ರೂ.12 ಲಕ್ಷಕ್ಕೆ ಬಿಡುಗಡೆಯಾದ ಡುಕಾಟಿ ಸೂಪರ್‌ಸ್ಪೋರ್ಟ್ ಬೈಕ್ ಸ್ಪೆಷಲ್ ಏನು?

Written By:

ಇಟಲಿ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಡುಕಾಟಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಅತಿ ನೂತನ ಸೂಪರ್‌ಸ್ಪೋರ್ಟ್ ಕ್ರೀಡಾ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಮಾದರಿಗಳ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಿಡುಗಡೆಯಾದ ಡುಕಾಟಿ ಸೂಪರ್‌ಸ್ಪೋರ್ಟ್ ಬೈಕ್ ಬೆಲೆ ಕೇವಲ 12 ಲಕ್ಷ..!!

ಸ್ಟ್ಯಾಂಡರ್ಡ್ ಮತ್ತು ಸೂಪರ್ ಸ್ಪೋರ್ಟ್ ಎಸ್ ಎಂಬ ಎರಡು ಪ್ರಮುಖ ಆವೃತ್ತಿಗಳಲ್ಲಿ ಹೊಸ ಬೈಕ್ ಮಾದರಿಗಳನ್ನು ಪರಿಚಯಿಸಿರುವ ಡುಕಾಟಿ, ಸೂಪರ್‌ಸ್ಪೋರ್ಟ್ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.12,08,000ಕ್ಕೆ ಮತ್ತು ಸೂಪರ್‌ಸ್ಪೋರ್ಟ್ ಎಸ್ ಬೆಲೆಯನ್ನು 13,39,000ಗಳಿಗೆ ನಿಗದಿ ಮಾಡಿದೆ.

ಬಿಡುಗಡೆಯಾದ ಡುಕಾಟಿ ಸೂಪರ್‌ಸ್ಪೋರ್ಟ್ ಬೈಕ್ ಬೆಲೆ ಕೇವಲ 12 ಲಕ್ಷ..!!

ಡುಕಾಟಿ ನಿರ್ಮಾಣದ 959 ಪನಿಗಲ್ ಬಳಿಕ ಇಟಲಿಯ ಪ್ರತಿಷ್ಠಿತ ಸಂಸ್ಥೆಯು ಪರಿಚಯಿಸುತ್ತಿರುವ ತಾಜಾ ಕ್ರೀಡಾ ಬೈಕ್ ಇದಾಗಿದ್ದು, ಹೆದ್ದಾರಿ ಮತ್ತು ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನ ಉದ್ದೇಶಕ್ಕಾಗಿ ಇದನ್ನು ನಿರ್ಮಾಣ ಮಾಡಲಾಗಿದೆ.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ಬಿಡುಗಡೆಯಾದ ಡುಕಾಟಿ ಸೂಪರ್‌ಸ್ಪೋರ್ಟ್ ಬೈಕ್ ಬೆಲೆ ಕೇವಲ 12 ಲಕ್ಷ..!!

ದೊಡ್ಡದಾದ ವಿಂಡ್ ಸ್ಕ್ರೀನ್, ಆರಾಮದಾಯಕ ಚಾಲನೆ, ಪರಿಷ್ಕೃತ ಹೆಡ್‌ಲೈಟ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ದೊಡ್ಡದಾದ ಸ್ಯಾಡಲ್, ಸಣ್ಣದಾದ ಎಕ್ಸಾಸ್ಟ್ ಮಫ್ಲರ್, ಎಲ್ಲ ಡಿಜಿಟಲ್ ಎಲ್‌ಸಿಡಿ ಡಿಸ್‌ಪ್ಲೇ ಇತ್ಯಾದಿ ವೈಶಿಷ್ಟ್ಯಗಳಿದ್ದು, 6 ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಬಿಡುಗಡೆಯಾದ ಡುಕಾಟಿ ಸೂಪರ್‌ಸ್ಪೋರ್ಟ್ ಬೈಕ್ ಬೆಲೆ ಕೇವಲ 12 ಲಕ್ಷ..!!

ಇನ್ನು ಹೊಸ ಬೈಕ್‌ಗಳಲ್ಲಿ 937 ಸಿಸಿ ಎಲ್ ಟ್ವಿನ್ ಟೆಸ್ಟಾಟ್ರೆಟಾ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್ ಜೋಡಣೆಯಿದ್ದು, 93-ಎನ್‌ಎಂ ತಿರುಗುಬಲದಲ್ಲಿ(6500ಆರ್‌ಪಿಎಂ) ಮತ್ತು 110 ಅಶ್ವಶಕ್ತಿಯನ್ನು (9500ಆರ್‌ಪಿಎಂ) ಉತ್ಪಾದನಾ ಶಕ್ತಿಯನ್ನು ಹೊಂದಿವೆ.

ಬಿಡುಗಡೆಯಾದ ಡುಕಾಟಿ ಸೂಪರ್‌ಸ್ಪೋರ್ಟ್ ಬೈಕ್ ಬೆಲೆ ಕೇವಲ 12 ಲಕ್ಷ..!!

ಇದರ ಜೊತೆಗೆ ಸುರಕ್ಷೆತೆಗೂ ಹೆಚ್ಚು ಒತ್ತು ನೀಡಲಾಗಿದ್ದು, ರೈಡ್-ಬೈ-ವೈರ್, ಪವರ್ ಮೋಡ್, ಮೂರು ಹಂತದ ಬಾಷ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, 8 ವಲಯದ ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆಯು ಭದ್ರತೆಯನ್ನು ಖಾತ್ರಿಪಡಿಸಲಿದೆ.

ಬಿಡುಗಡೆಯಾದ ಡುಕಾಟಿ ಸೂಪರ್‌ಸ್ಪೋರ್ಟ್ ಬೈಕ್ ಬೆಲೆ ಕೇವಲ 12 ಲಕ್ಷ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸೂಪರ್ ಬೈಕ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಡುಕಾಟಿ ಇದುವರೆಗೆ ಹತ್ತಾರು ಬಗೆಯ ಸೂಪರ್ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಸದ್ಯ ಬಿಡುಗಡೆಯಾಗಿರುವ ಸೂಪರ್‌ ಸ್ಪೋರ್ಟ್ ಬೈಕ್ ಮಾದರಿಗಳು ಕವಾಸಕಿ ನಿಂಜಾ 1000, ಸುಜುಕಿ ಜಿಎಸ್‌ಎಕ್ಸ್-ಎಸ್1000ಎಫ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ತವಕದಲ್ಲಿವೆ.

Read more on ಡುಕಾಟಿ ducati
English summary
Read in Kannada about Ducati SuperSport Launched in India. New bike Prices Start At Rs 12.08 Lakh.
Story first published: Monday, September 25, 2017, 14:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark