ಇದೇ ಮೊದಲ ಬಾರಿಗೆ ತನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ತಿಳಿಸಿದ ಹೀರೊ

Written By:

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೊ ಮೊಟೊಕಾರ್ಪ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯೋಜನೆಗಳನ್ನು ಪ್ರಕಟಿಸಿದೆ.

ಇದೇ ಮೊದಲ ಬಾರಿಗೆ ತನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ತಿಳಿಸಿದ ಹೀರೊ

ಈಗಾಗಲೇ ಹೀರೊ ಮೊಟೊಕಾರ್ಪ್ ಕಂಪನಿ ಭಾರತದಲ್ಲಿ ಸುಮಾರು ಹತ್ತು ಉತ್ಪನ್ನಗಳನ್ನು ಸ್ಥಗಿತಗೊಳಿಸಿದೆ ಮತ್ತು ತನ್ನ ಉತ್ಪನ್ನದ ಪಟ್ಟಿವನ್ನು ಕೂಲಂಕಷವಾಗಿ ಅವಲೋಕನ ನೆಡೆಸುವ ಮೂಲಕ ಮಾರುಕಟ್ಟೆಯ ಉಪಸ್ಥಿತಿಯನ್ನು ಹೆಚ್ಚು ಸುಧಾರಣೆಗೆ ತರಲು ಯೋಜನೆ ರೂಪಿಸಿದೆ.

ಇದೇ ಮೊದಲ ಬಾರಿಗೆ ತನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ತಿಳಿಸಿದ ಹೀರೊ

ಇದರ ಜೊತೆಗೆ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹೀರೊ ಇದೇ ವರ್ಷದ ಸೆಪ್ಟೆಂಬರ್ 2017ರೊಳಗೆ ತನ್ನ ಮತ್ತೆರಡು ಹೊಸ ಉತ್ಪನ್ನಗಳನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ತನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ತಿಳಿಸಿದ ಹೀರೊ

ಹೀರೊ ತನ್ನ ಹೊಸ ಉತ್ಪನ್ನಗಳ ವಿಚಾರದ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲವಾದರೂ ಸಹ ತನ್ನ ಮಾರುಕಟ್ಟೆಯ ಹಿಡಿತವನ್ನು ಕಾಪಾಡಿಕೊಳ್ಳುವ ಎಲ್ಲಾ ವಿಶ್ವಾಸ ಕಂಪನಿ ಹೊಂದಿದೆ.

ಇದೇ ಮೊದಲ ಬಾರಿಗೆ ತನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ತಿಳಿಸಿದ ಹೀರೊ

ಮತ್ತೊಂದು ವಿಶೇಷತೆ ಎಂದರೆ, ಇದೇ ಮೊದಲ ಬಾರಿಗೆ ಹೀರೊ ತನ್ನ ಯೋಜನೆಯನ್ನು ಬಹಿರಂಗಪಡಿಸಿದೆ ಮತ್ತು ಆಟೊ ಎಕ್ಸ್‌ಪೋ 2018ರಲ್ಲಿ ಅನಾವರಣಗೊಳಿಸಲಿರುವ ಹೊಸ 200ಸಿಸಿ ಮೋಟಾರ್‌ಸೈಕಲ್ ಬಗ್ಗೆ ತಿಳಿಸುವ ಮೂಲಕ ಮುಂದಿನ ವರ್ಷದ ಯೋಜನೆಗಳ ಬಗ್ಗೆ ಕೊಂಚ ಮಟ್ಟಿನ ಮಾಹಿತಿ ತಿಳಿಸಿದೆ.

ಇದೇ ಮೊದಲ ಬಾರಿಗೆ ತನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ತಿಳಿಸಿದ ಹೀರೊ

ಇನ್ನು 200ಸಿಸಿ ಮೋಟಾರ್‌ಸೈಕಲ್ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ, ಅದರ ಬಗ್ಗೆ ಹೆಚ್ಚಿನ ಚರ್ಚೆ ಶುರುವಾಗಿರುವುದಂತೂ ಖಂಡಿತ. ಇದು ಎಕ್ಸ್‌ಟ್ರೀಮ್ 200ಎಸ್ ಆಗಿರಬಹುದು ಎಂಬ ಲೆಕ್ಕಾಚಾರ ನೆಡೆಯುತ್ತಿದೆ.

ಇದೇ ಮೊದಲ ಬಾರಿಗೆ ತನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ತಿಳಿಸಿದ ಹೀರೊ

ಹೀರೊ ಮೊಟೊಕಾರ್ಪ್ ತನ್ನ ಹೊಸ ಉತ್ಪನ್ನಗಳನ್ನು ಭಾರತದಲ್ಲಿ ಇಲ್ಲಿಯವರೆಗೂ ಪರೀಕ್ಷೆ ನೆಡೆಸಿಲ್ಲ ಎನ್ನಲಾಗಿದ್ದು, ಮುಂಬರುವ ವಾಹನಗಳು ಸ್ಪ್ಲೆಂಡರ್, ಪ್ಯಾಶನ್ ಅಥವಾ ಎಚ್ಎಫ್ ಡಿಲಕ್ಸ್ ಬೈಕುಗಳ ಹೋಲಿಕೆ ಇರಲಿವೆ ಎನ್ನುವ ವಿಚಾರ ಬಹಿರಂಗ ಪಡಿಸಿವೆ.

ಇದೇ ಮೊದಲ ಬಾರಿಗೆ ತನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ತಿಳಿಸಿದ ಹೀರೊ

ವಾಹನ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯ ಬಗ್ಗೆ ಹೀರೊ ಸಂಸ್ಥೆ ಸೂಕ್ಷ್ಮವಾಗಿ ಗಮನಹರಿಸುತ್ತಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನ ನೆಡೆಸುತ್ತಲೇ ಇದೆ.

English summary
Read in Kannada about two-wheeler manufacturer Hero MotoCorp has revealed its plans for the Indian market.
Story first published: Monday, June 12, 2017, 17:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark