ವೆಸ್ಪಾ ರೆಡ್ ಸ್ಕೂಟರ್ ಬಿಡುಗಡೆ ಮಾಡುತ್ತಿರುವುದರ ಹಿಂದಿನ ಕಾರಣ ಏನು ಗೊತ್ತಾ?

By Praveen

ವಿಶೇಷ ಹೊರ ವಿನ್ಯಾಸದಿಂದಲೇ ಸ್ಕೂಟರ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರೋ ಪಿಯಾಜಿಯೊ ಸಂಸ್ಥೆಯು ಇದೀಗ ವೆಸ್ಪಾ ರೆಡ್ ಆವೃತ್ತಿಯನ್ನು ಪರಿಚಯಿಸಲು ಮುಂದಾಗಿದ್ದು, ಆಕ್ಟೋಬರ್ 3ಕ್ಕೆ ಹೊಸ ಸ್ಕೂಟರ್ ಆವೃತ್ತಿಯು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ವೆಸ್ಪಾ ರೆಡ್ ಸ್ಕೂಟರ್ ಬಿಡುಗಡೆಯ ಹಿಂದಿನ ಕಾರಣ ಏನು ಗೊತ್ತಾ?

ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಸ್ಕೂಟರ್ ಮಾದರಿಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಇಟಾಲಿಯನ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಪಿಯಾಜಿಯೊ ಇದೀಗ ರೆಡ್ ವೆಸ್ಪಾ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಸಾಮಾಜಿಕ ಕಳಕಳಿ ಕಾರ್ಯಗಳಿಗೆ ಸಹಕಾರಿಯಾಗಲು ಹೊರಟಿದೆ.

ವೆಸ್ಪಾ ರೆಡ್ ಸ್ಕೂಟರ್ ಬಿಡುಗಡೆಯ ಹಿಂದಿನ ಕಾರಣ ಏನು ಗೊತ್ತಾ?

ಅಂದರೆ ರೆಡ್ ಆವೃತ್ತಿಯ ಮಾರಾಟ ಪ್ರಕ್ರಿಯೆ ಮೂಲಕ ಬಂದ ಹಣವನ್ನು ಕ್ಷಯರೋಗ, ಹೆಚ್‌ಐವಿ ಮತ್ತು ಮಲೇರಿಯಾಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದು, ಸರ್ಕಾರೇತರ ಸಂಘಟನೆಯೊಂದರ ಮೂಲಕ ಈ ವಿಶೇಷ ಯೋಜನೆಗೆ ಚಾಲನೆ ನೀಡಿದೆ.

ವೆಸ್ಪಾ ರೆಡ್ ಸ್ಕೂಟರ್ ಬಿಡುಗಡೆಯ ಹಿಂದಿನ ಕಾರಣ ಏನು ಗೊತ್ತಾ?

ಇದರಿಂದ ರೆಡ್ ವೆಸ್ಪಾ ಖರೀದಿಸುವ ಗ್ರಾಹಕರ ಹಣ ನೇರವಾಗಿ ಸಾಮಾಜಿಕ ಶ್ರೇಯೋಭಿವೃದ್ಧಿಗೆ ಬಳಕೆಯಾಗಲಿದ್ದು, ಈ ಹಿನ್ನೆಲೆ ರೆಡ್ ವೆಸ್ಪಾ ಆವೃತ್ತಿಯನ್ನು ಸಾಮಾಜಿಕ ಅಭಿಯಾನ ಯೋಜನೆ ಅಡಿ ಮಾರಾಟ ಪ್ರಕ್ರಿಯೆ ನಡೆಸಲಿದೆ.

ವೆಸ್ಪಾ ರೆಡ್ ಸ್ಕೂಟರ್ ಬಿಡುಗಡೆಯ ಹಿಂದಿನ ಕಾರಣ ಏನು ಗೊತ್ತಾ?

ಹೀಗಾಗಿ ರೆಡ್ ವೆಸ್ಪಾ ಖರೀದಿ ಮಾಡುವ ಆಸಕ್ತ ಗ್ರಾಹಕರು ನಿಗದಿ ಪಡಿಸಿದ ಬೆಲೆ ಹೊರತಾಗಿಯೂ ಹೆಚ್ಚುವರಿ ಮೊತ್ತವನ್ನು ಕೂಡಾ ಪಾವತಿಸಬಹುದಾಗಿದ್ದು, ಇದು ನೇರವಾಗಿ ಬಡಜನರ ಸಹಾಯ ಕಾರ್ಯಗಳಿಗೆ ಬಳಕೆಯಾಗಲಿದೆ.

ವೆಸ್ಪಾ ರೆಡ್ ಸ್ಕೂಟರ್ ಬಿಡುಗಡೆಯ ಹಿಂದಿನ ಕಾರಣ ಏನು ಗೊತ್ತಾ?

ಈ ಮೂಲಕ ರೆಡ್ ವೆಸ್ಪಾ ಮಾರಾಟದಿಂದಲೇ ಜಗತ್ತಿನಾದ್ಯಂತ 450 ಬಿಲಿಯನ್ ಡಾಲರ್ ಹಣ ಸಂಗ್ರಹ ಗುರಿಹೊಂದಲಾಗಿದ್ದು, ಇದಕ್ಕಾಗಿಯೇ ರೆಡ್ ವೆಸ್ಪಾ ಆವೃತ್ತಿಯನ್ನು ಭಾರತ ಅಷ್ಟೇ ಅಲ್ಲದೇ ಜಾಗತಿಕ ಮಾರುಕಟ್ಟೆಯ ಪ್ರಮುಖ ರಾಷ್ಟ್ರಗಳಲ್ಲಿ ರೆಡ್ ವೆಸ್ಪಾವನ್ನು ಬಿಡುಗಡೆಗೊಳಿಸಲಾಗುತ್ತಿದೆ.

ವೆಸ್ಪಾ ರೆಡ್ ಸ್ಕೂಟರ್ ಬಿಡುಗಡೆಯ ಹಿಂದಿನ ಕಾರಣ ಏನು ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆಟೋ ಉದ್ಯಮದ ಮೂಲಕವು ಇಂತದೊಂದು ಸಾಮಾಜಿಕ ಕಾರ್ಯವನ್ನು ಮಾಡಬಹುದೆಂಬುವುದಕ್ಕೆ ಪಿಯಾಜಿಯೋ ಸಂಸ್ಥೆಯೇ ಉದಾಹರಣೆಯಾಗಿದ್ದು, ಬಿಡುಗಡೆಯಾಗಲಿರುವ ರೆಡ್ ವೆಸ್ಪಾ ಆವೃತ್ತಿಯು 125 ಸಿಸಿ ಎಂಜಿನ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

Most Read Articles

Kannada
English summary
Read in Kannada about Vespa RED India Launch Date Revealed.
Story first published: Wednesday, September 27, 2017, 20:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X