ಒಲಿಬಿಯಾ ಬೈಕ್ ರ‍್ಯಾಲಿ- ಮುನ್ನಡೆ ಸಾಧಿಸಿದ ಸಿಎಸ್ ಸಂತೋಷ್ ಮತ್ತು ಅರವಿಂದ್ ಕೆಪಿ

Written By:

ಅ.6 ರಿಂದ ಮೊರೊಕ್ಕಾದಲ್ಲಿ ಆರಂಭಗೊಂಡಿರುವ ಅಂತರ್‌ರಾಷ್ಟ್ರೀಯ ಖ್ಯಾತಿಯ ಒಲಿಬಿಯಾ ಬೈಕ್ ರ‍್ಯಾಲಿ ಹಲವು ಐತಿಹಾಸ ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಹೀರೊ ಸಂಸ್ಥೆಯ ಭಾರತೀಯ ಸ್ಪರ್ಧಿಗಳಾದ ಸಿಎಸ್ ಸಂತೋಷ್, ಅರವಿಂದ್ ಕೆಪಿ ಮುನ್ನಡೆ ಸಾಧಿಸಿದ್ದಾರೆ.

To Follow DriveSpark On Facebook, Click The Like Button
ಒಲಿಬಿಯಾ ಬೈಕ್ ರ‍್ಯಾಲಿ- ಮುನ್ನಡೆಯಲ್ಲಿ ಸಿಎಸ್ ಸಂತೋಷ್,ಅರವಿಂದ್ ಕೆಪಿ

ಮೋಟಾರ್ ಸ್ಪೋರ್ಟ ಆವೃತ್ತಿಗಳಲ್ಲೇ ಅತಿಹೆಚ್ಚು ಜನಪ್ರಿಯತೆ ಪಡೆದಿರುವ ಒಲಿಬಿಯಾ ರ್‍ಯಾಲಿ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಸಾವಿರಾರು ಕಿಮಿ ವಿಸ್ತಾರ ಹರಡಿಕೊಂಡಿರುವ ಮರುಭೂಮಿಯಲ್ಲಿ ಮೋಟಾರ್ ಸ್ಪೋರ್ಟ್ ಸ್ಪರ್ಧಿಗಳ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ.

ಒಲಿಬಿಯಾ ಬೈಕ್ ರ‍್ಯಾಲಿ- ಮುನ್ನಡೆಯಲ್ಲಿ ಸಿಎಸ್ ಸಂತೋಷ್,ಅರವಿಂದ್ ಕೆಪಿ

ಕಳೆದ ಮೂರು ಬೈಕ್ ರ‍್ಯಾಲಿ ಆವೃತ್ತಿಗಳಲ್ಲಿ ಭಾಗಿಯಾಗಿ ಉತ್ತಮ ಪ್ರದರ್ಶನ ತೊರಿದ್ದ ಸಿಎಸ್ ಸಂತೋಷ್, ಅರವಿಂದ್ ಕೆಪಿ ಈ ಬಾರಿಯೂ ಕೂಡಾ ಮುನ್ನಡೆಯಲ್ಲಿದ್ದು, ಮೊದಲ ಹಂತದ 270 ಕಿಮಿ ಬೈಕ್ ಸವಾರಿಯಲ್ಲಿ ಸಂತೋಷ್ 18ನೇ ಸ್ಥಾನದಲ್ಲಿದ್ದಾರೆ.

ಒಲಿಬಿಯಾ ಬೈಕ್ ರ‍್ಯಾಲಿ- ಮುನ್ನಡೆಯಲ್ಲಿ ಸಿಎಸ್ ಸಂತೋಷ್,ಅರವಿಂದ್ ಕೆಪಿ

ಇನ್ನು ಅರವಿಂದ್ ಕೆಪಿ ಕೂಡಾ ಮೊದಲ ಹಂತದ ಬೈಕ್ ರ‍್ಯಾಲಿಯಲ್ಲಿ 21ನೇ ಸ್ಥಾನದಲ್ಲಿದ್ದು, ಎರಡನೇ ಹಂತದಲ್ಲಿನ ಯಶಸ್ವಿಯಾಗಿ ಬರೋಬ್ಬರಿ 350ಕಿಮಿ ದೂರವನ್ನು ಕ್ರಮಿಸಬೇಕಾಗಿದೆ. ತದನಂತರ ಮೂರನೇ ಹಂತದಲ್ಲಿ 455 ಕಿಮಿ ದೂರವನ್ನು ತಲುಪುವ ಸ್ಪರ್ಧಿಗಳಿರುತ್ತವೆ.

ಒಲಿಬಿಯಾ ಬೈಕ್ ರ‍್ಯಾಲಿ- ಮುನ್ನಡೆಯಲ್ಲಿ ಸಿಎಸ್ ಸಂತೋಷ್,ಅರವಿಂದ್ ಕೆಪಿ

ಇನ್ನೊಂದು ಪ್ರಮುಖ ವಿಚಾರವೆಂದರೆ ಒಲಿಬಿಯಾ ಬೈಕ್ ರ‍್ಯಾಲಿಯು ಜಗತ್ತಿನ ಅತ್ಯಂತ ಕಠಿಣ ಮೋಟಾರ್ ಸ್ಪೋರ್ಟ್ ಆವೃತ್ತಿಯಾಗಿದ್ದು, ಕಠಿಣ ಪ್ರದೇಶಗಳಲ್ಲಿ ಯಶಸ್ವಿಯಾಗಿ ಬೈಕ್ ಮುನ್ನಡೆಸುವುದೇ ಒಂದು ಹರಸಹಾಸ ಎನ್ನಬಹುದು.

ಒಲಿಬಿಯಾ ಬೈಕ್ ರ‍್ಯಾಲಿ- ಮುನ್ನಡೆಯಲ್ಲಿ ಸಿಎಸ್ ಸಂತೋಷ್,ಅರವಿಂದ್ ಕೆಪಿ

ಇದಲ್ಲದೇ ಇದೇ ರ‍್ಯಾಲಿಯಲ್ಲಿ ಜನತ್ತಿನ ಪ್ರಮುಖ ಮೋಟಾರ್ ಸ್ಪೋರ್ಟ್ ಸ್ಪರ್ಧಿಗಳು ಭಾಗಿಯಾಗಿದ್ದು, ಮೊದಲ ಮತ್ತು ನಾಲ್ಕನೇ ಸ್ಥಾನದಲ್ಲಿ ಖ್ಯಾತ ಸ್ಪರ್ಧಿಗಳಾದ ಟಿವಿಎಸ್ ಪ್ರತಿನಿಧಿ ಜೌನ್ ಪೆಡ್ರಿಯೊ, ಆ್ಯಡ್ರಿನ್ ಮಟ್ಜ್ ಮುನ್ನಡೆಯಲ್ಲಿದ್ದಾರೆ.

ಒಲಿಬಿಯಾ ಬೈಕ್ ರ‍್ಯಾಲಿ- ಮುನ್ನಡೆಯಲ್ಲಿ ಸಿಎಸ್ ಸಂತೋಷ್,ಅರವಿಂದ್ ಕೆಪಿ

ಸದ್ಯ ಮೂರನೇ ಹಂತದ ಸ್ಪರ್ಧೆಗೆ ಕ್ಷಣಗಣನೆ ಶುರುವಾಗಿದ್ದು, ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಮೋಟಾರ್ ಸ್ಪೋರ್ಟ್ ಸ್ಫರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆದಿರುವುದು ಮೋಟಾರ್ ಸ್ಪೋರ್ಟ್ ಪ್ರಿಯರಿಗೂ ಕುತೂಹಲ ಹುಟ್ಟುಹಾಕಿದೆ.

English summary
Read in Kannada about CS Santosh And Aravind KP Impress With Their Performance In The OiLibya Rally Of Morocco.
Story first published: Monday, October 9, 2017, 15:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark