ಪಲ್ಸರ್ ಪ್ರಿಯರಿಗೆ ಸಿಹಿ ಸುದ್ಧಿ - ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ಈ ಹಿಂದೆ ತಮ್ಮ ಪಲ್ಸರ್ ಕ್ಲಾಸಿಕ್ 150 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಬಜಾಜ್ ಸಂಸ್ಥೆಯು ಪಲ್ಸರ್ ಪ್ರಿಯರಿಗೆ ಖುಷಿ ಶುದ್ಧಿಯನ್ನು ನೀಡಿದ್ದು, ಮಾರುಕಟ್ಟೆಯಲ್ಲಿ ಪಲ್ಸರ್ 150 ಬೈಕ್ ಅನ್ನು ಇದೀಗ ಮೂರು ಬಣ್ಣಗಳಲ್ಲಿ ಬಿಡುಗಡೆಗೊಳಿಸಿ ಖರೀದಿಸಬಹುದಾದ ಆಯ್ಕೆಯನ್ನು ನೀಡಿದೆ.

ಪಲ್ಸರ್ ಪ್ರಿಯರಿಗೆ ಸಿಹಿ ಸುದ್ಧಿ - ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್

ಬಿಡುಗಡೆಗೊಂಡ 2019ರ ಹೊಸ ಬಜಾಜ್ ಪಲ್ಸರ 150 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 64,998 ಸಾವಿರದ ಬೆಲೆಯನ್ನು ಪಡೆದುಕೊಂಡಿದ್ದು, ನಿಯಾನ್ ಕಲೆಕ್ಷನ್ ಬಣ್ಣಗಳನ್ನು ಪಡೆದು, ಹೊಸ ಗ್ರಾಫಿಕ್ಸ್ ಮತ್ತು ಹೊಸ ಬಣ್ಣಗಳನ್ನು ಹೊತ್ತು ಬಿಡುಗಡೆಗೊಂಡಿದೆ ಎನ್ನಲಾಗಿದೆ.

ಪಲ್ಸರ್ ಪ್ರಿಯರಿಗೆ ಸಿಹಿ ಸುದ್ಧಿ - ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್

ಹೊಸ ನಿಯಾನ್ ಕಲೆಕ್ಷನ್ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕಿನ ಬೇಸ್ ವೇರಿಯಂಟ್‍‍ನಲ್ಲಿ ಮಾತ್ರ ಲಬ್ಯವಿರಲಿದ್ದು, ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಹೋಂಡಾ ಸಿಬಿ ಯುನಿಕಾರ್ನ್ 150, ಹೀರೋ ಅಚೀವರ್ 150, ಯಮಹಾ ಎಸ್‍ಜೆಡ್-ಆರ್‍ಆರ್ ಮತ್ತು ಇನ್ನಿತರೆ 150ಸಿಸಿ ಎಂಟ್ರಿ ಲೆವೆಲ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

ಪಲ್ಸರ್ ಪ್ರಿಯರಿಗೆ ಸಿಹಿ ಸುದ್ಧಿ - ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್

ಹೊಸ ಬಜಾಜ್ ಪಲ್ಸರ್ 150 ನಿಯಾನ್ ಸಿರೀಸ್ ಬೈಕ್ ನಿಯಾನ್ ರೆಡ್, ನಿಯಾನ್ ಎಲ್ಲೊ ಮತ್ತು ಮೇಟ್ ಬ್ಲಾಕ್ ಎಂಬ ಮೂರು ಹೊಸ ಪೆಯಿಂಟ್ ಸ್ಕೀಮ್‍ನ ಆಯ್ಕೆಯಲ್ಲಿ ಇದೀಗ ಖರೀದಿಗೆ ಲಭ್ಯವಿದೆ.

ಪಲ್ಸರ್ ಪ್ರಿಯರಿಗೆ ಸಿಹಿ ಸುದ್ಧಿ - ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್

ಈ ಹೊಸ ಮೂರು ಬಣ್ಣಗಳನ್ನು ನೀವು ಹೊಸ ಬಜಾಜ್ ಪಲ್ಸರ್ ಬೈಕಿನ ಹೆಡ್‍‍ಲ್ಯಾಂಪ್‍ನ ಮೇಲೆ, ಪಲ್ಸರ್ ಲೋಗೊ, ರೊಯರ್ ಗ್ರಾಬ್ ರೈಲ್, ಸೈಡ್ ಪ್ಯಾನಲ್ ಮೆಶ್ ಮತ್ತು ಹಿಂಭಾಗದಲ್ಲಿ 3ಡಿ ಚಿಹ್ನೆಯನ್ನು ಪಡೆದುಕೊಂಡಿದ್ದು, ಇನ್ನು ಮೆಟ್ ಬ್ಲಾಕ್ ಬಣ್ಣದ ಬೈಕ್ ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಪಡೆದುಕೊಂಡಿದೆ.

ಪಲ್ಸರ್ ಪ್ರಿಯರಿಗೆ ಸಿಹಿ ಸುದ್ಧಿ - ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್

ಎಂಜಿನ್ ಸಾಮರ್ಥ್ಯ

ತಾಂತ್ರಿಕವಾಗಿ ಹೊಸದಾಗಿ ಬಿಡುಗಡೆಗೊಂಡ ಬಜಜ್ ಪಲ್ಸರ್ 150 ಬೈಕ್ ಯಾವುದೇ ಬದಲಾವಣೇಗಳನ್ನು ಪಡೆದುಕೊಂಡಿರುವುದಿಲ್ಲವಾಗಿದ್ದು, 149ಸಿಸಿ ಸಿಂಗಲ್ ಸಿಲೆಂಡರ್ ಡಿಟಿಎಸ್ಐ ಎಂಜಿನ್ ಸಹಾಯದಿಂದ 13.8 ಬಿಹೆಚ್‍ಪಿ ಮತ್ತು 13.4 ಎನ್ಎಮ್ ಟಾರ್ಕ್ ಅನ್ನು ಉತ್ಪದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಪಲ್ಸರ್ ಪ್ರಿಯರಿಗೆ ಸಿಹಿ ಸುದ್ಧಿ - ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್

ಇದಲ್ಲದೇ ಹೊಸ ಬಜಾಜ್ ಪಲ್ಸರ್ 150 ಬೈಕ್‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲಿ ಟ್ವಿನ್ ಶಾಕ್ ಅಬ್ಸಾರ್‍‍ಬರ್‍‍ಗಳನ್ನು ಒದಗಿಸಲಾಗಿದ್ದು, ಜೊತೆಗೆ ರೈಡರ್‍‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 240ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 130ಎಂಎಂ ಡ್ರಂ ಬ್ರೇಕ್‍ಗಳನ್ನು ನೀಡಲಾಗುತ್ತಿದೆ.

ಪಲ್ಸರ್ ಪ್ರಿಯರಿಗೆ ಸಿಹಿ ಸುದ್ಧಿ - ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್

ಬೆಲೆ (ಎಕ್ಸ್ ಶೋರಂ)

ಡಿಲ್ಲಿ - ರೂ. 64,998

ಮುಂಬೈ - ರೂ. 65,446

ಪುಣೆ - ರೂ. 65,446

ಬೆಂಗಳೂರು - ರೂ. 66,086

ಕೋಲ್ಕತ್ತಾ - ರೂ. 66,240

ಚೆನ್ನೈ - ರೂ. 66,790

ಪಲ್ಸರ್ ಪ್ರಿಯರಿಗೆ ಸಿಹಿ ಸುದ್ಧಿ - ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್

ಇನ್ನು ಹೊಸ ಬಜಾಜ್ ಪಲ್ಸರ್ 150 ನಿಯಾನ್ ಬಣ್ಣಗಳಲ್ಲಿ ಬಿಡುಗಡೆಯಾದ ಬಗ್ಗೆ ಬಜಾಜ್ ಆಟೋ ಸಂಸ್ಥೆಯ ಅಧ್ಯಕ್ಷರಾದ ಎರಿಕ್ ವಾಸ್ ಅವರು 'ಪಲ್ಸರ್ ಬೈಕ್‍ಗಳು ಸುಮಾರು 17 ವರ್ಷದಿಂದ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ ಎಂದು ಹೇಳಲು ಕಳೆದ ದಿನಗಳ ಹಿಂದೆ 1 ಕೋಟಿಗು ಹೆಚ್ಚು ಪಲ್ಸರ್ ಬೈಕ್‍ಗಳು ಮಾರಾಟಗೊಂಡಿರುವ ನಿಧರ್ಶನವೇ ಸಾಕ್ಷಿ. ಎಂದು ಹೇಳಿಕೊಂಡಿದ್ದಾರೆ.

Most Read Articles

Kannada
English summary
2019 Bajaj Pulsar 150 Launched In India; Priced At ₹ 64,998.
Story first published: Thursday, November 29, 2018, 18:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X