Subscribe to DriveSpark

ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ.4.60 ಲಕ್ಷ

Written By:

ಭಾರತದಲ್ಲಿ ಕವಾಸಕಿ ಮೋಟಾರ್ಸ್ ಕಂಪನಿಯು ತನ್ನ ಪ್ರವೇಶ ಮಟ್ಟದ ಸಾಹಸ ಮೋಟಾರ್ ಸೈಕಲ್, ವರ್ಸಿಸ್-ಎಕ್ಸ್ 300 ವಾಹನವನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ.4.60 ಲಕ್ಷ

ಕವಾಸಕಿ ಹೇಳುವಂತೆ ಹೊಸ ವರ್ಸಿಸ್-ಎಕ್ಸ್ 300 ಎಂಬುದು ಯಾವುದೇ ರಸ್ತೆಯಾಗಲಿ ಯಾವುದೇ ಸಮಯದಲ್ಲಾಗಲಿ ಬಳಸಬಹುದಾದ ದ್ವಿಚಕ್ರ ವಾಹನವಾಗಿದೆ. ಇದು ಭಾರತೀಯ ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವಾಗಿದೆ ಹಾಗು ರೂ.4.60 ಲಕ್ಷ ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ.4.60 ಲಕ್ಷ

ಹೊಸ ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್, ಝೆಡ್300ನ ಕೊಳವೆಯಾಕಾರದ ಫ್ಲಾಟ್‌ಫಾರಂ ಆಧರಿಸಿದೆ. ಈ ಸಾಹಸ ಮೋಟಾರ್ ಸೈಕಲ್ 386 ಬಿಎಚ್‌ಪಿ ಮತ್ತು 27 ಎನ್‌ಎಂ ಟಾರ್ಕ್ ಉತ್ಪಾದಿಸುವ 296 ಸಿಸಿ ಲಿಕ್ವಿಡ್ ಕೋಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್ ಆಯ್ಕೆ ಹೊಂದಿದೆ.

ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ.4.60 ಲಕ್ಷ

ಅದೇ ಎಂಜಿನ್‌ನನ್ನು ಕವಾಸಕಿ ಕಂಪನಿಯ ಮತ್ತೊಂದು ಯಶಸ್ವಿ ಬೈಕ್ ನಿಂಜಾ 300ನಲ್ಲಿಯೂ ನಿಯೋಜಿಸಲಾಗಿದೆ. ಆದರೆ ಹೊಸ ಎಂಜಿನ್ ಎಂಜಿನ್ ಹೆಚ್ಚು ಮೃದು, ಕಡಿಮೆ ಮತ್ತೆ ಮಧ್ಯಮ ಶಕ್ತಿಯಲ್ಲಿ ಸರಿಯಾದ ರೀತಿಯಲ್ಲಿ ಶಕ್ತಿ ವಿತರಣೆಯ ಅಪ್ಡೇಟ್ ಪಡೆದಿದೆ.

ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ.4.60 ಲಕ್ಷ

ಪ್ರಬಲ ವೇಗವರ್ಧನೆಗೆ ಟ್ಯೂನ್ ಮಾಡಿರುವಂತಹ ಸಾಹಸ ಮೋಟಾರ್ ಸೈಕಲ್ ಇದಾಗಿದ್ದು, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮಾನೊಶಾಕ್ ಸಸ್ಪೆನ್‌ಷನ್ ಇರಿಸಲಾಗಿದೆ. ಬ್ರೇಕ್ ಕರ್ತವ್ಯಗಳ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 290 ಮಿ.ಮೀ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಮಿ.ಮೀ ಡಿಸ್ಕ್ ಒಳಗೊಂಡಿದೆ.

ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ.4.60 ಲಕ್ಷ

ಡುಯಲ್-ಚಾನಲ್ ಎಬಿಎಸ್ ಆಯ್ಕೆಯಾಗಿ ನೀಡಲಾಗಿದೆ. ವರ್ಸಿಸ್-ಎಕ್ಸ್ 300 ಬೈಕಿನ 17 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವು ಪ್ರವಾಸಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿ ಇದೆ ಎನ್ನಬಹುದು.

ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ.4.60 ಲಕ್ಷ

ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್, ಹೊಸ ಶಾಖ ನಿರ್ವಹಣಾ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ದೂರ ಸವಾರಿಯಲ್ಲಿ ಬಿಸಿ ಗಾಳಿಯನ್ನು ಹೊರಹಾಕುತ್ತದೆ ಮತ್ತು ಹೆಚ್ಚಿನ ತಾಪಮಾನವನ್ನು ಕಡಿಮೆಗೊಳಿಸಿ ಆರಾಮದಾಯಕ ಸವಾರಿಗೆ ಕಾರಣವಾಗುತ್ತದೆ.

ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ.4.60 ಲಕ್ಷ

ಕವಾಸಕಿ ವರ್ಸಿಸ್-ಎಕ್ಸ್ 300 ಬೈಕನ್ನು ಸಿಕೆಡಿ(ಸಂಪೂರ್ಣವಾಗಿ ನಾಕ್ ಡೌನ್) ಮೂಲಕ ಭಾರತಕ್ಕೆ ತರಲಾಗುತ್ತದೆ ಮತ್ತು ಈ ಬೈಕನ್ನು ಪುಣೆಯ ಚಾಕನ್ ಉತ್ಪಾದನಾ ಘಟಕದಲ್ಲಿ ಜೋಡಿಸಲಾಗುತ್ತದೆ. ಈಗಾಗಲೇ ಈ ಹೊಸ ಮೋಟಾರ್ ಸೈಕಲ್ ಬುಕಿಂಗ್ ಮುಕ್ತವಾಗಿದೆ ಮತ್ತು ದೇಶಾದ್ಯಂತ ಇರುವಂತಹ ಕವಾಸಕಿ ವಿತರಕರಲ್ಲಿ ಬುಕ್ ಮಾಡಬಹುದಾಗಿದೆ.

English summary
India Kawasaki Motors has launched its entry-level adventure motorcycle, the Versys-X 300 in the country.
Story first published: Monday, November 27, 2017, 15:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark