ಹೊಸ ಬಣ್ಣದೊಂದಿಗೆ ಬಿಡುಗಡೆಯಾದ ಟಿವಿಎಸ್ ಅಪಾಚಿ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 180

Written By:

ಮಧ್ಯಮ ಗಾತ್ರದ ಸೂಪರ್ ಬೈಕ್ ಶೈಲಿಯನ್ನು ಹೊಂದಿರುವ ಟಿವಿಎಸ್ ‌ಅಪಾಚಿ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 180 ಬೈಕ್ ಶ್ರೇಣಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮ್ಯಾಟೆ ರೆಡ್ ಬಣ್ಣದಲ್ಲಿ ಬಿಡುಗಡೆಯಾಗಿದ್ದು, ಹೊಸ ಬೈಕ್ ಶ್ರೇಣಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೊಸ ಬಣ್ಣದಲ್ಲಿ ಲಭ್ಯ ಟಿವಿಎಸ್ ಅಪಾಚಿ ಆರ್‌ಟಿಆರ್160, ಆರ್‌ಟಿಆರ್180

ಆರ್‌ಟಿಆರ್ 160 ಮತ್ತು ಆರ್‌ಟಿಆರ್ 180 ಬೈಕ್ ಶ್ರೇಣಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿರುವ ಟಿವಿಎಸ್ ಸಂಸ್ಥೆಯು ಮ್ಯಾಟೆ ರೆಡ್ ಬಣ್ಣವನ್ನು ಪರಿಚಯಿಸಿದ್ದು, ಎಂಜಿನ್ ವಿಭಾಗದಲ್ಲಿನ ವೈಶಿಷ್ಟ್ಯತೆಗಳಲ್ಲಿ ಯಾವುದೇ ಬದಲಾವಣೆ ತಂದಿಲ್ಲ.

ಹೊಸ ಬಣ್ಣದಲ್ಲಿ ಲಭ್ಯ ಟಿವಿಎಸ್ ಅಪಾಚಿ ಆರ್‌ಟಿಆರ್160, ಆರ್‌ಟಿಆರ್180

ಹೀಗಾಗಿ ಬೆಲೆಗಳು ಬದಲಾಗಿಲ್ಲವಾದರೂ ಆರ್‌ಟಿಆರ್ 160 ಬೆಲೆಯನ್ನು ರೂ.77,865ಕ್ಕೆ ಹಾಗೂ ಹಿಂಬದಿಯ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯ ಹೊಂದಿರುವ ಆವೃತ್ತಿಗೆ ರೂ.80,833 ಮತ್ತು ಆರ್‌ಟಿಆರ್ 180ರ ಬೆಲೆಯನ್ನು ರೂ.81, 833ಕ್ಕೆ ನಿಗದಿಗೊಳಿಸಲಾಗಿದೆ.

ಹೊಸ ಬಣ್ಣದಲ್ಲಿ ಲಭ್ಯ ಟಿವಿಎಸ್ ಅಪಾಚಿ ಆರ್‌ಟಿಆರ್160, ಆರ್‌ಟಿಆರ್180

ಇನ್ನು ಆರ್‌ಟಿಆರ್ 200 ಮಾದರಿಯೂ ಈಗಾಗಲೇ ಮ್ಯಾಟೆ ರೆಡ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಟಿವಿಎಸ್ ಯಶಸ್ವಿಯಾಗಿದೆ. ಇದೇ ಉದ್ದೇಶದಿಂದ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 180 ಮಾದರಿಗಳನ್ನು ಜನಪ್ರಿಯಗೊಳಿಸಲು ಹೊಸ ಬಣ್ಣದ ಆಯ್ಕೆಯನ್ನು ನೀಡಲಾಗಿದೆ.

ಹೊಸ ಬಣ್ಣದಲ್ಲಿ ಲಭ್ಯ ಟಿವಿಎಸ್ ಅಪಾಚಿ ಆರ್‌ಟಿಆರ್160, ಆರ್‌ಟಿಆರ್180

ಆದ್ರೆ ಎಬಿಎಸ್(ಆ್ಯಂಟಿ ಬ್ರೇಕ್ ಸಿಸ್ಟಂ) ಹೊಂದಿರುವ ಆರ್‌ಟಿಆರ್ 180 ಮಾದರಿಯಲ್ಲಿ ಯಾವುದೇ ಹೊಸ ಬಣ್ಣದ ಪರಿಚಯಿಸದ ಟಿವಿಎಸ್ ಸಂಸ್ಥೆಯು ಈ ಹಿಂದಿನ ಬ್ಲ್ಯಾಕ್ ಮ್ಯಾಟೆ ಬಣ್ಣವನ್ನೇ ಮುಂದುವರಿಸಿದ್ದು, ಮುಂಬರುವ ದಿನಗಳಲ್ಲಿ ಮ್ಯಾಟೆ ರೆಡ್ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಹೊಸ ಬಣ್ಣದಲ್ಲಿ ಲಭ್ಯ ಟಿವಿಎಸ್ ಅಪಾಚಿ ಆರ್‌ಟಿಆರ್160, ಆರ್‌ಟಿಆರ್180

ಎಂಜಿನ್ ಸಾಮರ್ಥ್ಯ

ಈ ಹಿಂದೆ ಒದಗಿಸಲಾಗಿದ್ದ ಎಂಜಿನ್ ಮಾದರಿಗಳೆ ಹೊಸ ಆವೃತ್ತಿಯಲ್ಲೂ ಮುಂದವರಿಸಲಾಗಿದ್ದು, ಆರ್‌ಟಿಆರ್ 160 ಮಾದರಿಯು 159.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಮೂಲಕ 15.2-ಬಿಎಚ್‌ಪಿ, 13.1-ಎನ್ಎಂಟಾರ್ಕ್ ಉತ್ಪಾದರೆ ಆರ್‌ಟಿಆರ್ 180 ಮಾದರಿಯು 177.4-ಸಿಸಿ ಸಿಂಗಲ್ ಸಿಲಿಂಡರ್ ಮೂಲಕ 17.03-ಬಿಎಚ್‌ಪಿ, 15.5-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಬಣ್ಣದಲ್ಲಿ ಲಭ್ಯ ಟಿವಿಎಸ್ ಅಪಾಚಿ ಆರ್‌ಟಿಆರ್160, ಆರ್‌ಟಿಆರ್180

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮ್ಯಾಟೆ ರೆಡ್ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಈ ಹಿಂದಿನ ಆಯ್ಕೆಯಲ್ಲಿನ ಎಲ್ಲಾ ವೈಶಿಷ್ಟ್ಯತೆಗಳನ್ನು ಹೊಸ ಆಯ್ಕೆಯಲ್ಲೂ ಮುಂದುವರಿಸಲಾಗಿದ್ದು, ಹೊಸ ಬಣ್ಣದ ವಿನ್ಯಾಸದಿಂದ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 180 ಮತ್ತಷ್ಟು ಜನಪ್ರಿಯತೆ ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

Read more on ಟಿವಿಎಸ್ tvs
English summary
Read in Kannada about TVS Apache RTR 160 And 180 Matte Red Variant Launched In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark