ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಮತ್ತಷ್ಟು ಚಿತ್ರಗಳು ಸೋರಿಕೆ

Written By:

2017ರ EICMA ಮೋಟಾರ್ ಸೈಕಲ್ ಪ್ರದರ್ಶನದಲ್ಲಿ ಪ್ರಥಮ ಬಾರಿಗೆ ಪ್ರವೇಶಿಸಲಿರುವ ಡುಕಾಟಿ ವಿ4 210 ಬಿಎಚ್‌‌ಪಿ ಡೆಸ್ಮೋಸೇಡಿಸಿ ಸ್ಟ್ರಾಡೇಲ್ ಎಂಜಿನ್ ಪಡೆದ ಬೈಕ್ ಚಿತ್ರಗಳು ಸೋರಿಕೆಯಾಗಿವೆ.

To Follow DriveSpark On Facebook, Click The Like Button
ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಮತ್ತಷ್ಟು ಚಿತ್ರಗಳು ಸೋರಿಕೆ

ಹೊಸ ವಿ4 210 ಬಿಎಚ್‌‌ಪಿ ಡೆಸ್ಮೋಸೇಡಿಸಿ ಸ್ಟ್ರಾಡೇಲ್ ಎಂಜಿನ್ ಪಡೆದ ಬೈಕ್ ಅನಾವರಣಗೊಳಿಸಲು ಇಟಾಲಿಯನ್ ಸೂಪರ್ ಬೈಕ್ ಉತ್ಪಾದಕ ಕಂಪೆನಿಯಾದ ಡುಕಾಟಿ ಈ ತಿಂಗಳ ಸಿದ್ಧತೆ ನೆಡೆಸುತ್ತಿದ್ದು, ಈ ಬೈಕಿನ ಮತ್ತಷ್ಟು ರಹಸ್ಯ ಚಿತ್ರಗಳು ಬಿಡುಗಡೆಯಾಗಿವೆ.

ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಮತ್ತಷ್ಟು ಚಿತ್ರಗಳು ಸೋರಿಕೆ

ಈಗಾಗಲೇ ಪಾನಿಗಲೆ ಮೊನಿಕರ್ ಹೆಸರನ್ನು ವಿ4 ಸೂಪರ್ ಬೈಕ್‌ಗಳಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಡುಕಾಟಿ ದೃಢಪಡಿಸಿದ್ದು, ಹೆಸರು ಮಾತ್ರವಲ್ಲದೆ, ಒಟ್ಟಾರೆ ವಿನ್ಯಾಸವನ್ನೂ ಸಹ ಹಿಂದಿನ ಮಾದರಿಯಂತೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.

ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಮತ್ತಷ್ಟು ಚಿತ್ರಗಳು ಸೋರಿಕೆ

ಹೊಸ ಮಾದರಿಯಲ್ಲಿ ಸೈಡ್ ಮೌಂಟೆಡ್ ರಿಯರ್ ಶಾಕ್ ತೆಗೆದು ಹಾಕಿದ್ದು, ಈ ಜಾಗಕ್ಕೆ ಹೊಚ್ಚ ಹೊಸ ತಂತ್ರಜ್ಞಾನ ಪಡೆದ ಮತ್ತು ಲಂಬವಾಗಿ ಜೋಡಿಸಲಾದ ಸಿಂಗಲ್ ಸೈಡ್ ಸ್ವಿಂಗ್‌ಆರ್ಮ್ ನೋಡಬಹುದಾಗಿದೆ.

ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಮತ್ತಷ್ಟು ಚಿತ್ರಗಳು ಸೋರಿಕೆ

ಹಳೆಯ ಮಾದರಿಗೆ ಕೊಂಚ ಮಟ್ಟಿಗೆ ಹೋಲಿಕೆ ಇರುವಂತಹ ಈ ಪ್ಯಾನಿಗಲೆ ಮೋಟಾರ್ ಸೈಕಲ್ ಸೂಕ್ಷ್ಮವಾಗಿ ಗಮನಿಸಿದಾಗ, ಮೋಟರ್ ಸೈಕಲ್‌ನ ದೇಹರಚನೆಯ ಬಗ್ಗೆ ಬದಲಾವಣೆಗಳನ್ನು ಕಾಣಬಹುದಾಗಿದೆ.

ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಮತ್ತಷ್ಟು ಚಿತ್ರಗಳು ಸೋರಿಕೆ

ಭಾರತದಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಈಗಾಗಲೇ ಗಳಿಸಿಕೊಂಡಿರುವ ಡುಕಾಟಿ ಸಂಸ್ಥೆಯು ಕಂಪನಿಯ ಈ ನವೀನ ಮಾದರಿಯ ಡುಕಾಟಿ ವಿ4 ಸೂಪರ್‌ ಬೈಕ್ ವಿಭಜನೆಗೊಂಡ ದೊಡ್ಡದಾಗಿರುವ ಹೆಡ್‌ಲೈಟ್ ಮತ್ತು ವಿಶಿಷ್ಟ ರೀತಿಯ ಏರ್ ಇನ್ಟೇಕ್ ನಾಳಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಮತ್ತಷ್ಟು ಚಿತ್ರಗಳು ಸೋರಿಕೆ

ಇನ್ನು ಹೊಚ್ಚ ಹೊಸ ವಿ4 210 ಬಿಎಚ್‌‌ಪಿ ಡೆಸ್ಮೋಸೇಡಿಸಿ ಸ್ಟ್ರಾಡೇಲ್ ಎಂಜಿನ್ ಪಡೆದ ಬೈಕ್ ಹೋಗೆ ಉಗುಳುವಾಗ ಮೊಟೊ ಜಿಪಿ ಯಂತ್ರದಂತೆ ಧ್ವನಿಸುತಿದ್ದು, ಪ್ಯಾನಿಗಲೆಗಿಂತ ಹೆಚ್ಚು ವಿಭಿನ್ನವಾದ ಇಂಜಿನ್ ಕೇಸಿಂಗ್ ಒಳಗೊಂಡಿದೆ.

ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಮತ್ತಷ್ಟು ಚಿತ್ರಗಳು ಸೋರಿಕೆ

ಪಾನಿಗಲೆ ವಿ4 ಬೈಕ್ ಹೊರಹೋಗುವ ಪ್ಯಾನಿಗಲೆ ಸರಣಿಯನ್ನು ಹೊಲಲಿದೆ. ಸದ್ಯ ಪ್ರದರ್ಶನಗೊಳ್ಳಲಿರುವ ಈ ಮೋಟಾರ್ ಸೈಕಲ್ ಜನರನ್ನು ಹೇಗೆ ಆಕರ್ಷಿಸಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Read more on ಡುಕಾಟಿ ducati
English summary
Italian superbike maker Ducati has already revealed its all-new Desmosedici Stradale V4 210bhp engine for its road-going motorcycles. Now, more images of the Panigale V4 has been leaked on the internet.
Story first published: Saturday, September 9, 2017, 11:47 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark