ಬಿಎಂಡಬ್ಲ್ಯೂ ಜಿ 310ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

Written By:

ಬಿಎಂಡಬ್ಲ್ಯೂ ಜಿ 310 ಆರ್ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿರುವ ಬಹುನಿರೀಕ್ಷಿತ ಮೋಟಾರ್ ಸೈಕಲ್‌ಗಳಲ್ಲಿ ಒಂದಾಗಿದ್ದು, ತನ್ನ ಬಿಡುಗಡೆ ವಿಚಾರವನ್ನು ಖಾತ್ರಿಪಡಿಸಿದೆ.

ಬಿಎಂಡಬ್ಲ್ಯೂ ಜಿ 310ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಈ ಹಿಂದೆ, ಬಿಎಂಡಬ್ಲ್ಯೂ ಮೋಟರ್‌ರಾಡ್‌ನ ಈ ಪ್ರವೇಶ ಮಟ್ಟದ ಜಿ 310ಆರ್ ಮೋಟಾರ್‌ಸೈಕಲ್ 2017ರಲ್ಲಿ ಭಾರತದ ಮಾರುಕಟ್ಟೆಗೆ ಅಪ್ಪಳಿಸಲಿದೆ ಎನ್ನಲಾಗಿತ್ತು, ಸದ್ಯದ ಮಾಹಿತಿ ಪ್ರಕಾರ ಈ ಮೋಟಾರ್‌ಸೈಕಲ್ ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ.

ಬಿಎಂಡಬ್ಲ್ಯೂ ಜಿ 310ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

2018ರಲ್ಲಿ ಬಿಡುಗಡೆಗೊಳ್ಳಲಿರುವ ಈ ಜಿ 310ಆರ್ ಮೋಟಾರ್‌ಸೈಕಲ್‌ನ ನಿಖರ ಬಿಡುಗಡೆ ದಿನಾಂಕವನ್ನು ತಯಾರಕರು ಇನ್ನೂ ಚರ್ಚಿಸುತ್ತಿದ್ದು, ಸದ್ಯದರಲ್ಲಿಯೇ ತಿಳಿಸಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

ಬಿಎಂಡಬ್ಲ್ಯೂ ಜಿ 310ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಬಿಎಂಡಬ್ಲ್ಯು ಮೋಟರ್‌ರಾಡ್‌ನ ಜಿ310 ಜಿಎಸ್ ಮೋಟಾರ್‌ಸೈಕಲ್‌ ಅನಾವರಣಗೊಳ್ಳಲಿರುವುದು ಖಾತ್ರಿಯಾಗಿದ್ದರೂ ಸಹ ಟೂರಿಂಗ್ ಅವತಾರ್ ಆದಂತಹ ಜಿ 310 ಆರ್ ಬಿಡುಗಡೆಯ ಬಗ್ಗೆ ಅನುಮಾನವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಎಂಡಬ್ಲ್ಯೂ ಜಿ 310ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಆರ್ 1200ಆರ್ ನಿಂದ ಕೆ 1600 ಜಿಟಿಎಲ್ ವರೆಗಿನ ಪ್ರೀಮಿಯಂ ಮೋಟಾರ್‌ಸೈಕಲ್‌ಗಳ ಮೂಲಕ ತನ್ನ ಬಿಎಂಡಬ್ಲ್ಯೂ ಮೋಟರ್‌ರಾಡ್‌ ಕಾರ್ಯಾಚರಣೆಗಳನ್ನು ಭಾರತದಲ್ಲಿ ಪ್ರಾರಂಭಿಸಿತು. ಸದ್ಯ ಭಾರತದ ಮಾರುಕಟ್ಟೆಯ ಕಡೆ ಹೆಚ್ಚು ಗಮನ ಹರಿಸಲು ಬಿಎಂಡಬ್ಲ್ಯೂ ಮುಂದಾಗಿದೆ.

ಬಿಎಂಡಬ್ಲ್ಯೂ ಜಿ 310ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಪ್ರಸ್ತುತ, ಬಿಎಂಡಬ್ಲ್ಯೂ ಸಂಸ್ಥೆ ಭಾರತ ದೇಶದಲ್ಲಿ ನಾಲ್ಕು ಡೆಲೆರ್‌ಶಿಪ್ ಹೊಂದಿದ್ದು, 2018ರೊಳಗೆ ಇನ್ನೂ 3 ಡೀಲರ್‌ಶಿಪ್ ಘಟಕಕಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ.

ಬಿಎಂಡಬ್ಲ್ಯೂ ಜಿ 310ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಬಿಎಂಡಬ್ಲ್ಯು ಜಿ 310ಆರ್ ಮೋಟಾರ್ ಸೈಕಲ್ 313ಸಿಸಿ ಎಂಜಿನ್ ಹೊಂದಿದ್ದು, 28 ಏನ್‌ಎಂ ತಿರುಗುಬಲದಲ್ಲಿ 33.5 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. ಈ ಮೋಟಾರ್ ಸೈಕಲ್ 6 ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಬಿಎಂಡಬ್ಲ್ಯೂ ಜಿ 310ಆರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಭಾರತದಲ್ಲಿ ಟಿವಿಎಸ್ ಸಂಸ್ಥೆಯ ಹೊಸೂರು ಘಟಕದಲ್ಲಿ ಜಿ 310 ಆರ್ ಮೋಟಾರ್ ಸೈಕಲ್ ತಯಾರಿಸಲಾಗುತ್ತಿದೆ ಮತ್ತು ಭಾರತದಲ್ಲಿ ಬಿಡುಗಡೆಯ ನಂತರ ಕೆಟಿಎಂ ಡ್ಯೂಕ್ 390 ಮತ್ತು ಬೆನೆಲ್ಲಿ ಟಿಎನ್‌ಟಿ 300 ಬೈಕುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

English summary
Read in Kannda about BMW G 310 R will be launched in India in 2018, But the exact launch date is not yet confirmed as the automaker is still discussing the India launch.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark