ಟಿವಿಎಸ್ ಅಪಾಚಿ ಆರ್‌ಆರ್ 310ಎಸ್‌ನಿಂದ ಮತ್ತೆ ಸ್ಪಾಟ್ ಟೆಸ್ಟಿಂಗ್-ಹೊಸ ಬೈಕ್ ಬಿಡುಗಡೆಗೆ ದಿನಗಣನೆ..!!

Written By:

ಸೂಪರ್ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಅಪಾಚಿ ಆರ್‌ಆರ್ 310ಎಸ್ ಆವೃತ್ತಿಯು ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮತ್ತೊಮ್ಮೆ ಸ್ಟಾಟ್ ಟೆಸ್ಟಿಂಗ್ ಕೈಗೊಂಡಿರುವ ಟಿವಿಎಸ್ ಸಂಸ್ಥೆಯು ವರ್ಷಾಂತ್ಯಕ್ಕೆ ಹೊಸ ಬೈಕ್ ಪರಿಚಯಿಸುವ ತವಕದಲ್ಲಿದೆ.

To Follow DriveSpark On Facebook, Click The Like Button
ಟಿವಿಎಸ್ ಅಪಾಚಿ ಆರ್‌ಆರ್ 310ಎಸ್‌ನಿಂದ ಮತ್ತೆ ಸ್ಪಾಟ್ ಟೆಸ್ಟಿಂಗ್..!!

ಈ ಹಿಂದೆಯೂ ಅಪಾಚಿ ಆರ್‌ಆರ್ 310ಎಸ್‌ ಹೊಸ ಬೈಕ್ ಸ್ಪಾಟ್ ಟೆಸ್ಟಿಂಗ್ ನಡೆಸಿದ್ದ ಟಿವಿಎಸ್, ಇದೀಗ ಮತ್ತೆ ಸ್ಪಾಟ್ ಟೆಸ್ಟಿಂಗ್ ನಡೆಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ವರದಿಗಳ ಪ್ರಕಾರ ವರ್ಷದ ಅಂತ್ಯಕ್ಕೆ ಹೊಸ ಬೈಕ್ ಬಿಡುಗಡೆ ಖಚಿತ ಎನ್ನಲಾಗಿದೆ.

ಟಿವಿಎಸ್ ಅಪಾಚಿ ಆರ್‌ಆರ್ 310ಎಸ್‌ನಿಂದ ಮತ್ತೆ ಸ್ಪಾಟ್ ಟೆಸ್ಟಿಂಗ್..!!

ಸ್ಪಾಟ್ ಟೆಸ್ಟಿಂಗ್ ವೇಳೆ ಅಪಾಚಿ ಆರ್‌ಆರ್ 310ಎಸ್‌ ರಹಸ್ಯ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ಹೊಸ ಬೈಕ್ ವೈಶಿಷ್ಟ್ಯತೆಗಳನ್ನು ವಿನ್ಯಾಸಗೊಳಿಸಿರುವುದು ಕಂಡುಬಂದಿದೆ.

Recommended Video
TVS Jupiter Classic Launched In India | In Kannada - DriveSpark ಕನ್ನಡ
ಟಿವಿಎಸ್ ಅಪಾಚಿ ಆರ್‌ಆರ್ 310ಎಸ್‌ನಿಂದ ಮತ್ತೆ ಸ್ಪಾಟ್ ಟೆಸ್ಟಿಂಗ್..!!

ಇದಲ್ಲದೇ ಬಿಎಂಡಬ್ಲ್ಯು ಮೋಟಾರ್ಡ್ ಜೊತೆಗೆ ಕೈಜೋಡಿರುವ ಟಿವಿಎಸ್ ಸಂಸ್ಥೆಯು ಬಿಎಂಡಬ್ಲ್ಯು ಪ್ರೇರಿತ ಕೆಲವು ತಂತ್ರಜ್ಞಾನಗಳನ್ನು ಅಪಾಚಿ ಆರ್‌ಆರ್ 310ಎಸ್‌ ಅಳವಡಿಸಿರುವ ಬಗ್ಗೆ ಮಾಹಿತಿ ಇದ್ದು, ಎಂಜಿನ್, ಫ್ರೋಕ್ಸ್, ಬ್ರೇಕ್, ಫ್ರೇಮ್ ಮತ್ತು ಕಂಟ್ರೋಲ್ ವಿಭಾಗದಲ್ಲಿ ಬದಲಾವಣೆ ತರಲಾಗಿದೆ.

ಟಿವಿಎಸ್ ಅಪಾಚಿ ಆರ್‌ಆರ್ 310ಎಸ್‌ನಿಂದ ಮತ್ತೆ ಸ್ಪಾಟ್ ಟೆಸ್ಟಿಂಗ್..!!

ಹೀಗಾಗಿ ಟಿವಿಎಸ್ ಜೊತೆಗೂಡಿ ಭಾರತದಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿರುವ ಬಿಎಂಡಬ್ಲ್ಯು ನಿರ್ಮಾಣದ ಜಿ 310 ಆರ್ ಬೈಕ್ ಹೋಲಿಕೆಯನ್ನೇ ಅಪಾಚಿ ಆರ್‌ಆರ್ 310ಎಸ್‌ ಕೂಡಾ ಪಡೆದುಕೊಂಡಿದ್ದು, ಸೂಪರ್ ಬೈಕ್ ಆವೃತ್ತಿಗಳಲ್ಲೇ ವಿಭಿನ್ನತೆ ಹೊಂದಿದೆ.

ಟಿವಿಎಸ್ ಅಪಾಚಿ ಆರ್‌ಆರ್ 310ಎಸ್‌ನಿಂದ ಮತ್ತೆ ಸ್ಪಾಟ್ ಟೆಸ್ಟಿಂಗ್..!!

ಎಂಜಿನ್ ಸಾಮರ್ಥ್ಯ

ಬಿಎಂಡಬ್ಲ್ಯು ಜಿ 310 ಆರ್ ಮಾದರಿಯಲ್ಲೇ ಅಪಾಚಿ ಆರ್‌ಆರ್ 310ಎಸ್‌ ಕೂಡಾ 310ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 34-ಬಿಎಚ್ ಪಿ ಹಾಗೂ 28-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಒದಗಿಸಲಾಗಿದೆ.

ಟಿವಿಎಸ್ ಅಪಾಚಿ ಆರ್‌ಆರ್ 310ಎಸ್‌ನಿಂದ ಮತ್ತೆ ಸ್ಪಾಟ್ ಟೆಸ್ಟಿಂಗ್..!!

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಡ್ಯುಯಲ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಸ್ಪ್ಲಿಟ್ ಸೀಟುಗಳು, ಡಿಜೀಟಲ್ ಇನ್ಟ್ರುಮೆಂಟ್ ಕ್ಲಸ್ಟರ್, ಎಬಿಎಸ್ ತಂತ್ರಜ್ಞಾನವನ್ನು ಹೊಸ ಬೈಕ್ ಆವೃತ್ತಿಯಲ್ಲಿ ಅಳವಡಿಸಲಾಗಿದೆ.

English summary
Read in Kannada about TVS Apache RR 310S Spotted Again in India.
Story first published: Saturday, September 16, 2017, 11:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark