ಮುಂದಿನ ತಲೆಮಾರಿನ ಟಿವಿಎಸ್ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

Written By:

ಪರೀಕ್ಷೆ ವೇಳೆ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳನ್ನು ಯುಟ್ಯೂಬ್ ಚಾನೆಲ್ ಒಂದು ಸೆರೆ ಹಿಡಿದಿದ್ದು, ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಮುಂದಿನ ತಲೆಮಾರಿನ ಟಿವಿಎಸ್ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

160ಸಿಸಿ ಮೋಟಾರ್‌ಸೈಕಲ್ ವಿಭಾಗವು ಭಾರತದಲ್ಲಿ ಇತ್ತೀಚಿಗೆ ಬಹಳ ಜನಪ್ರಿಯವಾಗಿದೆ. ಈ ವಿಭಾಗಕ್ಕೆ ಮತ್ತೊಂದು ಸೇರ್ಪಡೆ ಅಪಾಚೆ ಆರ್‌ಟಿಆರ್ 160 ಎನ್ನಬಹುದು. ಹೌದು, ಇನ್ನು ಬಿಡುಗಡೆಗೊಳ್ಳದ ಈ ಬೈಕಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ.

ಮುಂದಿನ ತಲೆಮಾರಿನ ಟಿವಿಎಸ್ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಚಿತ್ರಗಳನ್ನು ಗಮನಿಸಿದರೆ, ಹೊಸ ಆರ್‌ಟಿಆರ್ 160 ಬೈಕ್ ತನ್ನ ಅತಿದೊಡ್ಡ ಸಹೋದರ ಎಂದೇ ಕರೆಸಿಕೊಳ್ಳುವ ಅಪಾಚೆ 200 4ವಿ ಬೈಕಿನ ವಿನ್ಯಾಸವನ್ನು ಅನುಕರಣೆ ಮಾಡಿದೆ ಎನ್ನವುದು ತಿಳಿದು ಬರುತ್ತದೆ.

ಮುಂದಿನ ತಲೆಮಾರಿನ ಟಿವಿಎಸ್ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಹೊಸ ಪೀಳಿಗೆಯ ಅಪಾಚೆ ಆರ್‌ಟಿಆರ್ 160 ಬೈಕ್, ಮೊನೊ ಸಸ್ಪೆನ್‌ಷನ್, ಎಲ್ಇಡಿ ಟೈಲ್ ದೀಪಗಳು ಮತ್ತು ಡಿಜಿಟಲ್ ಸಲಕರಣೆ ಕ್ಲಸ್ಟರ್ ಪಡೆದುಕೊಂಡಿದೆ.

ಮುಂದಿನ ತಲೆಮಾರಿನ ಟಿವಿಎಸ್ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಸದ್ಯ ಟ್ರೆಂಡಿಂಗ್ ಇರುವಂತಹ 160ಸಿಸಿ ವಿಭಾಗದ ಕಡೆ ಹೆಚ್ಚು ಗಮನಹರಿಸಿರುವ ಪ್ರತಿಯೊಂದು ವಾಹನ ತಯಾರಿಕಾ ಸಂಸ್ಥೆಗಳು, ತಮ್ಮ ಹೊಸ ಆವೃತ್ತಿಯ ಬೈಕುಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಇದಕ್ಕೆ ಹೊಸ ಸೇರ್ಪಡೆ ಟಿವಿಎಸ್.

ಮುಂದಿನ ತಲೆಮಾರಿನ ಟಿವಿಎಸ್ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಅಪಾಚೆ 200 ಬೈಕಿನಲ್ಲಿ ಇರುವಂತಹ ಎರಡು ಡಿಸ್ಕ್ ಬ್ರೇಕ್‌ಗಳ ಬದಲಾಗಿ, ಈ ಬೈಕ್ ಕೇವಲ ಮುಂಭಾಗದಲ್ಲಿ ಮಾತ್ರ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಹೊಂದಿದೆ.

ಮುಂದಿನ ತಲೆಮಾರಿನ ಟಿವಿಎಸ್ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಹೊಸ ಅಪಾಚೆ ಆರ್‌ಟಿಆರ್ 160 ಬೈಕ್ ಮಾದರಿಯಲ್ಲಿ ವಿಭಜನೆಗೊಂಡ ಸೀಟ್ ಇರಲಿದ್ದು, ತನ್ನ ಪ್ರತಿಸ್ಪರ್ಧಿಗಳ ಜೊತೆ ಸ್ಪರ್ಧಿಸಲು ಹೆಚ್ಚು ಶಕ್ತಿ ಪಡೆದುಕೊಳ್ಳುವಂತೆ ಬೈಕಿನ ವಿನ್ಯಾಸ ಮಾಡಲಾಗಿದೆ.

Read more on ಟಿವಿಎಸ್ tvs
English summary
TVS is also jumping into the scene with a new model. Yes, the next-gen Apache RTR 160 has been spotted testing by a Youtube channel.
Story first published: Monday, July 10, 2017, 18:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark