20 ಲಕ್ಷಕ್ಕೆ ತಲುಪಿದ ಟಿವಿಎಸ್ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ

Written By:

ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ನಗರಪ್ರದೇಶದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟಿವಿಎಸ್ ಜೂಪಿಟರ್ ಸ್ಕೂಟರ್‌ಗಳು ಮಾರಾಟದಲ್ಲಿ ಮುನ್ನುಗ್ಗುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ 20 ಲಕ್ಷಕ್ಕೆ ತಲುಪಿದೆ.

20 ಲಕ್ಷ ತಲುಪಿದ ಟಿವಿಎಸ್ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ

ಈ ಹಿಂದೆ 2013ರಲ್ಲಿ ಬಿಡುಗಡೆಯಾಗಿದ್ದ ಜೂಪಿಟರ್ ಸ್ಕೂಟರ್‌ಗಳು ಕಾಲಾಂತರದಲ್ಲಿ ಹೊಸ ಆವೃತ್ತಿಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವುದು ಮಾರಾಟ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.

20 ಲಕ್ಷ ತಲುಪಿದ ಟಿವಿಎಸ್ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ

ಇನ್ನು ಕಳೆದ 2015ರಲ್ಲಿ ಹೊಸ ಜೂಪಿಟರ್ ಆವೃತ್ತಿ ಬಿಡುಗಡೆಯಾದ ನಂತರ ಸ್ಕೂಟರ್ ಮಾರಾಟ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದ್ದು, ಕೇವಲ 25 ತಿಂಗಳ ಅವಧಿಯಲ್ಲಿ 10 ಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ಮಾರಾಟ ಮಾಡಿರುವುದು ಟಿವಿಎಸ್ ಹೆಗ್ಗಳಿಕೆಯಾಗಿದೆ.

20 ಲಕ್ಷ ತಲುಪಿದ ಟಿವಿಎಸ್ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ

110ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ ಜೂಪಿಟರ್ ಸ್ಕೂಟರ್‌ಗಳು 7.8-ಬಿಎಚ್‌ಪಿ ಹಾಗೂ 8-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, ಉತ್ತಮ ಇಂಧನ ಕಾರ್ಯಕ್ಷಮತೆ ನೀಡುವ ಮೂಲಕ ನಗರ ಪ್ರದೇಶದ ಜನತೆಯನ್ನು ಸೆಳೆಯಲ್ಲಿ ಯಶಸ್ವಿಯಾಗಿವೆ.

20 ಲಕ್ಷ ತಲುಪಿದ ಟಿವಿಎಸ್ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ

ಇದರ ಜೊತೆಗೆ ಟಿವಿಎಸ್ ವಿಶೇಷ ಎಂಜಿನ್ ಸಾಧನವಾದ ಇಕ್ನೋ ಮೀಟರ್ ಅನ್ನು ಜೂಪಿಟರ್ ಸ್ಕೂಟರ್‌ಗಳಲ್ಲೂ ಅಳವಡಿಕೆ ಇದ್ದು, ಇದರಿಂದ ಇಕೋ ಮೂಡ್ ಮತ್ತು ಪವರ್ ಮೂಡ್ ಆಯ್ಕೆಯೊಂದಿಗೆ ಸ್ಕೂಟರ್ ಸವಾರಿ ಮಾಡುವ ಅವಕಾಶ ಕಲ್ಪಿಸಲಾಗಿದೆ.

20 ಲಕ್ಷ ತಲುಪಿದ ಟಿವಿಎಸ್ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ

ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನ ವ್ಯವಸ್ಥೆಯು ಜೂಪಿಟರ್ ಸ್ಕೂಟರ್ ಆಯ್ಕೆಗೆ ಅತ್ಯತ್ತಮವಾಗಿದ್ದು, ಇಕೋ ಮೂಡ್ ಸೌಲಭ್ಯದಿಂದ ಅನಗತ್ಯ ಇಂಧನ ನಷ್ಟಕ್ಕೆ ಕಡಿವಾಣ ಹಾಕಬಹುದಾಗಿದೆ.

20 ಲಕ್ಷ ತಲುಪಿದ ಟಿವಿಎಸ್ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ

ಜೊತೆಗೆ ಗ್ರಾಹಕರ ಬೇಡಿಕೆ ಅನುಗುಣವಾಗಿ ವಿವಿಧ ಬಣ್ಣಗಳಲ್ಲಿ ಜೂಪಿಟರ್ ಸ್ಕೂಟರ್‌ಗಳು ಲಭ್ಯವಿದ್ದು, ರಾಯಲ್ ವೈನ್, ಮ್ಯಾಟೆ ಬ್ಲೂ, ಸ್ಟಾಲಿನ್ ಬ್ರೌನ್, ಟೈಟಾನಿಯಂ ಗ್ರೇ, ಮಿಡ್ ನೈಟ್ ಬ್ಲ್ಯಾಕ್, ವಲ್ಕನೋ ರೆಡ್, ಪ್ರಿಸ್ಟೈನ್ ವೈಟ್, ಜಡೆ ಗ್ರೀನ್ ಮತ್ತು ಮೈಸ್ಟಿಕ್ ಗೋಲ್ಡ್ ಆಯ್ಕೆ ಮಾಡಬಹುದಾಗಿದೆ.

20 ಲಕ್ಷ ತಲುಪಿದ ಟಿವಿಎಸ್ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ

ಹೀಗಾಗಿಯೇ ಜೂಪಿಟರ್ ಸ್ಕೂಟರ್ ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮಾರಾಟ ಪ್ರಮಾಣ 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

English summary
Read in Kannada about TVS Jupiter Crosses Two Million Sales Mark In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark