ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್-ಟೋನ್ ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 50,534

Written By:

ಟಿವಿಎಸ್ ಮೋಟಾರ್ ಕಂಪೆನಿಯು ಸ್ಟಾರ್ ಸಿಟಿ ಪ್ಲಸ್ ಬೈಕಿನ ಹೊಸ ಡ್ಯುಯಲ್-ಟೋನ್ ಬಣ್ಣ ರೂಪಾಂತರವನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಈ ಬೈಕ್ ರೂ.50,534 ಎಕ್ಸ್ ಷೋರೂಂ(ದೆಹಲಿ)ಬೆಲೆ ಪಡೆದುಕೊಂಡಿದೆ.

To Follow DriveSpark On Facebook, Click The Like Button
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್-ಟೋನ್ ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 50,534

ಸ್ಟಾರ್ ಸಿಟಿ ಪ್ಲಸ್ ಮೋಟಾರ್ ಸೈಕಲ್‌ನ ಹೊಸ ರೂಪಾಂತರವು ನವೀನ ಗ್ರಾಫಿಕ್ಸ್ ಮತ್ತು ಹೊಚ್ಚ ಹೊಸ ಕಪ್ಪು ಮತ್ತು ಕೆಂಪು ಬಣ್ಣದ ಸಂಯೋಜನೆಯನ್ನು ಹೊಂದಿದೆ. ಸದ್ಯದರಲ್ಲಿಯೇ ಭಾರತದಲ್ಲಿ ಹಬ್ಬದ ಋತು ಶುರುವಾಗಲಿದ್ದು, ಇದನ್ನು ಗಮನದಲ್ಲಿಟ್ಟುಕೊಡು ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ನವೀಕರಿಸಲಾಗಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್-ಟೋನ್ ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 50,534

ಅಂದಗೊಂಡು ಬಿಡುಗಡೆಯೆಯಾಗಿರುವ ಈ ಬೈಕ್ ಡ್ಯುಯಲ್-ಟೋನ್ ಬಣ್ಣಗಳು, 3ಡಿ ಕ್ರೋಮ್ ಲೇಬಲ್, ಬ್ಲ್ಯಾಕ್ ಔಟ್ ಗ್ರ್ಯಾಬ್ ರೈಲ್ ಮತ್ತು ಕೆಲವು ಕಾಸ್ಮೆಟಿಕ್ ಬದಲಾವಣೆಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್-ಟೋನ್ ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 50,534

ಸ್ಟಾರ್ ಸಿಟಿ ಪ್ಲಸ್ ಮೋಟಾರ್ ಸೈಕಲ್‌ Ecothrust 109.19 ಸಿಸಿ ಎಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಿದ್ದು, 8.7 ಎನ್‌ಎಂ ತಿರುಗುಬಲದಲ್ಲಿ 8.3ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ. ಮತ್ತು ಗರಿಷ್ಠ 83 ಕಿ.ಮೀ ವೇಗವನ್ನು ಪಡೆದುಕೊಂಡಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್-ಟೋನ್ ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 50,534

ಸ್ಟಾರ್ ಸಿಟಿ ಪ್ಲಸ್ ಬೈಕ್ ಸಾಮಾನ್ಯ ಮಾದರಿಯಂತೆಯೇ ಇದ್ದು, ಕೊಂಚ ಮಟ್ಟಿನ ಬದಲಾವಣೆಗಳನ್ನು ಪಡೆದುಕೊಂಡಿದ್ದು, 4-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಮೋಟಾರ್ ಸೈಕಲ್ ಲಿಟರಿಗೆ 86 ಕಿ.ಮೀ ಇಂಧನ ದಕ್ಷತೆಯನ್ನು ನೀಡುತ್ತದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್-ಟೋನ್ ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 50,534

ಟಿವಿಎಸ್ ಕಂಪನಿಯ ಈ ಭರವಸೆಯ ಬೈಕ್, ಆಟೋ ಹೆಡ್‌ಲ್ಯಾಂಪ್ ಆನ್(ಎಎಚ್ಒ), ಡಿಜಿ-ಅನಾಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಂದಿಸಬಹುದಾದ ಹಿಂಭಾಗದ ರಿಯರ್ ಶಾಕ್ ಅಬ್ಸರ್ಬ್‌ಗಳು, ಟ್ಯೂಬ್‌ಲೆಸ್ ಟೈರುಗಳು ಮತ್ತು ಹನಿಕಾಂಬ್ ವಿನ್ಯಾಸ ಪಡೆದ ಸೈಡ್ ಪ್ಯಾನೆಲ್‍ಗಳನ್ನು ಒಳಗೊಂಡಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್-ಟೋನ್ ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 50,534

ಮುಂಬರುವ ಹಬ್ಬದ ಋತುವಿನಲ್ಲಿ ಟಿವಿಎಸ್ ಕಂಪನಿಯು,ಹೊಸ ಡ್ಯುಯಲ್ ಟೋನ್ ರೂಪಾಂತರದ ಸ್ಟಾರ್ ಸಿಟಿ ಪ್ಲಸ್ ಪರಿಚಯಿಸಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸೊಗಸಾದ ವಿನ್ಯಾಸ ಮತ್ತು ವೈಶಿಷ್ಟ್ಯ ಪಡೆದ ಈ ಬೈಕನ್ನು ಗ್ರಾಹಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Read more on ಟಿವಿಎಸ್ tvs
English summary
TVS Motor Company has launched a new dual-tone colour variant of the Star City Plus in India at a price tag of Rs 50,534 ex-showroom (Delhi).
Please Wait while comments are loading...

Latest Photos