ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

Written By: Staff

ನಾವು ತಮಿಳುನಾಡಿನಲ್ಲಿದ್ದೆವು. ಚಿತ್ರಕಲೆಗೆ, ಅದ್ಭುತವಾದ ದೇವಾಲಯಗಳಿಗೆ ತವರೂರಾದ ತಂಜಾವೂರನ್ನು ಸುತ್ತಾಡಲು ತೀರ್ಮಾನಿಸಿದ್ದೆವು. ಆ ರಾಜ್ಯದ ಅಪರೂಪಗಳಿವು. ಪೊಂಗಲ್ ಹಬ್ಬ ಆ ನಗರವನ್ನು ಸುತ್ತಾಡಲು ನಾವು ಆಯ್ದುಕೊಂಡ ಸಂದರ್ಭ. ಸಂಕ್ರಾಂತಿ ಸಂಭ್ರಮಾಚರಣೆ ವೇಳೆ ತಮಿಳುನಾಡು ಸುತ್ತಾಡಲು ನಿರ್ಧರಿಸಿದೆವು.

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ಪೊಂಗಲ್ ಅರ್ಥಾತ್ ಸಂಕ್ರಾಂತಿಯನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಭೋಗಿ, ಆಗ ಜನರು ಮೇಘಗಳ ರಾಜ ಇಂದ್ರನಿಗೆ ಗೌರವ ಸಲ್ಲಿಸುತ್ತಾರೆ. ಒಳ್ಳೆ ಮಳೆಯಾಗಲಿ ಎಂದು ಪ್ರಾರ್ಥಿಸುತ್ತಾರೆ. ಅದರಿಂದ ಒಳ್ಳೆ ಬೆಳೆಯಾಗಲಿ-ಮನೆಯಲ್ಲಿ ಸಂಪತ್ತು ತುಂಬಲಿ ಎಂದು ಕೇಳಿಕೊಳ್ಳುತ್ತಾರೆ.

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ಭೋಗಿ ಅಚರಣೆಯ ಮತ್ತೊಂದು ವಿಧಾನವಿದೆ. ಮನೆಯಲ್ಲಿರುವ ಹಳೆ-ಬೇಡದಾದ ವಸ್ತುಗಳನ್ನೆಲ್ಲ ಒಂದು ದೊಡ್ಡ ಮರದ ಪೆಟ್ಟಿಗೆಯಲ್ಲಿಟ್ಟು ಸುಡಲಾಗುತ್ತದೆ. ಇದು ನಮಗೆ ಸ್ಕೂಟರ್ ಗಳಲ್ಲಿ ವರ್ಷದಿಂದ ವರ್ಷಕ್ಕೆ ಆಗುತ್ತಿರುವ ಬದಲಾವಣೆಯನ್ನು ನೆನಪಿಸುತ್ತದೆ. ಒಂದು ಕಡೆ ಎಂಜಿನ್ ತೂಕವನ್ನು ಚಾಲಕ ಅಥವಾ ಚಾಲಕಿ ಹೇಗೆ ಸಮತೋಲನ ಮಾಡೋದು ಎಂದು ಯೋಚಿಸುವವರಿಗೆ ಟಿವಿಎಸ್ ವಿಗೋದಲ್ಲಿ ಬಾಡಿ ಬ್ಯಾಲನ್ಸ್ ತಂತ್ರಜ್ಞಾನದ ಹೊಸ ದಾರಿ ಇದೆ.

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ಮರುದಿನ ಪೊಂಗಲ್ ದಿನದ ಮುಖ್ಯ ಆಚರಣೆಯಾಗಿ ಅಕ್ಕಿ ಹಾಗೂ ಹಾಲನ್ನು ಮಡಿಕೆಯಲ್ಲಿಟ್ಟು ಬೇಯಿಸುತ್ತಾರೆ. ಅದನ್ನು ಸೂರ್ಯದೇವನಿಗೆ ಅರ್ಪಿಸಿ ಧನ್ಯವಾದ ಹೇಳುತ್ತಾರೆ. ಈ ಸಾಂಪ್ರದಾಯಿಕ ಆಚರಣೆ ಇಂದಿಗೂ ಇದೆ. ದೊಡ್ಡ ನಗರಗಳಲ್ಲೂ ಮಡಿಕೆಯನ್ನೇ ಅದಕ್ಕಾಗಿ ಬಳಸುತ್ತಾರೆ.

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ಆ ದಿನ ಕಬ್ಬಿಗೂ ಪ್ರಾಮುಖ್ಯ ಇದೆ. ಅದು ನಮಗೆ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ನಮ್ಮ ತಂದೆ ಸ್ಕೂಟರ್ ಗೆ ಹಲವು ಕಬ್ಬಿನ ಜಲ್ಲೆಗಳನ್ನು ಕಟ್ಟಿಕೊಂಡು ಮನೆಗೆ ಬರುತ್ತಿದ್ದ ದಿನಗಳು ಕಣ್ಣಿಗೆ ಕಟ್ಟಿದಂತಾಗುತ್ತದೆ-ಆ ಸಂತೋಷ ಈ ವರೆಗೆ ಹಾಗೇ ಉಳಿದಿದೆ, ಸ್ಕೂಟರ್ ತಂತ್ರಜ್ಞಾನದಲ್ಲಿ ಏನೆಲ್ಲ ಬದಲಾವಣೆ ಆದ ನಂತರವೂ.

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ಸಾಂಪ್ರದಾಯಿಕ ಹಬ್ಬದ ಅಚರಣೆ ನಂತರ ಸ್ಕೂಟರ್ ಏರಿ ಕೋಲಮ್ ಕಲೆಯನ್ನು ಅನುಭವಿಸುವ ಹೊರಡುವ ಸಮಯ. ಮನೆಯ ಹೊರಗೆ ಬಿಳಿ ಬಣ್ಣದಿಂದ ಬಿಡಿಸಿದ ಸುಂದರ ರಂಗೋಲಿ ಕಾಣಿಸುತ್ತದೆ. ಆದರೆ ಈ ಆಧುನಿಕ ದಿನಗಳಲ್ಲಿ ಬಣ್ಣ, ವಿನ್ಯಾಸಗಳ ವಿಚಾರದಲ್ಲಿ ಯಾವ ಮಿತಿಯೂ ಇಲ್ಲ.

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ಡೈರಿ ಉತ್ಪನ್ನಗಳು, ಗೊಬ್ಬರ ನೀಡಿ ಹಾಗೂ ಉಳುಮೆಗೆ ಸಹಾಯ ಮಾಡುವ ಮೂಲಕ ರಾಸುಗಳೇ ಸಂಪತ್ತಿನ ಮೂಲ. ಅವುಗಳ ಅಲಂಕಾರ, ಪೂಜೆಗೆ ಪೊಂಗಲ್ ನ ಮೂರನೇ ದಿನ ಮೀಸಲು. ಅದನ್ನು 'ಮಾಟ್ಟು ಪೊಂಗಲ್' ಅಂತಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದಕ್ಕೂ ಅವುಗಳು ಉಪಯೋಗಕ್ಕೆ ಬರುತ್ತವೆ. ಹೇಗೆ ಟಿವಿಎಸ್ ವಿಗೋ ನಮ್ಮ ಪ್ರಯಾಣವನ್ನು ಸಲೀಸು ಮಾಡುತ್ತದೋ ಹಾಗೆ. ಸಿವಿಟಿಐ ಎಂಜಿನ್ ಗೆ ಒಂದು ಥ್ಯಾಂಕ್ಸ್ ಹೇಳೋಣ.

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ಕಾಣುಮ್ ಪೊಂಗಲ್ ತಮಿಳುನಾಡಿನಲ್ಲಿ ನಾಲ್ಕು ದಿನಗಳ ಸುದೀರ್ಘವಾದ ಹಬ್ಬದಾಚರಣೆಯ ಕೊನೆಯ ಕಂತು. ಆ ದಿನ ಕುಟುಂಬದವರೆಲ್ಲ ಒಟ್ಟಾಗಿ ಸೇರುತ್ತಾರೆ. ಜಮೀನ್ದಾರರು ಉಡುಗೊರೆಗಳನ್ನು ಹಂಚುತ್ತಾರೆ. ಇನ್ನು ಕುಟುಂಬ ಸದಸ್ಯರೆಲ್ಲ ಹತ್ತಿರದ ಜಾಗಗಳಿಗೆ ಒಟ್ಟಾಗಿ ತೆರಳಿ ವರ್ಷದ ಕೆಲಸದ ಪರಿಶ್ರಮವನ್ನೆಲ್ಲ ಮರೆತು, ವಿಶ್ರಾಂತಿ ಪಡೆಯುತ್ತಾರೆ.

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ಈ ದಿನವೇ ಕೆಲವು ಕಾರ್ಯಕ್ರಮಗಳು ಮತ್ತು 'ಜಲ್ಲಿಕಟ್ಟು'ನಂಥ ಆಟಗಳು ನಡೆಯುತ್ತವೆ. ಕೊಬ್ಬಿದ ಎತ್ತುಗಳನ್ನು ಗಂಡಸರು ಪಳಗಿಸುವ ಆಟ ಇದು. ಈ ಆಟದ ಬಗ್ಗೆ ಎಷ್ಟೆಲ್ಲ ಟೀಕೆ-ವಿಮರ್ಶೆಗಳು ಬಂದರೂ ಕಂಗಾಯಂ ಜಾತಿಯ ಎತ್ತುಗಳ ರಕ್ಷಣೆಯ ಉದ್ದೇಶದಿಂದ ಈ ಆಟ ನಡೆದುಕೊಂಡು ಬಂದಿದೆ.

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ಹಬ್ಬದ ಆಚರಣೆಗಳ ಮುಕ್ತಾಯ ಹಂತ ಮಕ್ಕಳಲ್ಲಿ ಬೇಸರ ಮೂಡಿಸುತ್ತದೆ. ರಜಾ ದಿನಗಳು ಮುಗಿದು ಮತ್ತೆ ಶಾಲೆಗೆ ಹೋಗಬೇಕು ಎಂಬ ಬೇಸರ ಮಕ್ಕಳಿಗೆ.

ಆದರೆ, ವಿಗೋದಲ್ಲಿ ಕೂತು ಹೋಗಬಹುದು ಎಂಬ ಕಾರಣಕ್ಕೆ ಆ ಮಕ್ಕಳಲ್ಲಿ ಮತ್ತೆ ಸಂತಸ ಕಾಣುತ್ತದೆ. ಪ್ರತಿ ದಿನದಂತೆಯೇ ಅದು ತನ್ನ ಕೆಲಸ ಮುಂದುವರಿಸುತ್ತದೆ. ಇಡೀ ದಿನ ಶ್ರಮಪಟ್ಟ ನಂತರ ಟಿವಿಎಸ್ ಮೇಲೆ ಕೂತು ಹೋಗುವುದರಿಂದ ಏನನ್ನೋ ಸಾಧಿಸಿದಂತೆ ಭಾಸವಾಗುತ್ತದೆ.

ಆ ಮಕ್ಕಳಂತೆಯೇ ನಮಗೂ ಸಂತೋಷ ಪಡುವುದಕ್ಕೆ ಕಾರಣಗಳಿವೆ. ಮತ್ತು ಹೆಮ್ಮೆಯಿಂದ ಹೇಳೋಣ ಇಲ್ಲಿಂದ #Wego!

Read more on ಟಿವಿಎಸ್ tvs
English summary
Here Wego exploring Tamil Nadu as the state celebrates the festival of harvest, Pongal, on the TVS Wego.
Story first published: Tuesday, January 17, 2017, 19:05 [IST]
Please Wait while comments are loading...

Latest Photos