ಅಗ್ಗದ ಬೆಲೆಯ ಸೂಪರ್ ಬೈಕ್ ಉತ್ಪಾದನೆಗೆ ಕೈಜೋಡಿಸಿದ ಟ್ರಯಂಫ್-ಬಜಾಜ್

Written By:

ಜಾಗತಿಕವಾಗಿ ಸೂಪರ್ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ಟ್ರಯಂಫ್ ಮತ್ತು ಬಜಾಜ್ ಸಂಸ್ಥೆಗಳು ಅಗ್ಗದ ಬೆಲೆಯ ಸೂಪರ್ ಬೈಕ್‌ಗಳ ತಯಾರಿಕೆಗೆ ಕೈ ಜೋಡಿಸಿವೆ.

To Follow DriveSpark On Facebook, Click The Like Button
ಅಗ್ಗದ ಬೆಲೆಯ ಸೂಪರ್ ಬೈಕ್ ಉತ್ಪಾದನೆಗೆ ಕೈಜೋಡಿಸಿದ ಟ್ರಯಂಫ್-ಬಜಾಜ್

ದೇಶಿಯವಾಗಿ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಸಂಸ್ಥೆಯು ಟ್ರಯಂಫ್ ಜೊತೆ ಕೈಜೋಡಿಸಿದ್ದು, ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಮಧ್ಯಮ ಕ್ರಮಾಂಕದ ಸೂಪರ್ ಬೈಕ್‌ಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿವೆ.

ಅಗ್ಗದ ಬೆಲೆಯ ಸೂಪರ್ ಬೈಕ್ ಉತ್ಪಾದನೆಗೆ ಕೈಜೋಡಿಸಿದ ಟ್ರಯಂಫ್-ಬಜಾಜ್

ಸಾಮಾನ್ಯವಾಗಿ ಟ್ರಯಂಫ್ ಬೈಕ್‌ಗಳ ಬೆಲೆಗಳು ರೂ.5 ಲಕ್ಷಕ್ಕಿಂತ ಹೆಚ್ಚಿದ್ದು, ಸೂಪರ್ ಬೈಕ್ ಖರೀದಿಸುವ ಮಧ್ಯಮ ವರ್ಗದ ಜನತೆಗೆ ಅವು ದುಬಾರಿ ಎನ್ನಿಸದೇ ಇರಲಾರದು.

ಅಗ್ಗದ ಬೆಲೆಯ ಸೂಪರ್ ಬೈಕ್ ಉತ್ಪಾದನೆಗೆ ಕೈಜೋಡಿಸಿದ ಟ್ರಯಂಫ್-ಬಜಾಜ್

ಹೀಗಾಗಿ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಯೋಜನೆ ಕೈಗೊಂಡಿರುವ ಟ್ರಯಂಫ್ ಸಂಸ್ಥೆಯು, ದೇಶಿಯ ಮಾರುಕಟ್ಟೆಯಲ್ಲಿ ಅಗ್ಗದ ಬೈಕ್ ಉತ್ಪಾದನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಜೊತೆಗಿನ ಸಹಭಾಗಿತ್ವಕ್ಕೆ ಸಹಿ ಹಾಕಿದೆ.

ಅಗ್ಗದ ಬೆಲೆಯ ಸೂಪರ್ ಬೈಕ್ ಉತ್ಪಾದನೆಗೆ ಕೈಜೋಡಿಸಿದ ಟ್ರಯಂಫ್-ಬಜಾಜ್

ಇದರಿಂದ ಅಗ್ಗದ ಬೆಲೆಯ ಬಜಾಜ್ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೊಸ ಮಾದರಿಯ ಬೈಕ್‌ಗಳನ್ನು ಉತ್ಪಾದನೆ ಮಾಡಲಿರುವ ಟ್ರಯಂಫ್ ಸಂಸ್ಥೆಯು, ರೂ.2.50 ಲಕ್ಷದಿಂದ ರೂ.3 ಲಕ್ಷದವರೆಗಿನ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ.

ಅಗ್ಗದ ಬೆಲೆಯ ಸೂಪರ್ ಬೈಕ್ ಉತ್ಪಾದನೆಗೆ ಕೈಜೋಡಿಸಿದ ಟ್ರಯಂಫ್-ಬಜಾಜ್

ಇನ್ನು ಟ್ರಯಂಫ್ ಜೊತೆ ಅಷ್ಟೇ ಅಲ್ಲದೇ ಡುಕಾಟಿ ಜೊತೆಯೂ ಕೈಜೋಡಿಸಲು ಮುಂದಾಗಿರುವ ಬಜಾಜ್ ಸಂಸ್ಥೆಯು, ಸದ್ಯದಲ್ಲೇ ಅಧಿಕೃತವಾಗಿ ಸಹಿ ಹಾಕುವ ಸಾಧ್ಯತೆಯಿದೆ. ಈ ಮೂಲಕ ಸೂಪರ್ ಬೈಕ್ ಉತ್ಪಾದಕರೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಠಿಸಲು ಬಜಾಜ್ ಬೃಹತ್ ಯೋಜನೆ ಹೊಂದಿದೆ.

ಅಗ್ಗದ ಬೆಲೆಯ ಸೂಪರ್ ಬೈಕ್ ಉತ್ಪಾದನೆಗೆ ಕೈಜೋಡಿಸಿದ ಟ್ರಯಂಫ್-ಬಜಾಜ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಸೂಪರ್ ಬೈಕ್‌ಗಳ ಮಾರಾಟ ಹೆಚ್ಚಳಕ್ಕೆ ಹೊಸ ಹೊಸ ನೀತಿ ರೂಪಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಗಳು ದೇಶಿಯ ಸಂಸ್ಥೆಗಳೊಂದಿಗೆ ಕೈ ಜೋಡಿಸುತ್ತಿದ್ದು, ಇದು ಅಗ್ಗದ ದರದಲ್ಲಿ ಸೂಪರ್ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೊಸ ನಾಂದಿಯಾಗಲಿದೆ.

English summary
Read in Kannada about Triumph Motorcycles And Bajaj Auto Announce Partnership.
Story first published: Tuesday, August 8, 2017, 14:18 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark