ಬಿಎಸ್-V ಎಂಜಿನ್‌ಗೆ ಹೆಚ್ಚಿದ ಬೇಡಿಕೆ- ಫೆಬ್ರವರಿಯಲ್ಲಿ ಹೋಂಡಾ ಉತ್ವನ್ನಗಳ ಭರ್ಜರಿ ಸೇಲ್..!!

Written By:

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಮಾರಾಟಾ ಪ್ರಮಾಣ ಶೇಕಡಾ 5 ರಷ್ಟು ಹೆಚ್ಚಳಗೊಂಡಿದೆ. ದೇಶಿಯವಾಗಿ 3,69,862 ಯೂನಿಟ್‌ಗಳನ್ನು ಮಾರಾಟ ಮಾಡಿರುವ ಹೋಂಡಾ, ನೀರಿಕ್ಷೆಗೂ ಮೀರಿ 25 ಸಾವಿರ ಹೆಚ್ಚುವರಿ ಬೈಕ್‌ ಮತ್ತು ಸ್ಕೂಟರ್‌ಗಳನ್ನು ಮಾರಾಟಮಾಡಿದೆ. ಈ ಮೂಲಕ ಶೇಕಡಾ 13ರಷ್ಟು ಬೆಳವಣಿಗೆ ಕಂಡಿದ್ದು, ಜನವರಿ ತಿಂಗಳದಲ್ಲಿದ್ದ ರಫ್ತು ಪ್ರಮಾಣವನ್ನು ಶೇಕಡಾ 1.4 ರಿಂದ ಶೇಕಡಾ 27.2 ಹೆಚ್ಚಿಸಿದೆ.

To Follow DriveSpark On Facebook, Click The Like Button
ಬಿಎಸ್-V ಎಂಜಿನ್‌ಗೆ ಹೆಚ್ಚಿದ ಬೇಡಿಕೆ- ಫೆಬ್ರವರಿಯಲ್ಲಿ ಹೋಂಡಾ ಉತ್ವನ್ನಗಳ ಭರ್ಜರಿ ಸೇಲ್..!!

ತನ್ನ ಉತ್ಪನ್ನಗಳಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ತಂದಿದ್ದ ಹೋಂಡಾ, ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ನೀರಿಕ್ಷೆಗೂ ಮೀರಿ 24,150 ಯೂನಿಟ್‌ಗಳನ್ನು ಮಾರಾಟಗೊಳಿಸುವ ಮೂಲಕ ಇತರೆ ದ್ವಿಚಕ್ರ ವಾಹನಗಳ ತಯಾಕರಿಗೆ ತೀವ್ರ ಸ್ಪರ್ಧೆ ಒಡ್ಡಿದೆ.

ಬಿಎಸ್-V ಎಂಜಿನ್‌ಗೆ ಹೆಚ್ಚಿದ ಬೇಡಿಕೆ- ಫೆಬ್ರವರಿಯಲ್ಲಿ ಹೋಂಡಾ ಉತ್ವನ್ನಗಳ ಭರ್ಜರಿ ಸೇಲ್..!!

ಕೇವಲ ದೇಶಿಯವಾಗಿ ಅಷ್ಟೇ ಅಲ್ಲದೇ ತನ್ನ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡಿದ್ದ ಹೋಂಡಾ, ಶೇಕಡಾ 39ರಷ್ಟು ರಫ್ತು ಪ್ರಮಾಣವನ್ನು ಹೆಚ್ಚಳ ಮಾಡಿದೆ. ಕಳೆದ 2016ರ ಏಪ್ರಿಲ್‌ನಿಂದ ಫೆಬ್ರವರಿ 2017ರ ತನಕ 1.84 ಲಕ್ಷ ಯೂನಿಟ್‌ಗಳ ಪ್ರಮಾಣವನ್ನು 2.56 ಲಕ್ಷ ಯೂನಿಟ್‌ಗಳಿಗೆ ಹೆಚ್ಚಿಸಿದೆ.

ಬಿಎಸ್-V ಎಂಜಿನ್‌ಗೆ ಹೆಚ್ಚಿದ ಬೇಡಿಕೆ- ಫೆಬ್ರವರಿಯಲ್ಲಿ ಹೋಂಡಾ ಉತ್ವನ್ನಗಳ ಭರ್ಜರಿ ಸೇಲ್..!!

ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿರುವ ಹೋಂಡಾ ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ಯದವಿಂದರ್ ಸಿಂಗ್ ಗುಲೇರಿಯಾ, ನೀರಿಕ್ಷೆಗೂ ಮೀರಿ ಬೈಕ್‌ಗಳು ಮಾರಾಟಗೊಂಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಜೊತೆಗೆ "ದ್ವಿಚಕ್ರ ವಾಹನಗಳ ಆಯ್ಕೆಯಲ್ಲಿ ಹೋಂಡಾ ಇದೀಗ ನಂ.1 ಸ್ಥಾನದಲ್ಲಿದ್ದು, ಭಾರತೀಯ ಗ್ರಾಹಕರಿಗೆ ಇನ್ನು ಹೆಚ್ಚಿನ ಅನುಕೂಲಕರ ವ್ಯವಸ್ಥೆಗಳನ್ನು ಒದಗಿಸಿಕೊಡಲು ಕಂಪನಿ ಬದ್ಧವಾಗಿದೆ" ಎಂದಿದ್ದಾರೆ.

ಬಿಎಸ್-V ಎಂಜಿನ್‌ಗೆ ಹೆಚ್ಚಿದ ಬೇಡಿಕೆ- ಫೆಬ್ರವರಿಯಲ್ಲಿ ಹೋಂಡಾ ಉತ್ವನ್ನಗಳ ಭರ್ಜರಿ ಸೇಲ್..!!

ಇನ್ನು ಅಪನಗದೀಕರಣ ಅವಧಿಯಲ್ಲಾದ ಬೈಕ್ ಮಾರಾಟದ ಕುಸಿತಕ್ಕೆ ಜಗ್ಗದ ಹೋಂಡಾ, ಆರೋಗ್ಯಕರ ಸ್ಟಾಕ್ ಮಾಡಿತ್ತು. ಇದರಿಂದಾಗಿ ಫೆಬ್ರುವರಿ ತಿಂಗಳಲ್ಲಿ ನೀರಿಕ್ಷೆಗೂ ಮೀರಿ ಮಾರಾಟ ಮಾಡಿದೆ. ಈ ಮೂಲಕ ರಫ್ತು ಪ್ರಮಾಣದಲ್ಲೂ ಶೇ. 27ರಷ್ಟು ಹೆಚ್ಚಳ ಕಂಡಿದೆ.

ಬಿಎಸ್-V ಎಂಜಿನ್‌ಗೆ ಹೆಚ್ಚಿದ ಬೇಡಿಕೆ- ಫೆಬ್ರವರಿಯಲ್ಲಿ ಹೋಂಡಾ ಉತ್ವನ್ನಗಳ ಭರ್ಜರಿ ಸೇಲ್..!!

ಇದರ ಜೊತೆ ಭಾರತೀಯ ಮಾರುಕಟ್ಟೆಯಲ್ಲಿ BS-V ಎಂಜಿನ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗಿದ್ದು, ಹೋಂಡಾ ಕಂಪನಿ ಬೃಹತ್ ಯೋಜನೆ ರೂಪಿಸಿದೆ. ಅದಕ್ಕಾಗಿ ತನ್ನ ನಾಲ್ಕೂ ಉತ್ಪಾದನಾ ಘಟಕಗಳಲ್ಲಿ BS-V ಎಂಜಿನ್ ಸ್ಕೂಟರ್‌ಗಳನ್ನು ಅಷ್ಟೇ ಉತ್ಪಾದಿಸಲು ಯೋಜನೆ ರೂಪಿಸಿದೆ.

ಬಿಎಸ್-V ಎಂಜಿನ್‌ಗೆ ಹೆಚ್ಚಿದ ಬೇಡಿಕೆ- ಫೆಬ್ರವರಿಯಲ್ಲಿ ಹೋಂಡಾ ಉತ್ವನ್ನಗಳ ಭರ್ಜರಿ ಸೇಲ್..!!

ಗ್ರಾಹಕರ ಆದ್ಯತೆ ಮೇರೆಗೆ BS-V ಎಂಜಿನ್ ಮಾದರಿಗಳ ಉತ್ಪಾದನೆ ಹೆಚ್ಚಿಸಿರುವ ಹೋಂಡಾ, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಯೋಜನೆಗಳನ್ನು ರೂಪಿಸಿದೆ. ಇದರಿಂದಾಗಿ ಪ್ರತಿಸ್ಫರ್ಧಿಗಳ ಉತ್ಪನ್ನಗಳ ಮಾರಾಟಕ್ಕೆ ಭಾರೀ ಸ್ಪರ್ಧೆ ಒಡ್ಡಲಿದೆ.

ಮುಂಬರುವ ಹೋಂಡಾ ಆಫ್ರಿಕಾ ಟ್ವಿನ್ ರೇಸ್ ಬೈಕ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಹೋಂಡಾ honda
English summary
HMSI also emerged as the highest volume contributor with 24,150 units added in overall two-wheeler industry.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark