ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಬಿಡುಗಡೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಇಟಾಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥಯಾದ ಎಪ್ರಿಲಿಯಾ ತನ್ನ ಹೊಸ ಸ್ಟ್ರೋಮ್ 125 ಸ್ಕೂಟರ್‌ನ್ನು ಅನಾವರಣಗೊಳಿಸಿತ್ತು.

By Rahul Ts

ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಇಟಾಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥಯಾದ ಎಪ್ರಿಲಿಯಾ ತನ್ನ ಹೊಸ ಸ್ಟ್ರೋಮ್ 125 ಸ್ಕೂಟರ್‌ನ್ನು ಅನಾವರಣಗೊಳಿಸಿದ್ದು, ಜೊತೆಗೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರನ್ನು ಬಿಡುಗಡೆಗೊಳಿಸಿತ್ತು. ಎಪ್ರಿಲಿಯಾ ಎಸ್‍ಆರ್ 125 ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 65,310 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಬಿಡುಗಡೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ಎಪ್ರಿಲಿಯಾ ಸ್ಟೋರ್ಮ್ 125 ಎಸ್‍ಆರ್ 125 ಸ್ಕೂಟರ್‍‍ಗಿಂತ ವಿನ್ಯಾಸದಲ್ಲಿ ವಿಭಿನ್ನತೆಯನ್ನು ಪಡೆದಿದ್ದು, ಮಾಹಿತಿಗಳ ಪ್ರಕಾರ ಈ ಸ್ಕೂಟರ್ 2019ರ ಜನವರಿ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ. ಬಿಡುಗಡೆಯ ವಿಳಂಬಕ್ಕೆ ಹಲವಾರು ಕಾರಣಗಳಿವೆ ಎಂದು ವರದಿ ಹೇಳುತ್ತದೆ.

ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಬಿಡುಗಡೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ಎಪ್ರಿಲಿಯಾ ಸಂಸ್ಥೆಯು ಕೇವಲ ಸ್ಟೋರ್ಮ್ 125 ಸ್ಕೂಟರ್‍‍ನ ಸಿಬಿಎಸ್ ವೇರಿಯಂಟ್ ಅನ್ನು ಮಾತ್ರ ಪರಿಚಯಿಸಲಿದ್ದು, ಸರ್ಕಾರದ ಆದೇಶದ ಪ್ರಕಾರ 125ಸಿಸಿ ವರೆಗಿನ ಎಲ್ಲಾ ಸ್ಕೂಟರ್‍‍ಗಳು ತಪ್ಪದೆ ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್ ಪಡೆದಿರಬೇಕಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಈ ವರ್ಷದ ಕೊನೆಯ ತ್ರೈಮಾಸಿಕ ಅವ್ಧಿಯಲ್ಲಿ ಸಿಬಿಎಸ್‍ ರಹಿತ ವೇರಿಯಂಟ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲಿತ್ತು.

ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಬಿಡುಗಡೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ಕೇಂದ್ರ ಸರ್ಕಾರದ ಆದೇಶವು ಒಮ್ಮೆ ಜಾರಿಗೆ ಬರುವ ಮುನ್ನವೆ ಎಪ್ರಿಲಿಯ ಸಂಸ್ಥೆಯು ಸ್ಟೋರ್ಮ್ 125 ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಸಿಬಿಎಸ್ ಹೊಂದಿದ ನಂತರ ಎಲ್ಲಾ ಸ್ಕೂಟರ್‍‍ಗಳ ಬೆಲೆಯು ಕೊಂಚ ಮಟ್ಟೆಗೆ ಏರಿಕೆಯಾಗಲಿದೆ.

ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಬಿಡುಗಡೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ಸ್ಟೋರ್ಮ್ 125 ಸ್ಕೂಟರ್ ಎಪ್ರಿಲಿಯಾ ಎಸ್‍ಆರ್ 125 ಸ್ಕೂಟರ್‍‍ಗಿಂತ ವಿಭಿನ್ನವಾದ ರೂಪವನ್ನು ಹೊಂದಿದ್ದು, ಹೊಸ ಪೆಯಿಂಟ್ ಸ್ಕೀಮ್, ದೊಡ್ಡ ಅಲಾಯ್ ವ್ಹೀಲ್ಸ್ ಮತ್ತು ಹಿಂಭಾಗದಲ್ಲಿ ಅಗಲವಾದ ಟೈರ್ ಅನ್ನು ಪಡೆದುಕೊಂಡಿದೆ.

ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಬಿಡುಗಡೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ಎಂಜಿನ್ ಸಾಮರ್ಥ್ಯ

ಮಾರುಕಟ್ಟೆಗೆ ಲಗ್ಗೆಯಿಡಲಿರುವ ಎಪ್ರಿಲಿಯಾ 125 ಸ್ಕೂಟರ್ 124ಸಿಸಿ 3 ವೇಲ್ವ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 9.46ಬಿಹೆಚ್‍‍ಪಿ ಮತ್ತು 8.2 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಬಿಡುಗಡೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಮುಂಭಾಗದಲ್ಲಿ 30ಎಮ್ಎಮ್ ಟೆಲಿಸ್ಕೋಪಿಕ್ ಅಪ್‍‍ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಶಾಕ್ ಅಬ್ಸಾರ್ಬರ್ ಅನ್ನು ಪಡೆದೆಕೊಂಡಿದೆ. ದೇಶದಲ್ಲಿನ ಯುವ ಸಮುದಾಯವನ್ನು ಸೆಳೆಯುವ ಎಲ್ಲಾ ಅಂಷಗಳನ್ನು ಈ ಸ್ಕೂಟರ್ ಪಡಿದಿದೆ.

ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಬಿಡುಗಡೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ಸ್ಟೋರ್ಮ್ 125 ಸ್ಕೂಟರ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು, ಈ ಸ್ಕೂಟರಿಗೆ ಬಳಾಸಲಾದ ಮೋಜಿನ ಗ್ರಾಫಿಕ್ಸ್ ಸ್ಕೂಟರಿನ ಲುಕ್ ಅನ್ನು ಹೆಚ್ಚಿಸಿದೆ.

ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್ ಬಿಡುಗಡೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿಡುಗಡೆಗೊಳ್ಳಲಿರುವ ಎಪ್ರಿಲಿಯಾ ಸ್ಟೋರ್ಮ್ 125 ಸ್ಕೂಟರ್‍‍ನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 62,000 ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಗೆ ಒಮ್ಮೆ ಈ ಸ್ಕೂಟರ್ ಲಗ್ಗೆಯಿಟ್ಟಲ್ಲಿ ಟಿವಿಎಸ್ ಎನ್‍‍‍ಟಾರ್ಕ್, ಹೋಂಡಾ ಗ್ರಾಜಿಯಾ ಮತ್ತು ಬಿಡುಗಡೆಗೊಳ್ಳಲಿರುವ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on aprilia scooter
English summary
Aprilia Storm 125 India Launch Details Revealed.
Story first published: Monday, July 9, 2018, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X