ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

Written By: Rahul TS

ದೇಶಿಯ ವಾಹನ ಉದ್ಯಮವು ದಿನದಿಂದ ದಿನಕ್ಕೆ ಹೊಸ ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದ್ದು, ಹೊಸ ದ್ವಿಚಕ್ರ ಉತ್ಪನ್ನಗಳು ಯುವ ಗ್ರಾಹಕರನ್ನೇ ಅಷ್ಟೇ ಎಲ್ಲಾ ವರ್ಗಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಬಿಡುಗಡೆಗಾಗಿ ಸಿದ್ದವಾಗಿರುವ ಹೊಸ ಮಾದರಿಯ ಬೈಕ್ಸ್ ಮತ್ತು ಸ್ಕೂಟರ್‌ಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಸದ್ಯ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಗಳು ನಾ ಮುಂದು ತಾ ಮುಂದು ಅಂತಾ ಒಂದರ ಮೇಲೊಂದು ಹೊಸ ಬಗೆಯ ಬೈಕ್ಸ್ ಮತ್ತು ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುತ್ತಲೇ ಇವೆ. ಅದರಲ್ಲೂ ಕೆಲವು ಬೈಕ್ಸ್ ಮತ್ತು ಸ್ಕೂಟರ್‌ಗಳಂತೂ ಬಿಡುಗಡೆಗೂ ಮುನ್ನವೇ ಗ್ರಾಹಕರಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿವೆ ಎಂದರೇ ತಪ್ಪಾಗಲ್ಲ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಹೋಂಡಾ ಎಕ್ಸ್ ಬ್ಲೇಡ್

ಜನಪ್ರಿಯ ಹೋಂಡಾ ಸಂಸ್ಥೆಯು ತನ್ನ ಹೊಸ ಎಕ್ಸ್ ಬ್ಲೇಡ್ ಮೋಟಾರ್ ಬೈಕ್ ಅನ್ನು ಕಳೆದು ತಿಂಗಳಷ್ಟೇ ಮುಕ್ತಾಯಗೊಂಡ 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದು, 163ಸಿಸಿ ಎಂಜಿನ್‌ನೊಂದಿಗೆ 14-ಬಿಹೆಚ್‍ಪಿ ಮತ್ತು 14-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬೆಲೆ(ಅಂದಾಜು) 79 ಸಾವಿರ

ಬಿಡುಗಡೆ(ಅಂದಾಜು)- ಏಪ್ರಿಲ್ ಅಂತ್ಯಕ್ಕೆ

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಹೋಂಡಾ ಆಕ್ಟೀವಾ 5ಜಿ

ತನ್ನ ಹಳೆಯ ಮಾದರಿಯಾದ ಆಕ್ಟಿವಾ 4ಜಿ ಅನ್ನು ಮುಂದಿನ ಪೀಳಿಗೆಯ ವೈಶಿಷ್ಟ್ಯತೆಗಳೊಂದಿಗೆ ಬಿಡು ಮಾಡುತ್ತಿರುವ ಹೋಂಡಾ ಸಂಸ್ಥೆಯು ಆಕ್ಟಿವಾ 5ಜಿ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಹೊಸ ಎಲ್ಇಡಿ ಹೆಡ್‍ಲ್ಯಾಂಪ್ ಮತ್ತು ಎಲ್ಇಡಿ ಡಿಎಲ್ಆರ್ ನೊಂದಿಗೆ ಇಂಟಿಗ್ರೇಟೆಡ್ ಆಗಿದೆ. ಹೊಸದಾಗಿ ಇದು ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಪಡೆದಿದ್ದು, 110ಸಿಸಿ ಎಂಜಿನ್ 8ಬಿಹೆಚ್‍ಪಿ ಮತ್ತು 9ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬೆಲೆ(ಅಂದಾಜು)- 55 ಸಾವಿರದಿಂದ 60 ಸಾವಿರ

ಬಿಡುಗಡೆ- ಜೂನ್ ಅಥವಾ ಜುಲೈ ಅಂತ್ಯಕ್ಕೆ

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 160

ಅಪಾಚೆ ಆರ್‍‍ಟಿ‍ಆರ್ 160 ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಎಂಟ್ರಿ ಲೆವೆಲ್ ಅಪಾಚಿ ಬೈಕ್ ಇದಾಗಿದೆ. ಬೈಕಿನ ಎಂಜಿನ್ ನಲ್ಲಿ ಯಾವುದೇ ಮಾರ್ಪಾಡುಗಳನ್ನು ಪಡೆದಿಲ್ಲವಾದರು, ಇದೇ ವರ್ಷದಲ್ಲಿ ಬಿಡುಗಡೆಗೊಳ್ಳಲ್ಲಿ ಸಿದ್ದವಾಗಿದೆ. ಅಪಾಚೆ 180 ಗಿಂತಲೂ ಹೊಸ ರೂಪವನ್ನು ಪಡೆದುಕೊಂಡಿದ್ದು, ಅಪ್ಗ್ರೇಡೆಡ್ ಬಣ್ಣವನ್ನು ಪಡೆದಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ತನ್ನ ಕ್ಲಾಸಿಕ್ ಸ್ಟೈಲ್ ಮತ್ತು ಎಂಜಿನ್‌ನಿಂದಲೇ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ರಾಯಲ್ ಎನ್‍‍ಫೀಲ್ಡ್ ತನ್ನ ಹೊಸ ಇಂಟರ್‍‍ಸೆಪ್ಟರ್ ಬೈಕ್ಅನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದ್ದು, ಈ ಬೈಕ್ 650ಸಿಸಿ ಪಾರಲಲ್ ಟ್ವಿನ್, ಲಿಕ್ವಿಡ್ ಕೂಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುತ್ತಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

46ಬಿಹೆಚ್‍ಪಿ ಮತ್ತು 52ಎನ್ಎಂ ಟಾರ್ಕ್ ಉತ್ಪಾದನೆಗೊಳಿಸುವ ಶಕ್ತಿಯನ್ನು ಪಡೆದಿದ್ದು, ಈ ಹಿಂದಿನ ಬೈಕ್ ಮಾದರಿಗಳಿಂತಲೂ ಹೊಸ ಚಾಲನಾ ಅನುಭವ ನೀಡುವ ವಿಶ್ವಾಸದಲ್ಲಿವೆ ಎನ್ನಲಾಗಿದೆ.

ಬೆಲೆ(ಅಂದಾಜು)- 3 ಲಕ್ಷ

ಬಿಡುಗಡೆಯ ದಿನಾಂಕ- 2ನೇ ತ್ರೈಮಾಸಿಕ ಅವಧಿಗೆ

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650

ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಕಾಂಟಿನೆಂಟಲ್ 535 ಬೈಕಿನ ಮುಂದುವರೆದ ಬೈಕ್ ಮಾದರಿ ಆಗಿದ್ದು, ಹಳೆಯ ಮಾದರಿಯ ಎಂಜಿನ್ ಮತ್ತು ವೈಶಿಷ್ಟ್ಯತೆಗಳನ್ನು ಪಡೆದಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಹೋಂಡಾ ಸಿಬಿ ಹಾರ್ನೆಟ್ 160ಆರ್ ಎಬಿಎಸ್

2018ರ ಆಟೋ ಎಕ್ಸ್ ಪೋದಲ್ಲಿ ಮೊದಲಿಗೆ ಹೋಂಡಾ ಸಿಬಿ ಹಾರ್ನೆಟ್ 160ಆರ್ ಎಬಿಎಸ್ ಬೈಕ್ ಪ್ರದರ್ಶನಗೊಂಡಿದ್ದು, ಹೊಸದಾಗಿ ಎಲ್ಇಡಿ ಹೆಡ್‍ಲ್ಯಾಂಪ್ ಮತ್ತು ಸಿಂಗಲ್ ಚಾನೆಲ್ ಎಬಿಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ. ಇದಲ್ಲದೆ ಹೊಸ ಬಣ್ಣಗಳಲ್ಲಿ ಹಾಗೆಯೇ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಹೆಜಾರ್ಡ್ ಇಂಡಿಕೇಟರ್‍‍ಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಸುಜುಕಿ ಇಂಟ್ರೂಡರ್ 155ಎಫ್ಐ

ಸುಜುಕಿ ಸಂಸ್ಥೆಯು ತನ್ನ ಹೊಸ ಇಂಟ್ರೂಡರ್ 155ಎಫ್ಐ ಬೈಕ್ ಅನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಇದೀಗ ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಮಾದರಿಯನ್ನು ಪರಿಚಯಿಸುತ್ತಿದೆ. ಇದು 14.3 ಬಿಹೆಚ್‍ಪಿ ಮತ್ತು 14ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಎಪ್ರಿಲಿಯಾ ಎಸ್ಆರ್ 125 ಸ್ಟೋರ್ಮ್

ಮಾರುಟ್ಟೆಯಲ್ಲಿ 125ಸಿಸಿ ಎಂಜಿನ್ ಹೊಂದಿರುವ ಸ್ಕೂಟರ್‍‍ಗಳ ಬೆಡಿಕೆಯು ಹೆಚ್ಚಾಗಿದ್ದು, ಎಪ್ರಿಲಿಯಾ ಸಂಸ್ಥೆ ತನ್ನ ಹೊಸ ಎಸ್ಆರ್ 125 ಸ್ಟೋರ್ಮ್ ಸ್ಕೂಟರ್ ಅನ್ನು 2018ರ ಆಟೋ ಎಕ್ಸ್‌ಪೋ ಬಿಡುಗಡೆಗೊಳಿಸಿತ್ತು.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಇದೀಗ ಹೊಸ ಸ್ಕೂಟರ್ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಎಸ್ಆರ್ 125 ಸ್ಟೋರ್ಮ್ ಸ್ಕೂಟರ್‌ಗಳು 125ಸಿಸಿ ಎಂಜಿನ್‌ನೊಂದಿಗೆ 9.6 ಪಿಎಸ್ ಮತ್ತು 9.9ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಎಪ್ರಿಲಿಯಾ ಎಸ್ಆರ್ 150

ಗ್ರಾಹಕರಿಗೆ ಕೈಗಟ್ಟುವ ಬೆಲೆಯಲ್ಲಿ ಎಪ್ರಿಲಿಯಾ ಸಂಸ್ಥೆಯು ತನ್ನ ಎಸ್ಆರ್ 150 ಸ್ಕೂಟರ್ ಅನ್ನು ಸಹ 2018ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿದ್ದು, ಮೊಟೋ ಜಿಪಿ ಬೈಕಿನಿಂದ ಸ್ಪೂರ್ತಿ ಪಡೆದಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಇದರ 154.4ಸಿಸಿ 10.26 ಬಿಎಚ್‌ಪಿ ಮತ್ತು 11.4ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಸಿವಿಟಿ ಗೇರ್ ಬಾಕ್ಸ್ ಹೊಂದಿರುವ ಎಪ್ರಿಲಿಯಾ ಸ್ಕೂಟರ್‌ಗಳು ಪ್ರತಿಲೀಟರ್‌ಗೆ 35 ಕಿಲೋ ಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಟಾಪ್ ಬೈಕ್ಸ್ ಮತ್ತು ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ ನೋಡಿ...

ಹೀರೋ ಡ್ಯುಯಟ್ 125

ಹೀರೋ ಸಂಸ್ಥೆಯು 125ಸಿಸಿ ಸ್ಕೂಟರ್ ಗಳ ಬಿಡುಗಡೆ ಬಗ್ಗೆ ಗಮನ ಹರಿಸಿದ್ದು, ಹೊಸದಾಗಿ ಡ್ಯುಯಟ್ 125 ಸ್ಕೂಟರ್ ಅನ್ನು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ನಿರ್ಮಾಣ ಮಾಡಿದೆ. ಇದರ 125ಸಿಸಿ ಎಂಜಿನ್ 8.7ಬಿಹೆಚ್‍ಪಿ ಮತ್ತು 10.2ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದರೊಂದಿದೆ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ ಅನ್ನು ಒದಗಿಸಲಾಗಿದೆ.

Source : cartoq

English summary
2 months, 10 motorcycle & scooter launches.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark