾಳಿಯು ಟಿವಿಎಸ್ ವಿಗೊ ಜೊತೆ ನಮ್ಮ ಮನಸ್ಸಿಗೆ ಉಲ್ಲಾಸವನ್ನು ತುಂಬಿತ್ತು.

 

 

Read more on ಟಿವಿಎಸ್ tvs
English summary
Here #Wego: Feliz Navidad In Cochin - Part 1
Story first published: Wednesday, December 28, 2016, 11:12 [IST]
Please Wait while comments are loading...

Latest Photos