ಅಂತಿಮ ಸ್ವರೂಪ ಪಡೆದ ಇಂಡಿಯನ್ ಮೋಟಾರ್ ಸೈಕಲ್; ಭಾರತದಲ್ಲಿ ಇನ್ನು ಇದರದ್ದೇ ಹವಾ..!

Written By:

ಪೊಲರಿಸ್ ಅಧೀನದಲ್ಲಿರುವ ಅಮೆರಿಕಾದ ಐಕಾನಿಕ್ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಇಂಡಿಯನ್, ತನ್ನ ಮಾರಾಟ ಜಾಲವನ್ನು ಭಾರತದಲ್ಲಿ ವಿಸ್ತರಿಸುವ ತವಕದಲ್ಲಿದೆ. ಇದಕ್ಕಾಗಿ ಬೃಹತ್ ಯೋಜನೆ ರೂಪಿಸಿದ್ದು, ವಿತರಕರ ಹುಡುಕಾಟದಲ್ಲಿದೆ.

ಈ ಹಿಂದೆ 2014ರಲ್ಲಿ ಭಾರತೀಯ ಬ್ರಾಂಡ್ ಖರೀದಿಸಿದ್ದ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆ, ಮೊದಲ ಬಾರಿಗೆ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಪರಿಚಯ ಮಾಡಿತ್ತು. ಹತ್ತು ಹಲವು ವೈಶಿಷ್ಟ್ಯತೆಗಳಿಂದಾಗಿ ಕೆಲವೇ ವರ್ಷಗಳಲ್ಲಿ ಸ್ಕೌಟ್ ಸಿಕ್ಸ್ಟಿ ಭಾರತೀಯ ಗ್ರಾಹಕರ ಮನಗೆಲ್ಲುವಲ್ಲಿ ಯಶ್ವಸಿಯಾಗಿತ್ತು.

ಹೀಗಾಗಿಯೇ ಭಾರತೀಯ ಮಾರುಕಟ್ಟೆಯಲ್ಲಿ ತನಗೆ ಭವಿಷ್ಯ ಕಂಡುಕೊಂಡಿರುವ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು, ಇಲ್ಲಿನ ಗ್ರಾಹಕರ ಆದ್ಯತೆ ಮೇರೆಗೆ ವಿವಿಧ ಆವೃತ್ತಿಗಳನ್ನು ಪರಿಚಯಿಸಲು ನಿರ್ಧರಿಸಿದೆ.

ಸದ್ಯದಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಲಭ್ಯವಾಗಲಿರುವ ಇಂಡಿಯನ್ ಮೋಟಾರ್ ಸೈಕಲ್, ಬೇಡಿಕೆಗೆ ತಕ್ಕಂತೆ ತನ್ನ ಎಲ್ಲಾ ಮಾದರಿಗಳನ್ನು ಒದಗಿಸಲು ಸಿದ್ಧಗೊಂಡಿದೆ. ಹೀಗಾಗಿ ಸಾಗರೋತ್ತರಗಳಲ್ಲಿರುವ ತನ್ನ ಮೂಲ ಘಟಕಗಳಿಂದಲೂ ಕೆಲವು ಆವೃತ್ತಿಗಳನ್ನು ಆಮದು ಮಾಡಿಕೊಂಡಿದೆ.

ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಮೂರು ಆವೃತ್ತಿಗಳನ್ನು ಸಿದ್ಧಗೊಳಿಸಿರುವ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು, ಸ್ಪ್ರಿಂಗ್ಪೀಲ್ಡ್, ರೋಡ್ ಮಾಸ್ಟರ್ ಮತ್ತು ದಿ ಸ್ಕೌಟ್ ಮಾದರಿಗಳನ್ನು ಪರಿಚಯಿಸುತ್ತಿದೆ.

ಭಾರತದಲ್ಲೇ ತನ್ನ ಉತ್ಪಾದನೆಯನ್ನು ಶುರುಮಾಡಿರುವ ಇಂಡಿಯನ್ ಮೋಟಾರ್ ಸಂಸ್ಧೆಯು, ಇಚಿಯರ್ ಪೊಲರಿಸ್ ಅಧೀನದಲ್ಲಿ ಉತ್ಪಾದನಾ ಕಾರ್ಯವನ್ನು ಚುರುಕುಗೊಳಿಸಿದೆ. ರಾಜಸ್ತಾನದ ಜೈಪುರದಲ್ಲಿರುವ ಈ ಉತ್ಪಾದನಾ ಘಟಕವು ವಾರ್ಷಿಕವಾಗಿ 60 ಸಾವಿರ ಬೈಕ್ ಉತ್ಪಾದನೆಯ ಗುರಿ ಹೊಂದಿದೆ.

ಇನ್ನು ಬೆಲೆಗಳ ಕುರಿತಾಗಿ ನಿಖರ ದರಪಟ್ಟಿ ಸಿದ್ಧಗೊಳಿಸಿರದ ಇಂಡಿಯನ್ ಮೋಟಾರ್ ಸಂಸ್ಥೆ, ಭಾರತೀಯ ಗ್ರಾಹಕರನ್ನು ಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಅಲ್ಲದೇ ಈ ಹಿಂದಿನ ಭಾರತೀಯ ಆವೃತ್ತಿಯ ಬೆಲೆ ಎಕ್ಸ್‌ಶೋರಂ ಪ್ರಕಾರ  ರೂ.11.99 ಲಕ್ಷಕ್ಕೆ ಲಭ್ಯವಿತ್ತು. 

ಭಾರತದಲ್ಲಿ ಬಿಡುಗಡೆಗೊಳ್ಳಲು ಕಾಯ್ದಿರುವ ಕೆಟಿಎಂ 250 ಡ್ಯೂಕ್ ಬೈಕ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Polaris is looking to expand its dealerships footprint and planning to assemble the Indian motorcycles in the country itself.
Story first published: Thursday, February 23, 2017, 11:41 [IST]
Please Wait while comments are loading...

Latest Photos