ಬಿಡುಗಡೆಗೂ ಮೊದಲೇ ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಚಿತ್ರಗಳು ಸೋರಿಕೆ

Written By:

ಇಟಾಲಿಯನ್ ಸೂಪರ್ ಬೈಕ್ ಉತ್ಪಾದಕ ಕಂಪೆನಿಯಾದ ಡುಕಾಟಿ ಈ ತಿಂಗಳ 7ರಂದು ಹೊಸ ವಿ4 ಡೆಸ್ಮೋಸೇಡಿಸಿ ಸ್ಟ್ರಾಡೇಲ್ ಎಂಜಿನ್ ಪಡೆದ ಬೈಕ್ ಅನಾವರಣಗೊಳಿಸಲು ಸಿದ್ಧತೆ ನೆಡೆಸಿದೆ.

ಬಿಡುಗಡೆಗೂ ಮೊದಲೇ ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಚಿತ್ರಗಳು ಸೋರಿಕೆ

ಸೂಪರ್ ಬೈಕ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಡುಕಾಟಿ ಸಂಸ್ಥೆಯು ಭಾರತದಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಈಗಾಗಲೇ ಗಳಿಸಿಕೊಂಡಿದ್ದು, ಈ ಕಂಪನಿಯ ನವೀನ ಮಾದರಿಯ ಡುಕಾಟಿ ವಿ4 ಸೂಪರ್‌ ಬೈಕಿನ ಚಿತ್ರಗಳು ಬೈಕ್ ಅನಾವರಣಗೊಳ್ಳುವ ಮುಂಚೆಯೇ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿ ಎಲ್ಲರನ್ನು ಅಚ್ಚರಿಗೊಳಿಸಿವೆ.

ಬಿಡುಗಡೆಗೂ ಮೊದಲೇ ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಚಿತ್ರಗಳು ಸೋರಿಕೆ

ಮೊದಲ ನೋಟದಲ್ಲಿ, ಈ ಮೋಟಾರ್ ಸೈಕಲ್ ಪ್ಯಾನಿಗಲೆ ಬೈಕಿನ ರೀತಿ ಕಂಡರೂ ಸಹ ಸೂಕ್ಷ್ಮವಾಗಿ ಗಮನಿಸಿದಾಗ, ಮೋಟರ್ ಸೈಕಲ್‌ನ ದೇಹರಚನೆಯ ಬಗ್ಗೆ ಬದಲಾವಣೆಗಳನ್ನು ಗಮನಿಸಬಹುದಾಗಿದೆ.

ಬಿಡುಗಡೆಗೂ ಮೊದಲೇ ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಚಿತ್ರಗಳು ಸೋರಿಕೆ

ಚಿತ್ರಗಳನ್ನು ಗಮನಿಸಿದಂತೆ, ಮೋಟರ್ ಸೈಕಲ್‌ನ ಫ್ಯುಯೆಲ್ ಟ್ಯಾಂಕ್‌ನಿಂದ ಹಿಡಿದು ಪ್ರತಿಯೊಂದು ಭಾಗವೂ ಸಹ ಹೆಚ್ಚು ಅಂದಗೊಂಡು ಅನಾವರಣಗೊಳ್ಳಲು ಸಿದ್ದವಾಗಿದ್ದು, ಎಲ್ಲಾ ಅಂಶಗಳೂ ಸೇರಿ ಏಕ ಘಟಕದಂತೆ ಕಾಣುತ್ತದೆ.

ಬಿಡುಗಡೆಗೂ ಮೊದಲೇ ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಚಿತ್ರಗಳು ಸೋರಿಕೆ

ಚಿತ್ರವನ್ನು ಯಾವ ಸ್ಥಳದಲ್ಲಿ ತೆಗೆಯಲಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿಯವರೆಗೆ ತಿಳಿದುಬಂದಿಲ್ಲ, ಆದರೆ ಮಿಸಾನೊ ಸರ್ಕ್ಯೂಟ್ ಪರೀಕ್ಷೆಯ ಸಂದರ್ಭದಲ್ಲಿ ಸೆರೆಹಿಡಿಯಲ್ಪಟ್ಟಿದೆ ಎಂದು ವರದಿಯಾಗಿದೆ.

ಬಿಡುಗಡೆಗೂ ಮೊದಲೇ ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಚಿತ್ರಗಳು ಸೋರಿಕೆ

ಈ ವಿ4 ಸೂಪರ್ ಬೈಕ್‌ನ ವಿಭಜನೆಗೊಂಡ ಹೆಡ್‌ಲೈಟ್ ಹೆಚ್ಚು ದೊಡ್ಡದಾಗಿದೆ ಮತ್ತು ಏರ್ ಇನ್ಟೇಕ್ ನಾಳಗಳನ್ನು ಅಳವಡಿಸಿರುವ ಸಾಧ್ಯತೆ ಇದೆ ಹಾಗು ಇನ್ನು ವಿ4 ಸೂಪರ್ ಬೈಕ್‌ ಹೋಗೆ ಉಗುಳುವಾಗ ಮೊಟೊ ಜಿಪಿ ಯಂತ್ರದಂತೆ ಧ್ವನಿಸುತಿದ್ದು, ಪ್ಯಾನಿಗಲೆಗಿಂತ ಹೆಚ್ಚು ವಿಭಿನ್ನವಾದ ಇಂಜಿನ್ ಕೇಸಿಂಗ್ ಪಡೆದುಕೊಂಡಿದೆ.

ಬಿಡುಗಡೆಗೂ ಮೊದಲೇ ಡುಕಾಟಿ ಸಂಸ್ಥೆಯ ವಿ4 ಸೂಪರ್ ಬೈಕಿನ ಚಿತ್ರಗಳು ಸೋರಿಕೆ

ಈ ವರ್ಷದ ಸೆಪ್ಟೆಂಬರ್ 7ರಂದು ಡಕ್ಯಾಟಿಯ ಹೊಸ ವಿ4 ಡೆಸ್ಮೋಸೇಡಿಸಿ ಸ್ಟ್ರಾಡೇಲ್ ಎಂಜಿನ್ ಅನಾವರಣಗೊಳಿಸಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದ್ದು, 2017ರ EICMA ಮೋಟಾರ್ ಸೈಕಲ್ ಪ್ರದರ್ಶನದಲ್ಲಿ ವಿ4 ಸೂಪರ್ ಬೈಕ್ ಪ್ರಥಮ ಬಾರಿಗೆ ಪ್ರವೇಶಿಸಲಿದೆ.

Read more on ಡುಕಾಟಿ ducati
English summary
Italian superbike manufacturer Ducati is all set to reveal the new V4 Desmosedici Stradale engine on September 7, 2017.Ahead of that the Ducati V4 Superbike has been revealed in a leaked image on the internet. The source of the picture is unknown.
Story first published: Wednesday, September 6, 2017, 11:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark