ಭಾರತದಲ್ಲಿ ಡುಕಾಟಿ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಬಿಡುಗಡೆ ದಿನಾಂಕ ನಿಗದಿ

Written By:

ಇಟಾಲಿಯನ್ ಸೂಪರ್ ಬೈಕ್ ಉತ್ಪಾದಕ ಕಂಪೆನಿಯಾದ ಡುಕಾಟಿಯು ತನ್ನ ಸೂಪರ್‌ಸ್ಪೋರ್ಟ್ ಮೋಟಾರ್ ಸೈಕಲ್ ಬಿಡುಗಡೆಗೊಳಿಸಲು ಮುಂದಾಗಿದ್ದು, ಬಿಡುಗಡೆ ದಿನಾಂಕ ನಿಗದಿಪಡಿಸಿದೆ.

ಭಾರತದಲ್ಲಿ ಡುಕಾಟಿ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಬಿಡುಗಡೆ ದಿನಾಂಕ ನಿಗದಿ

ಹೊಸ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಭಾರತದಲ್ಲಿ ಸೆಪ್ಟೆಂಬರ್ 22, 2017 ರಂದು ಬಿಡುಗಡೆಯಾಗಲಿದ್ದು, ಕಂಪನಿಯ ಪಟ್ಟಿಯಲ್ಲಿ '959 ಪ್ಯಾನಿಗಲೆ' ಮೋಟಾರ್‌ಸೈಕಲ್ ಕೆಳಗೆ ಸ್ಥಾನ ಪಡೆಯಲಿದೆ. ಈ ಸೂಪರ್‌ಸ್ಪೋರ್ಟ್ ಬೈಕ್ ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟ್ ಎಂಬ ಎರಡು ಮಾದರಿಗಳಲ್ಲಿ ಅನಾವರಣಗೊಳ್ಳಲಿದೆ.

ಭಾರತದಲ್ಲಿ ಡುಕಾಟಿ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಬಿಡುಗಡೆ ದಿನಾಂಕ ನಿಗದಿ

ವಿನ್ಯಾಸದ ವಿಚಾರದಲ್ಲಿ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ತನ್ನ ನಿಕಟವರ್ತಿಯಾದ ಪ್ಯಾನಿಗಲೆ ಬೈಕನ್ನು ಹೆಚ್ಚು ಹೊಲಲಿದೆ. ಆದರೆ ಈ ಬೈಕ್ ವಿಶಿಷ್ಟವಾದ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ.

ಭಾರತದಲ್ಲಿ ಡುಕಾಟಿ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಬಿಡುಗಡೆ ದಿನಾಂಕ ನಿಗದಿ

ಈ ಮೋಟಾರ್‌ಸೈಕಲ್‌ನಲ್ಲಿರುವ ಡುಯಲ್ ಹೆಡ್‌ಲ್ಯಾಂಪ್‌ಗಳು ವಿಭಿನ್ನ ಆಕೃತಿಯನ್ನು ಹೊಂದಿವೆ ಹಾಗು ಈ ಬೈಕಿನ ಸವಾರಿ ಮಾಡುವ ರೀತಿಯ ಹೆಚ್ಚು ಅಪ್ಡೇಟ್ ಆಗಿದೆ ಎನ್ನಲಾಗಿದೆ.

ಭಾರತದಲ್ಲಿ ಡುಕಾಟಿ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಬಿಡುಗಡೆ ದಿನಾಂಕ ನಿಗದಿ

ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಕೆಳಭಾಗದಲ್ಲಿರುವ ಫುಟ್ ಪೆಗ್ಸ್ ಪಡೆದುಕೊಂಡಿದ್ದು, ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಅಳವಡಿಕೆಯೊಂದಿಗೆ ನಿಮ್ಮ ಮುಂದೆ ಬರಲಿದೆ.

ಭಾರತದಲ್ಲಿ ಡುಕಾಟಿ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಬಿಡುಗಡೆ ದಿನಾಂಕ ನಿಗದಿ

ಡುಕಾಟಿಯ ಈ ಬೈಕ್ 937 ಸಿಸಿ ಅವಳಿ ಸಿಲಿಂಡರ್ ಟೆಸ್ಟಾಟ್ರೆಟಾ ಎಂಜಿನ್ ಅಳವಡಿಕೆಯೊಂದಿಗೆ ಅನಾವರಣಗೊಳ್ಳುತ್ತಿದ್ದು, ಈ ಎಂಜಿನ್ 93 ಎನ್‌ಎಂ ತಿರುಗುಬಲದಲ್ಲಿ 110 ಬಿಎಚ್‌ಪಿ ಟಾರ್ಕ್ ಉತ್ಪಾದನೆ ಮಾಡಲಿದೆ ಹಾಗು ಈ ಎಂಜಿನ್ 6 ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಳ್ಳಲಿದೆ.

ಭಾರತದಲ್ಲಿ ಡುಕಾಟಿ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಬಿಡುಗಡೆ ದಿನಾಂಕ ನಿಗದಿ

ಪ್ಯಾನಿಗಲೆ ಮೋಟಾರ್‌ಸೈಕಲ್‌ನಲ್ಲಿ ಇರುವಂತಹ ಮಾನೋಕೊಕ್ ಚಾರ್ಸಿಯ ಬದಲಾಗಿ ಭಿನ್ನವಾಗಿರುವ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಪಡೆದು ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ ಡುಕಾಟಿ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಬಿಡುಗಡೆ ದಿನಾಂಕ ನಿಗದಿ

ಈ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್‌, ಟೂರಿಂಗ್ ಮತ್ತು ಸಿಟಿ ಎಂಬ ಮೂರು ಸವಾರಿ ವಿಧಾನಗಳನ್ನು ಪಡೆದು ಅನಾವರಣಗೊಳ್ಳಲಿದ್ದು, ಸುಮಾರು ರೂ. 12 ಲಕ್ಷದಿಂದ 13 ಲಕ್ಷದವರೆಗೆ ಎಕ್ಸ್ ಶೋರೂಂ ಬೆಲೆಯೊಂದಿಗೆ ಭಾರತೀಯ ರಸ್ತೆಗೆ ಪಾದಾರ್ಪಣೆ ಮಾಡಲಿದೆ ಎನ್ನುವ ನಿರೀಕ್ಷೆ ಇದೆ.

Read more on ಡುಕಾಟಿ ducati
English summary
Italian superbike manufacturer Ducati is all set to launch the SuperSport motorcycle in the country.
Story first published: Friday, September 1, 2017, 15:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark