ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 200 ಡ್ಯೂಕ್: ಭಾರತದಲ್ಲಿ ಬಿಡುಗಡೆಗೆ ಕ್ಷಣಗಣನೆ

Written By:

ಆಸ್ಟ್ರಿಯನ್ ಪ್ರಮುಖ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಕೆಟಿಎಂ, 2017ರ ನೂತನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಇದೇ ಫೆಬ್ರವರಿ 23ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 200 ಡ್ಯೂಕ್ ಬಿಡುಗಡೆಗೊಳ್ಳಲಿದ್ದು, ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆದಿದೆ.

ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 200 ಡ್ಯೂಕ್: ಭಾರತದಲ್ಲಿ ಬಿಡುಗಡೆಗೆ ಕ್ಷಣಗಣನೆ

ನೂತನ ಮಾದರಿಯ ಕೆಟಿಎಂ 390 ಡ್ಯೂಕ್ ಮತ್ತು 200 ಡ್ಯೂಕ್ ಫೆಬ್ರವರಿ 23ಕ್ಕೆ ಮಾರುಕಟ್ಟೆ ಲಗ್ಗೆಯಿಡಲಿರುವುದು ಖಚಿತವಾಗಿದೆ. ಹೀಗಾಗಿ ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಸಿದ್ಧಗೊಂಡಿರುವ ನೂತನ ಮಾದರಿಗಳುಟೆಸ್ಟಿಂಗ್ ನಡೆಸಿವೆ. ಹೀಗೆ ಪರೀಕ್ಷಾರ್ಥ ವೇಳೆ 200 ಡ್ಯೂಕ್ ಕಾಣಿಸಿಕೊಂಡಿದ್ದು, ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 200 ಡ್ಯೂಕ್: ಭಾರತದಲ್ಲಿ ಬಿಡುಗಡೆಗೆ ಕ್ಷಣಗಣನೆ

ಕೆಟಿಎಂ 200 ಡ್ಯೂಕ್ ಅನ್ನು ಪರೀಕ್ಷಾರ್ಥ ವೇಳೆ ಸೆರೆ ಹಿಡಿದಿರುವುದರಿಂದ ಹೊಸ ಆವೃತ್ತಿ ಬಗೆಗಿನ ಕುತೂಹಲತಕ್ಕೆ ತೆರೆಬಿದ್ದಿದೆ. ಸೆರೆಸಿಕ್ಕಿರುವ ಚಿತ್ರಗಳ ಪ್ರಕಾರ ಡ್ಯೂಕ್ 200 ಹೊಸ ವೈಶಿಷ್ಟ್ಯತೆಗಳೊಂದಿಗೆ ಸಿದ್ಧಗೊಂಡಿದ್ದು, ಫೆಬ್ರವರಿ 23ಕ್ಕೆ ಬಿಡುಗಡೆಗೊಳ್ಳಲಿದೆ.

ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 200 ಡ್ಯೂಕ್: ಭಾರತದಲ್ಲಿ ಬಿಡುಗಡೆಗೆ ಕ್ಷಣಗಣನೆ

ಸದ್ಯದ ಮಾಹಿತಿ ಪ್ರಕಾರ 2017ರ ಪುನರಾವರ್ತನೆಯ ಕೆಟಿಎಂ 200 ಡ್ಯೂಕ್‌ ಪ್ರಸ್ತತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಹಳೆಯ ಮಾದರಿಯ ಕೆಲವು ವೈಶಿಷ್ಟ್ಯತೆಗಳನ್ನು ಮುಂದುವರೆಸಲಾಗಿದೆ. ಆದ್ರೆ 200 ಡ್ಯೂಕ್‌ನಲ್ಲಿ ಎಬಿಎಸ್ ಅಳವಡಿಕೆ ಇಲ್ಲ ಎನ್ನಲಾಗುತ್ತಿದೆ.

ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 200 ಡ್ಯೂಕ್: ಭಾರತದಲ್ಲಿ ಬಿಡುಗಡೆಗೆ ಕ್ಷಣಗಣನೆ

ಹೊಸ ಲುಕ್‌ನೊಂದಿಗೆ ಬಿಡುಗಡೆಗೆ ಕಾಯ್ದಿರುವ ಕೆಟಿಎಂ 200 ಡ್ಯೂಕ್ ವಿನ್ಯಾಸ ಗಮನಸೆಳೆಯುತ್ತಿದೆ. ಸೀಟುಗಳು ಮತ್ತು ಇಂಧನ ಟ್ಯಾಂಕ್ ವಿನ್ಯಾಸದಲ್ಲಿ ಮಾರ್ಪಾಡು ತರಲಾಗಿದ್ದು, ಹಿಂಬದಿ ಸೀಟಿನ ವಿನ್ಯಾಸ ಅದ್ಭುತವಾಗಿದೆ. ಇದಲ್ಲದೇ ನೂತನ ಮಾದರಿಯ 200 ಡ್ಯೂಕ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಎಲ್ಇಡಿ ಡಿಎಲ್ಆರ್‌ಎಸ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಅಳವಡಿಸಲಾಗಿದೆ.

ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 200 ಡ್ಯೂಕ್: ಭಾರತದಲ್ಲಿ ಬಿಡುಗಡೆಗೆ ಕ್ಷಣಗಣನೆ

ಕೆಟಿಎಂ 200 ಡ್ಯೂಕ್ ಹೊಸ ಆವೃತ್ತಿ 200ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 25 ಬಿಎಚ್‌ಪಿ ಮತ್ತು 19.2ಎನ್ಎಂ ಟಾರ್ಕ್ ಉತ್ವಾದಿಸುವ ಶಕ್ತಿ ಹೊಂದಿದೆ.

ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 200 ಡ್ಯೂಕ್: ಭಾರತದಲ್ಲಿ ಬಿಡುಗಡೆಗೆ ಕ್ಷಣಗಣನೆ

ಫೆಬ್ರವರಿ 23ಕ್ಕೆ ನೂತನ ಮಾದರಿಯ ಬೈಕ್ ಬಿಡುಗಡೆಗೊಳ್ಳಲಿದ್ದು, ಅಂದು ಎಲ್ಲಾ ಕುತೂಹಲಗಳಿಗೆ ಉತ್ತರ ಸಿಗಲಿದೆ. ಕೆಟಿಎಂ ಡ್ಯೂಕ್ ಬಿಡುಗಡೆಯಂದು ಬೈಕ್ ಪ್ರಿಯರಿಗಾಗಿ ಡ್ರೈವ್‌ಸ್ಪಾರ್ಕ್, ಸ್ಪೆಷಲ್ ರಿರ್ಪೋಟ್ ಪ್ರಕಟಿಸಲಿದ್ದು ತಪ್ಪದೇ ಓದಿ.

ಫೆಬ್ರವರಿ 23ಕ್ಕೆ ಬಿಡುಗಡೆಗೊಳ್ಳಲಿರುವ ಕೆಟಿಎಂ 390 ಡ್ಯೂಕ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿ ಕ್ಲಿಕ್ ಮಾಡಿ.

English summary
The 2017 iteration of the smallest KTM motorcycle in India, the Duke 200 has been spotted testing in India ahead of its launch with minor cosmetic updates.
Please Wait while comments are loading...

Latest Photos