ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್

Written By:

ಸೂಪರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಡುಕಾಟಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಮಗದೊಂದು ಸ್ಕ್ರ್ಯಾಂಬ್ಲರ್ ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಹೊಸ ಬೈಕ್ ತಾಂತ್ರಿಕ ವಿವರಗಳು ಮತ್ತು ಬೆಲೆಗಳ ವಿವರಗಳು ಇಲ್ಲಿವೆ.

ಬಿಡುಗಡೆಗೆ ಸಿದ್ಧವಾದ ಡುಕಾಟಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್

ಸೂಪರ್ ಬೈಕ್ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಬೈಕ್ ಮಾದರಿಗಳನ್ನು ಪರಿಚಯಿಸಲಾಗುತ್ತಿದ್ದು, ಸದ್ಯ ಡುಕಾಟಿ ಸಂಸ್ಥೆಯು ಕೂಡಾ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಎಂಬ ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಗೊಳಿಸಿದೆ.

ಬಿಡುಗಡೆಗೆ ಸಿದ್ಧವಾದ ಡುಕಾಟಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್

ಸದ್ಯ ಫ್ರಾನ್ಸ್ ಮಾರುಕಟ್ಟೆಯಲ್ಲಿ ಹೊಸ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಲು ಯೋಜಿಸಿರುವ ಡುಕಾಟಿ ಸಂಸ್ಥೆಯು ಜನಪ್ರಿಯ ವೀಲ್ಹ್ಸ್ ಆ್ಯಂಡ್ ವೆವ್ಸ್ ಉತ್ಸವಕ್ಕೆ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಪರಿಚಯಿಸಲಿದೆ.

ಬಿಡುಗಡೆಗೆ ಸಿದ್ಧವಾದ ಡುಕಾಟಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್

ಇನ್ನು ಈ ಹಿಂದಿನ ಸ್ಕ್ರ್ಯಾಂಬ್ಲರ್ ಆವೃತ್ತಿಗಿಂತಲೂ ಸಾಕಷ್ಟು ಭಿನ್ನತೆಯನ್ನು ಹೊಂದಿರುವ ಸ್ಕ್ರ್ಯಾಂಬ್ಲರ್ ಮಾರ್ಚ್ 2.0, ರೆಟ್ರೊ ಪೆಂಟ್ ವಿನ್ಯಾಸಗಳನ್ನು ಹೊಂದಿರುವುದು ಆಪ್ ರೋಡ್ ಪ್ರಿಯರನ್ನು ಸೆಳೆಯುವ ಉದ್ದೇಶ ಹೊಂದಿದೆ ಎನ್ನಬಹುದು.

ಬಿಡುಗಡೆಗೆ ಸಿದ್ಧವಾದ ಡುಕಾಟಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್

ಇದಲ್ಲದೇ ಹೊಸ ಮೋಟಾರ್ ಸೈಕಲ್‌ನಲ್ಲಿ ಕ್ರಾಸ್ ಸೆಕ್ಷನ್ ಅಲ್ಯೂಮಿನಿಯಂ ಹ್ಯಾಂಡಲ್, ಫ್ಲಾಟ್ ಟ್ರ್ಯಾಕ್ ಪ್ರೊ ಸೀಟ್, ಕಪ್ಪು ನಿಷ್ಕಾಸ ಕವರ್ ಮತ್ತು ಎಂಜಿನ್ ಹೆಡ್ ಹೊಂದಿದೆ. ಜೊತೆಗೆ ಹೊಸ ಬೈಕಿನ ವಿನ್ಯಾಸಗಳು ಆಧುನಿಕ ಸ್ಕ್ರ್ಯಾಂಬ್ಲರ್‌ಗಳನ್ನು ಹೋಲುತ್ತದೆ.

ಬಿಡುಗಡೆಗೆ ಸಿದ್ಧವಾದ ಡುಕಾಟಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್

ಎಂಜಿನ್

ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್ ಮಾದರಿಗಳು 803ಸಿಸಿ ಎಲ್-ಟ್ವಿನ್, ಫೋರ್ ವೆಲ್ವೆ ದೆಸ್ಮೊಡ್ರಾಮಿಕ್ ಎಂಜಿನ್ ಹೊಂದಿದೆ. ಹೀಗಾಗಿ 72.3-ಬಿಎಚ್‌ಪಿ ಮತ್ತು 67-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಿದ್ಧವಾದ ಡುಕಾಟಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್

ಸ್ಕ್ರ್ಯಾಂಬ್ಲರ್ ಮಾರ್ಚ್ 2.0, ಬ್ರೇಕಿಂಗ್ ವ್ಯವಸ್ಥೆಯಲ್ಲೂ ಕೂಡಾ ಸಾಕಷ್ಟು ಬದಲಾವಣೆ ತರಲಾಗಿದ್ದು, ಮುಂಭಾಗದಲ್ಲಿ ಚಕ್ರದಲ್ಲಿ 330ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 245ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ.

ಬಿಡುಗಡೆಗೆ ಸಿದ್ಧವಾದ ಡುಕಾಟಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್

ಆಪ್ ರೋಡಿಂಗ್ ಪ್ರಿಯರಿಗಾಗಿಯೇ ಹೊಸ ವಿನ್ಯಾಸದಲ್ಲಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಸಿದ್ಧಗೊಳಿಸಿರುವ ಡುಕಾಟಿಯು ಹೊಸ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್ ಸೇರಿದಂತೆ ಉತ್ತಮ ಕಾರ್ಯಕ್ಷಮತೆ ಹೊಂದಿರೋ ಪೆರೆಲಿ ಎಂಟಿ 60 ಟೈರ್‌ಗಳನ್ನು ಒದಗಿಸಲಾಗಿದೆ.

ಬಿಡುಗಡೆಗೆ ಸಿದ್ಧವಾದ ಡುಕಾಟಿ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್

ಇದೇ ಕಾರಣಕ್ಕೆ ಹೊಸ ಬೈಕ್ ಬೆಲೆಯೂ 8 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಆಪ್ ರೋಡ್ ಮತ್ತು ಕ್ಲಾಸಿಕ್ ಬೈಕ್ ಚಾಲನಾ ಪ್ರಿಯರಿಗಾಗಿ ಸಿದ್ದಗೊಂಡಿರುವ ಸ್ಕ್ರ್ಯಾಂಬ್ಲರ್ ಮಾರ್ಚ್ 2.0 ಬೈಕ್ 2018ಕ್ಕೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Read more on ಡುಕಾಟಿ ducati
English summary
Read in Kannada about Ducati To Launch Scrambler Mach 2.0 In India.
Story first published: Friday, September 8, 2017, 16:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark