ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗೆ ಆಸಕ್ತಿ ತೋರಿದ ಟಿವಿಎಸ್

Written By:

ಟಿವಿಎಸ್ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕರು ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಿ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗೆ ಆಸಕ್ತಿ ತೋರಿದ ಟಿವಿಎಸ್

ಭಾರತೀಯ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಟಿವಿಎಸ್ ಮೋಟರ್ಸ್ ತನ್ನ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ವಾಹನಗಳನ್ನು ಪರಿಚಯಿಸುವ ಬಗ್ಗೆ ತನ್ನ ಯೋಜನೆಯ ಪ್ರಕಟಿಸಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗೆ ಆಸಕ್ತಿ ತೋರಿದ ಟಿವಿಎಸ್

ಚೆನ್ನೈ ಮೂಲದ ಟಿವಿಎಸ್ ಕಂಪೆನಿ ಮುಂಬರುವ ದಿನಗಳಲ್ಲಿ ಪರಿಸರ ಸ್ನೇಹಿ ವಿದ್ಯುತ ಚಾಲಿತ ದ್ವಿಚಕ್ರ ವಾಹನಗಳನ್ನು ಉತ್ಪಾದನೆಯ ಕಡೆ ಹೆಚ್ಚು ಗಮನಕೊಡುವ ಒಳ್ಳೆಯ ನಿರ್ಧಾರವನ್ನು ಕೈಗೊಂಡಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗೆ ಆಸಕ್ತಿ ತೋರಿದ ಟಿವಿಎಸ್

"ವಿದ್ಯುತ್ ವಿಭಾಗದಲ್ಲಿ ಸಂಸ್ಥೆಯು ಹೆಚ್ಚು ಆಸಕ್ತವಾಗಿದೆ" ಎಂದು ಟಿವಿಎಸ್ ಕಂಪನಿಯ (ಮಾರ್ಕೆಟಿಂಗ್) ಕಮ್ಯೂಟರ್ ಮೋಟಾರ್ ಸೈಕಲ್, ಸ್ಕೂಟರ್ ಮತ್ತು ಕಾರ್ಪೊರೇಟ್ ಬ್ರ್ಯಾಂಡ್‌ನ ಉಪಾಧ್ಯಕ್ಷರಾದ ಅನಿರುದ್ಧ ಹಲ್ಡಾರ್ ಹೇಳಿದರು.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗೆ ಆಸಕ್ತಿ ತೋರಿದ ಟಿವಿಎಸ್

ಭವಿಷ್ಯದ ಇಂಧನ ಎಂದೇ ಕರೆಸಿಕೊಳ್ಳುವ ವಿದ್ಯುತ್‌ನಿಂದ ಚಾಲನೆ ಆಗುವಂತಹ ವಾಹನಗಳ ಕಡೆಗೆ ವಾಹನ ತಯಾರಕ ಸಂಸ್ಥೆಗಳು ಇತ್ತೀಚೆಗೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗೆ ಆಸಕ್ತಿ ತೋರಿದ ಟಿವಿಎಸ್

ಅನಿರುದ್ಧ ಹಲ್ಡಾರ್ ಅವರು ವಿದ್ಯುತ್ ವಾಹನದ ತಯಾರಿಕೆಯ ಬಗ್ಗೆ ಮಾತ್ರ ಮಾಹಿತಿ ನೀಡಿದ್ದು, ಕಂಪನಿಯ ಉತ್ಪನ್ನಗಳ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ, ಟಿವಿಎಸ್ ಕಂಪನಿಯು ವಿದ್ಯುತ್ ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಎರಡನ್ನೂ ಒಂದೇ ಬಾರಿ ಪರಿಚಯಿಸಲಿದೆ ಎನ್ನಲಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗೆ ಆಸಕ್ತಿ ತೋರಿದ ಟಿವಿಎಸ್

ಪ್ರಸ್ತುತ, ಹೀರೊ ಎಲೆಕ್ಟ್ರಿಕ್ ಮತ್ತು ಲೋಹಿಯಾ ಕಂಪನಿಗಳು ಮಾತ್ರ ವಿದ್ಯುತ್ ದ್ವಿಚಕ್ರ ವಾಹನ ವಿಭಾಗದಲ್ಲಿ ಸಕ್ರಿಯವಾಗಿದ್ದು, ಬಜಾಜ್ ಆಟೊ ತನ್ನ ಹೊಸ 'ಅರ್ಬನೈಟ್' ಎಂಬ ಎಲೆಕ್ಟ್ರಾನಿಕ್ ಬ್ರಾಂಡ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ.

English summary
Indian two-wheeler manufacturer TVS Motor Company is in the process of developing electric two-wheelers and plans to introduce them in the Indian market.
Story first published: Monday, September 18, 2017, 13:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark