ಬಿಎಸ್-4 ಎಂಜಿನ್ ಟಿವಿಎಸ್ ಸ್ಪೋರ್ಟ್ಸ್ 2017 ಬೈಕ್ ಬಿಡುಗಡೆ: ವಿವರ ಇಲ್ಲಿದೆ
ಟಿವಿಎಸ್ ಮೋಟಾರ್ ಕಂಪೆನಿ, ಬಿಎಸ್-4 ಎಂಜಿನ್ ಮತ್ತು ಸ್ವಯಂಚಾಲಿತ ಹೆಡ್ ಲೈಟ್ ಗುಣಲಕ್ಷಣಗಳನ್ನು ಹೊಂದಿರುವ ಸ್ಪೋರ್ಟ್ಸ್ 2017 ಬೈಕನ್ನು ಬಿಡುಗಡೆಗೊಳಿಸಿದೆ.
ಬಿಎಸ್-4 ಎಂಜಿನ್ ಮತ್ತು ಸ್ವಯಂಚಾಲಿತ ಹೆಡ್ ಲೈಟ್ ಗುಣಲಕ್ಷಣಗಳನ್ನು ಹೊಂದಿರುವ ಸ್ಪೋರ್ಟ್ಸ್ 2017 ದ್ವಿಚಕ್ರ ವಾಹನವನ್ನು ಟಿವಿಎಸ್ ಮೋಟಾರ್ ಕಂಪೆನಿ ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಭಾರತೀಯ ದ್ವಿಚಕ್ರ ತಯಾರಕ ಸಂಸ್ಥೆ ಟಿವಿಎಸ್ ಮೋಟಾರ್ ಕಂಪೆನಿ, ಬಿಎಸ್-4 ಎಂಜಿನ್ ಮತ್ತು 35 ವ್ಯಾಟ್ ಎಎಚ್ಓ ಆಯ್ಕೆ ಹೊಂದಿರುವ ಟಿವಿಎಸ್ ಸ್ಪೋರ್ಟ್ಸ್ 2017 ಬೈಕನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಹೊಸದಾಗಿ ಬಿಡುಗಡೆಗೊಂಡಿರುವ ಈ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಎಂದಿನಂತೆ ಈ ಬೈಕ್ 4-ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, ಹಿಂದಿನ ಮಾದರಿಗೆ ಹೋಲಿಸಿದರೆ ತಾಂತ್ರಿಕ ವಿಚಾರದಲ್ಲಿ ಹೆಚ್ಚು ಆಧುನಿಕತೆ ಅಳವಡಿಸಿಕೊಂಡಿದೆ.

ಕಿಕ್ ಸ್ಟಾರ್ಟ್ ಮತ್ತು ಸ್ಪೋಕ್ಸ್ ಹೊಂದಿರುವ ಟಿವಿಎಸ್ ಸ್ಪೋರ್ಟ್ಸ್ 2017 ಬೈಕಿನ ಬೆಲೆ 37,580 (ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಇನ್ನು ಇದೇ ಟಿವಿಎಸ್ ಸ್ಪೋರ್ಟ್ಸ್ 2017 ಸೆಲ್ಫ್ ಸ್ಟಾರ್ಟ್ ಮತ್ತು ಅಲಾಯ್ ವೀಲ್ ಪಡೆದ ಮತ್ತೊಂದು ಮಾದರಿ ಬೈಕಿನ ಬೆಲೆ ರೂ. 46,924 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಟಿವಿಎಸ್ ಮೋಟರ್ಸ್ ಹೊಸದಾಗಿ ಬಿಡುಗಡೆಗೊಳಿಸಿರುವ ಈ ಸ್ಪೋರ್ಟ್ಸ್ 2017 ಬೈಕ್ ಏಳು ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ.

ಈ ಬೈಕ್ ಬ್ಲಾಕ್ ಸಿಲ್ವರ್, ಇಂಡಿಗೋ ಸ್ಟ್ರೀಕ್, ಮರ್ಕ್ಯುರಿ ಗ್ರೇ, ಬ್ಲಾಜ್ ರೆಡ್, ವಾಲ್ಕೆನೊ ರೆಡ್, ಢಾಝ್ಲಿಂಗ್ ವೈಟ್ ಮತ್ತು ಎಲೆಕ್ಟ್ರಿಕ್ ಗ್ರೀನ್ ಎಂಬ ಏಳು ಬಣ್ಣಗಳಲ್ಲಿ ಬಿಡುಗಡೆಗೊಂಡಿದ್ದು, ನಿಮಗೆ ಬೇಕಾದ ಬಣ್ಣವನ್ನು ಆಯ್ದುಕೊಳ್ಳಬಹುದಾಗಿದೆ.

ಸದ್ಯ ಬಿಡುಗಡೆಗೊಂಡಿರುವ ಈ ಟಿವಿಎಸ್ ಸ್ಪೋರ್ಟ್ಸ್ ಬೈಕ್ 99.77 ಸಿಸಿ 4 ಸ್ಟ್ರೋಕ್ ಡ್ಯೂರಾಲೈಫ್ ಎಂಜಿನ್ ಪಡೆದುಕೊಂಡಿದ್ದು, 7.8 ತಿರುಗುಬಲದಲ್ಲಿ 7.7 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಈ ಸ್ಪೋರ್ಟ್ಸ್ ಮೋಟಾರ್ ಸೈಕಲ್ ಮುಂಭಾಗದಲ್ಲಿ ಟೆಲೆಸ್ಕೋಪಿಕ್ ಫಾರ್ಕ್ಸ್ ಹೊಂದಿದ್ದು, ಬೈಕಿನ ಹಿಂಭಾಗದಲ್ಲಿ ಟ್ವಿನ್ ಸಸ್ಪೆನ್‌ಷನ್ ಪಡೆದುಕೊಂಡಿದೆ. ಇನ್ನು ಈ ಬೈಕಿನ ಮುಂಭಾಗದ ಡ್ರಮ್ ಬ್ರೇಕ್ 130 ಎಂಎಂ ಇದ್ದು, ಹಿಂಭಾಗದ ಡ್ರಮ್ ಬ್ರೇಕ್ 110 ಎಂಎಂ ಹೊಂದಿದೆ.


Click it and Unblock the Notifications








